--------------------
*ಸಾಹಿತ್ಯ ದೀಕ್ಷೆಗೆ*” ಹೆಸರು ನೋಂದಾಯಿಸಿಕೊಳ್ಳಿ :
(108 ಜನರಿಗೆ ಮಾತ್ರ ಅವಕಾಶ)
-----------------------
ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಹರ್ಷ ಐದು ವರ್ಷದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಅದರಲ್ಲಿ ಪ್ರಮುಖವಾಗಿ “ಸಾಹಿತ್ಯ ದೀಕ್ಷೆ” ಕಾರ್ಯಕ್ರಮವು ಪ್ರಮುಖವಾಗಿದೆ, ಮೇ 5ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿಗೆ 108 ವರ್ಷಗಳು ತುಂಬಲಿದ್ದು ಈ ನಿಮಿತ್ತ ಸಾಗರ ತಾಲ್ಲೂಕಿನಲ್ಲಿ *108 ಜನ ಸಾಹಿತ್ಯ, ಸಾಂಸ್ಕೃತಿಕ, ಅಧ್ಯಯನ, ಸಂಘಟನೆಯಲ್ಲಿ ತೊಡಗಿಸಿಕೊಳ್ಳುವವರಿಗೆ “ಸಾಹಿತ್ಯ ದೀಕ್ಷೆ” ಯನ್ನು ನೀಡಲಾಗುವುದು*. ಇದರಲ್ಲಿ ತನ್ನನ್ನು ತಾನೂ ತೊಡಗಿಸಿಕೊಳ್ಳುವ ಕಾರ್ಯವಾಗಿದ್ದು ಇದರಲ್ಲಿ ಆಸಕ್ತಿ ಇರುವವರು ತಮ್ಮ ಹೆಸರು, ಮೊಬೈಲ್ ನಂ ವಿಳಾಸ ಹಾಗೂ ಆಸಕ್ತಿ ಕ್ಷೇತ್ರವನ್ನು ತಿಳಿಸುವುದು *ಪ್ರಮುಖವಾಗಿ 27 ಜನ ಮಕ್ಕಳು, 27 ಜನ ಯುವಕರು, 27 ಜನ ಮಹಿಳೆಯರು ಹಾಗೂ 27 ಜನ ಮಧ್ಯವಯಸ್ಸು ಹಾಗೂ ಹಿರಿಯರಿಗೆ ಆಧ್ಯತೆ ನೀಡಲಾಗಿದ್ದು* ಆಸಕ್ತರು ತಮ್ಮ ಹೆಸರುಗಳನ್ನು *ಏಪ್ರಿಲ್ 25ರೊಳಗೆ* ನೋಂದಾಯಿಸಿಕೊಳ್ಳಲು ಕೋರಿದೆ.
*ಸಾಹಿತ್ಯ ದೀಕ್ಷೆ: ಇದೊಂದು ವಿಶೇಷವಾದ ಪರಿಕಲ್ಪನೆಯಾಗಿದ್ದು ಸಾಕಷ್ಟು ಜನರಿಗೆ ಸಾಹಿತ್ಯ, ಸಾಂಸ್ಕೃತಿಕ, ಅಧ್ಯಯನ, ಸಂಘಟನೆಯಲ್ಲಿ ಆಸಕ್ತಿ ಇದೆ ಆದರೆ ತೊಡಗಿಸಿಕೊಳ್ಳುವುದಿಲ್ಲ, ಈ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವು ನಿಟ್ಟಿನಲ್ಲಿ ಸಾಹಿತ್ಯ ದೀಕ್ಷೆಯನ್ನು ಪಡೆಯುವುದಾಗಿದೆ. ತಾಲ್ಲೂಕು ಹಂತದಲ್ಲಿ 108 ಜನರು ಸಾಹಿತ್ಯ ದೀಕ್ಷೆಯನ್ನು ಪಡೆದುಕೊಂಡರೆ ಅದೊಂದು ದೊಡ್ಡ ಶಕ್ತಿಯಾಗಿ ಬೆಳೆಯಲಿದೆ ಬನ್ನಿ ನಮ್ಮನ್ನು ನಾವು ತೊಡಗಿಸಿಕೊಳ್ಳೊಣ.*
• ದೂರುವ ಬದಲು ದುಡಿಯುವುದನ್ನು ಕಲಿಯೋಣ
• ಮಾತುಗಳು ಕೆಲಸವಾಗದೆ, ಕೆಲಸಗಳು ಮಾತಾಗಲಿ
---------------------
• ವಿ.ಟಿ.ಸ್ವಾಮಿ, ಅಧ್ಯಕ್ಷರು, ಕ.ಸಾ.ಪ, ಸಾಗರ
ಮೊ : 9880871716
• ಜಿ.ನಾಗೇಶ್, ಕಾರ್ಯದರ್ಶಿ, ಕ.ಸಾ.ಪ, ಸಾಗರ
ಮೊ: 9880121758
• ನಾರಾಯಣ ಮೂರ್ತಿ ಕಾರ್ಯದರ್ಶಿ, ಕ.ಸಾ.ಪ,ಸಾಗರ
ಮೊ: 9481255902
• ಲೋಕೇಶ್ ಕುಮಾರ್ ಕೋಶಾಧ್ಯಕ್ಷರು, ಕ.ಸಾ.ಪ ಸಾಗರ
ಮೊ. 9902428952
• ರವಿಕುಮಾರ್ ಬಿ.ಡಿ, ಅಧ್ಯಕ್ಷರು ಕ.ಸಾ.ಪ, ಆನಂದಪುರ ಹೋಬಳಿ ಘಟಕ
ಮೊ: 9482449464
0 Comments