ನಟ ಸುದೀಪ್ ಕಾರ್ಯಕ್ರಮದಲ್ಲಿ ಲೇಡಿ ಪಿಎಸ್ಐ ಜೊತೆ ಅನುಚಿತವಾಗಿ ವರ್ತಿಸಿದ ಹಿನ್ನಲೆ ಯುವಕನನ್ನು ಚೇಸ್ ಮಾಡಿ ಹಿಡಿದು ಲೇಡಿ ಪಿಎಸ್ಐ ಧರ್ಮದೇಟು ನೀಡಿದದ್ದಾರೆ. ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕುರಕುಂದಾ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ನಟ ಸುದೀಪ್ ಬಂದಿದ್ದು, ಅಲ್ಲಿ ಇಂತಹ ಘಟನೆ ಒಂದು ನಡೆದಿದೆ. ಸಿರವಾರ ಪಿಎಸ್ಐ ಗೀತಾಂಜಲಿ ಸೇರಿದಂತೆ ಕೆಲ ಪೊಲೀಸರ ಜೊತೆ ಅನುಚಿತ ವರ್ತನೆ ತೋರಿದ್ದ ಯುವಕನಿಗೆ ಸರಿಯಾದ ಪಾಠ ಕಳಿಸಿದ ಲೇಡಿ ಪಿಎಸ್ಐ. ಪಿಎಸ್ಐ ಜೊತೆ ಅನುಚಿತವಾಗಿ ವರ್ತನೆ ತೋರಿದ್ದಲ್ಲದೇ ಪೊಲೀಸರ ಲಾಠಿ ಕಿತ್ತಿದ್ದ ಎನ್ನಲಾಗ್ತಿದೆ. ಹೀಗಾಗಿ ಪೋಲಿಸರು ಚೇಸ್ ಮಾಡಿ ಯುವಕನನ್ನ ಹಿಡಿದು ಠಾಣೆಗೆ ಎಳೆದೊಯ್ದಿದ್ದಾರೆ.
0 Comments