ಕರಾವಳಿಯಲ್ಲಿ ಬುಗಿಲೆದ್ದ ಅನ್ಯ ಧರ್ಮದವರೊಂದಿಗೆ ವ್ಯಾಪಾರ ವಹಿವಾಟುಗಳ ನಿಷೇಧ, ಈಗ ಮಲೆನಾಡು ಸಾಗರಕ್ಕೆ ವ್ಯಾಪಿಸುತ್ತಿದೆ. ಹೌದು ಪ್ರಸಿದ್ಧ ದೇವಾಲಯ ಗಳಲ್ಲಿ ಒಂದಾಗಿರುವ ಇತಿಹಾಸ ಪ್ರಸಿದ್ಧ ಗಣಪತಿ ದೇವಸ್ಥಾನದಲ್ಲಿ ಏಪ್ರಿಲ್ 5ರಿಂದ ಜಾತ್ರಾ ಮಹೋತ್ಸವ ನಿಮಿತ್ತ ರಥೋತ್ಸವ ನಡೆಯಲಿದೆ. ಪ್ರಸಿದ್ಧ ದೇವಾಲಯ ಗಳಲ್ಲಿ ಒಂದಾಗಿರುವ ಹಿನ್ನೆಲೆ ಸಾವಿರಾರು ಜನ ಸೇರುವ ನಿರೀಕ್ಷೆಯಿದ್ದು, ಇಲ್ಲಿ ಅನ್ಯ ಧರ್ಮದ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದು ಎಂದು ಈಗಾಗಲೇ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.
ಇದರ ಬೆನ್ನಲ್ಲೇ ಈಗ ಗಣಪತಿ ದೇವಸ್ಥಾನ ಸಾಗರ ಹೆಸರಿನಲ್ಲಿ ಜಾತ್ರೆ ನಡೆಯುವ ಬಾವಿಕಟ್ಟೆ ವೃತ್ತ ಹಾಗೂ ಮಾರಿಕಾಂಬ ಮೈದಾನದಲ್ಲಿ ಬ್ಯಾನರ್ ಹಾಕಿ,ಅನ್ಯ ಧರ್ಮೀಯರಿಗೆ ಇಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಬ್ಯಾನರ್ ಹಾಕಿದ್ದಾರೆ.
ಈ ರೀತಿ ಬ್ಯಾನರ್ ಹಾಕಿರೋದು ಯಾರು ಎಂದು ಇದುವರೆಗೂ ತಿಳಿಯುತ್ತಿಲ್ಲ
0 Comments