ಹರಿಹರ :ವಾಲ್ಮೀಕಿ ಸಮಾಜದ ಬಂಧುಗಳ ಶೈಕ್ಷಣಿಕ ಮತ್ತು ಉದ್ಯೋಗ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ನಡೆಸುತ್ತಿರುವ ವಾಲ್ಮೀಕಿ ಶ್ರೀಗಳಾದ ಶ್ರೀ ಶ್ರೀ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳ ಧರಣಿ ಸತ್ಯಾಗ್ರಹ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ .
ನಾನು ಶ್ರೀಗಳೊಂದಿಗೆ ಪ್ರತಿದಿನ ದೂರವಾಣಿ ಸಂಪರ್ಕದಲ್ಲಿದ್ದು ಅವರ ಹೋರಾಟಕ್ಕೆ ಬೆಂಬಲಿಸಿದ್ದೇನೆ .ಬೇಕಿದ್ದರೆ ಶ್ರೀಗಳನ್ನೇ ಕೇಳಿನೋಡಿ ಶ್ರೀಗಳು ನಡೆಸುತ್ತಿರುವುದು ಎಸ್ಟಿ ಎಸ್ಟಿ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಏರಿಸುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ ಅಂದರೆ ಸಮಾಜದ ಬಂಧುಗಳು ಶೈಕ್ಷಣಿಕವಾಗಿ ಔದ್ಯೋಗಿಕವಾಗಿ ಮುಂದುವರಿಯಬೇಕು ಎಂಬ ಸದುದ್ದೇಶವನ್ನು ಇಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ .ಇಂತಹ ಸಮಾಜದ ಅಭಿವೃದ್ದಿಗಾಗಿ ಹೋರಾಡುತ್ತಿರುವ ಶ್ರೀಗಳನ್ನು ಬೆಂಬಲಿಸುವುದು ಸಮಾಜದ ಪ್ರತಿಯೊಬ್ಬ ಬಂಧುವಿನ ಕರ್ತವ್ಯವಾಗಿದೆ .ಅದರಂತೆ ನಾನು ಚಹಾ ಶ್ರೀಗಳ ಧರಣಿ ಸತ್ಯಾಗ್ರಹ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದ್ದೇನೆ ಎಂದು ಈ ಸಂದರ್ಭದಲ್ಲಿ ನಮ್ಮ ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡರು .
0 Comments