ದಾವಣಗೆರೆ ಜಿಮ್ ಟ್ರೈನರ್ ಕೊಲೆ ;48 ಗಂಟೆಯಲ್ಲಿ ಅರೋಪಿಗಳ ಬಂಧನ!!


ವಿಜಯನಗರ:ದಾವಣಗೆರೆಯ ಜಿಮ್ ಟ್ರೈನರ್ ಧನ್ಯಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಅರಸೀಕೆರೆ ಪೋಲೀಸರು ಬಂಧಿಸಿದ್ದಾರೆ.

ನಗರದ ರವಿ, ಮಲ್ಲಿಕಾರ್ಜುನ, ಸುದೀಪ್ ಎಂಬುವ ಮೂವರು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 03 ಮೋಟಾರ್ ಸೈಕಲ್ ಗಳನ್ನು ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿರು ಪೋಲೀಸರು, ತನಿಖೆಯಿಂದ ಇನ್ನೂ ಅನೇಕರು ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದ್ದು ಅವರನ್ನೂ ಕೂಡ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಏಪ್ರಿಲ್ 27ರಂದು ಉಚ್ಚಂಗಿದುರ್ಗದ ಹಾಲಮ್ಮನ ತೋಪಿನಲ್ಲಿ ಊಟಕ್ಕೆ ಕರೆಯಿಸಿಕೊಂಡು, ಊಟ ಮಾಡಿದ ನಂತರ ಮೋಟಾರ್ ಸೈಕಲ್ಲಿನಲ್ಲಿ ಕರೆದುಕೊಂಡು ಬೇವಿನಹಳ್ಳಿ ದೊಡ್ಡ ತಾಂಡದ ಒಂದು ಜಮೀನನ ಹತ್ತಿರ ಧನ್ಯಕುಮಾರನನ್ನು ಮಾರಕ ಅಸ್ತ್ರಗಳಿಂದ ಕೊಲೆ ಮಾಡಿದ್ದರು.

ಧನ್ಯಕುಮಾರ್ ಮತ್ತು ಆರೋಪಿಗಳ ನಡುವೆ ಹಣದ ವ್ಯವಹಾರದ ಸಂಬಂಧವಾಗಿ ಪ್ರಾರಂಭವಾದ ಗಲಾಟೆಯು ನಂತರದಲ್ಲಿ ವೈಶ್ಯಮ್ಯಕ್ಕೆ ತಿರುಗಿ, ದಾವಣಗೆರೆಯ ಒಂದು ರೌಡಿ ಗ್ಯಾಂಗಿಗೆ ಸಹಕರಿಸುತ್ತಿದ್ದಾನೆ ಮತ್ತು ಈತನನ್ನು ಹೀಗೇ ಬಿಟ್ಟರೆ ಧನ್ಯಕುಮಾರನು ಬೆಳೆದುಬಿಡುತ್ತಾನೆ ಎಂಬ ದುರುದ್ದೇಶದಿಂದ ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂದು ಪೋಲಿಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Post a Comment

0 Comments