ಸಾಗರ ತಾಲ್ಲೂಕಿನ ಪ್ರದೀಪ್ ಬೆಂಗಳೂರಿನಲ್ಲಿ ಅನುಮಾನಾಸ್ಪದ ಸಾವು!?


ಸಾಗರ:ಸಾಗರ ತಾಲೂಕು ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳ್ಳ ಗ್ರಾಮದ ಪ್ರದೀಪ್ ಬೆಂಗಳೂರಿನಲ್ಲಿ ಇಂದು ಬೆಂಗಳೂರಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ .
ಪ್ರದೀಪ್ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದ್ದು .ಇವರು ಉಳಿದುಕೊಂಡಿರುವ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬ ಅನುಮಾನ ಕಾಡುತ್ತಿದೆ .ಏಕೆಂದರೆ ಮೃತನ ದೇಹದ ಮೇಲೆ ಹಳದಿ ಬಣ್ಣದ ಹಗ್ಗ ಕಂಡು ಬಂದಿರುತ್ತದೆ .

ಸದ್ಯ ಯಶವಂತಪುರದ ಸಿಟಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು  ಪ್ರಕರಣ 305 ಕಾಯಿದೆಯಂತೆ ಅನುಮಾನಾಸ್ಪದ ಸಾವು ಎಂದು ದಾಖಲಾಗಿದೆ .ಪ್ರದೀಪ್ ಅವರ ಸಾವು ಆತ್ಮಹತ್ಯೆಯೋ? ಅಥವಾ ಕೊಲೆಯೋ? ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಾಗಿದೆ.

ಮೃತ ಪ್ರದೀಪನ ದೇಹವನ್ನು ಪೋಸ್ಟ್ ಮಾರ್ಟಮ್ ಮಾಡಲಾಗಿದ್ದು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಪ್ರದೀಪನ ಆತ್ಮಕ್ಕೆ ಶಾಂತಿ ಸಿಗಲಿ, ಪ್ರದೀಪ್ ಅಗಲಿಕೆಯ ನೋವಿನ ದುಃಖವನ್ನ ಭರಿಸುವಂಥ ಶಕ್ತಿ ಕುಟುಂಬವರ್ಗದವರಿಗೆ ಆ ಭಗವಂತ ನೀಡಲೆಂದು ಪ್ರಾರ್ಥಿಸುತ್ತೇನೆ.

ಬದುಕಿ ಬಾಳಬೇಕಾದ  ಯುವಕರು ಈ ರೀತಿ ಸಾವು ಕಾಣುವುದು ಏಕೋ ಮನಸ್ಸಿಗೆ ಬೇಸರ ಉಂಟು ಮಾಡುತ್ತಿದೆ .

Post a Comment

0 Comments