ವಿಧಾನಸಭೆ ಕ್ಷೇತ್ರ ಹರಿಹರ 2023.AAP ಪಕ್ಷದ ಅಭ್ಯರ್ಥಿಯಾಗಿ ಪ್ರಮುಖ ಸಮಾಜ ಸೇವಕ ಸ್ಪರ್ಧೆ ಸಾಧ್ಯತೆ!?


ಹರಿಹರ :-ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಇನ್ನು ಒಂದು ವರ್ಷ ಬಾಕಿ ಇದ್ದು ಈಗಾಗಲೇ ಚುನಾವಣಾ ರಾಜಕೀಯ ರಂಗೇರಿದೆ.ಪ್ರಮುಖ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧೆ ಮಾಡಲು ತಾ ಮುಂದು ನಾ ಮುಂದು ಎಂದು ತಮ್ಮ ಇಷ್ಟವಾದ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ .
ಈ ಬಾರಿ ರಾಜ್ಯದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಎಎಪಿ ಪಕ್ಷವು ಸ್ಪರ್ಧೆ ಮಾಡುತ್ತಿದ್ದು ಪಕ್ಷದಿಂದ  ಸ್ಪರ್ಧಾಕಾಂಕ್ಷಿಗಳಾಗಿ ಅನೇಕ ಅಭ್ಯರ್ಥಿಗಳು ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ.

ಹರಿಹರ ವಿಧಾನಸಭಾ ಕ್ಷೇತ್ರದಿಂದ ಎಎಪಿ ಅಭ್ಯರ್ಥಿಯಾಗಿ ತಾಲ್ಲೂಕಿನ ಪ್ರಮುಖ ಸಮಾಜ ಸೇವಕರೊಬ್ಬರು ಸ್ಪರ್ಧೆ ಮಾಡುತ್ತಾರೆ ಎಂಬ ಮಾಹಿತಿ ತಾಲ್ಲೂಕಿನಾದ್ಯಂತ ಹರಿದಾಡುತ್ತಿದ್ದು .ಆ ಅಭ್ಯರ್ಥಿ ಯಾರು ಎಂಬ ಕುತೂಹಲ ಮಾತ್ರ ಬಿಟ್ಟುಕೊಟ್ಟಿಲ್ಲ .

ಆದರೆ ಸಮಾಜ ಸೇವಕರು ತಾಲ್ಲೂಕಿನಾದ್ಯಂತ ಇರುವ ಪ್ರತಿಯೊಬ್ಬರಿಗೂ ಗೊತ್ತಿರುವ ವ್ಯಕ್ತಿ .ಅವರೆ ಮುಂದಿನ ಹರಿಹರ ವಿಧಾನಸಭಾ ಕ್ಷೇತ್ರದಿಂದ ಎಎಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ?ಎಂಬ ಚರ್ಚೆ ತಾಲ್ಲೂಕಿನಾದ್ಯಂತ ಜೋರಾಗಿ ನಡೆಯುತ್ತಿದೆ .

ಇನ್ನು ಚುನಾವಣೆ 1ವರ್ಷ ಬಾಕಿ ಇದ್ದು ಇನ್ನೂ ಯಾರ್ಯಾರು ಯಾವ್ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೋ ಕಾದು ನೋಡಬೇಕಾಗಿದೆ .

Post a Comment

0 Comments