ವೃದ್ದ ದಂಪತಿಗಳನ್ನು ರಕ್ಷಿಸಲು ಹೋಗಿ ನೀರು ಪಾಲಾದ ಯುವಕ!ಸತತ 48 ಗಂಟೆಗಳ ಶೋಧ ಕಾರ್ಯದ ನಂತರ ಶವವಾಗಿ ಪತ್ತೆ.

ವ್ಯಕ್ತಿಯನ್ನು ರಕ್ಷಿಸಲು ಚಾನೆಲ್ ಗೆ ಹಾ


ಅಪರಿಚಿತ ವ್ಯಕ್ತಿಯನ್ನು ರಕ್ಷಿಸಲು ಚಾನೆಲ್ ಗೆ ಹಾರಿದ್ದ ರಿಪ್ಪನ್‌ಪೇಟೆ ಯುವಕನ ಮೃತದೇಹವಾಗಿ ಪತ್ತೆಯಾಗಿದ್ದಾರೆ.
 
ಮಂಗಳವಾರ ಬೆಳಿಗ್ಗೆ ದಾವಣಗೆರೆ ಜಿಲ್ಲೆ ಸಿದ್ದಾಪುರದ ಚಾನಲ್ ಗೆ ಬಿದ್ದು ಸಾಯುತ್ತಿದ್ದ ವೃದ್ದ ದಂಪತಿಗಳನ್ನು ಬದುಕಿಸಬೇಕು ಎಂಬ ಹಂಬಲದಲ್ಲಿ ಚಾನೆಲ್ ಗೆ ಜಿಗಿದು ಬದುಕಿಸುವ ಯತ್ನದಲ್ಲಿ ಈತನು ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಘಟನೆ ನಡೆದಿದೆ.
ರಿಪ್ಪನ್ ಪೇಟೆ ನೆಹರು ಬಡಾವಣೆ ನಿವಾಸಿ ಅನೀದ್ (22) ಮೃತಪಟ್ಟ ಧುರ್ಧೈವಿಯಾಗಿದ್ದಾನೆ.


ಕಳೆದ 48 ಗಂಟೆಗಳಿಂದ ಅಗ್ನಿಶಾಮಕ ದಳ ದವರು ಕಾರ್ಯಾಚರಣೆ ನಡೆಸುತ್ತಿದ್ದರೂ ಯುವಕನ ಶವ ಪತ್ತೆಯಾಗಿರಲಿಲ್ಲ,ಇಂದು ಬೆಳಿಗ್ಗೆ ನೆಲ್ಲೂರು ಸಮೀಪದ ಹಿರೆಮಳಲಿ ಎಂಬ ಗ್ರಾಮದ ಬಳಿ ಯುವಕನ ಮೃತದೇಹ ಪತ್ತೆಯಾಗಿದೆ.

ಈಗ ಮೃತದೇಹವನ್ನು ಚನ್ನಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.ಮೃತನ ಅಂತ್ಯಕ್ರಿಯೆ ಇಂದು ಸಂಜೆ ರಿಪ್ಪನ್ ಪೇಟೆಯ ಖಬರ್ ಸ್ಥಾನ್ ನಲ್ಲಿ ನಡೆಯುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ರಿಪ್ಪನ್ ಪೇಟೇ ನೆಹರು ಬಡಾವಣೆ ನಿವಾಸಿಯಾಗಿದ್ದ ಅನೀದ್ (22) ತನ್ನ ತಾಯಿ ಮತ್ತು ಅಂಗವಿಕಲ ಸಹೋದರ ಮತ್ತು ಅಂಗವಿಕಲ ಸಹೋದರಿಯೊಂದಿಗೆ ಜೀವನ ಸಾಗಿಸುತ್ತಿದ್ದನು.ಮನೆಯಲ್ಲಿ ದುಡಿಯುವ ಯುವಕನೇ ಸಾವನ್ನಪ್ಪಿರುವುದು ಈ ಬಡ ಕುಟುಂಬಕ್ಕೆ ಸಿಡಿಲು ಬಡಿದ ಹಾಗೇ ಆಗಿದೆ.

Post a Comment

0 Comments