ಹಳೆಯ ಹೆಂಡತಿಗೆ ಹೊಸ ಸೀರೆ! ಶೃಂಗಾರಗೊಳ್ಳುತ್ತಿರುವ ಹರಿಹರ ತಾಲ್ಲೂಕು ಪಂಚಾಯತ್!!


ಹರಿಹರ:ಗಾದೆಯ  ಮಾತೊಂದಿದೆ ಹಳೆಯ ಹೆಂಡತಿಗೆ ಹೊಸ ಸೀರೆಯನ್ನು ಉಡಿಸಿ ಜಾತ್ರೆ ತುಂಬಾ ತಿರುಗಾಡಿದ ಭೂಪನ ಕತೆ.ಅದೇ ರೀತಿಯಾಗಿದೆ ಹರಿಹರ ತಾಲ್ಲೂಕು ಪಂಚಾಯ್ತಿಯ ಕತೆ .

ಸರಿ ಸುಮಾರು 13 ಲಕ್ಷ ವೆಚ್ಚದಲ್ಲಿ ತಾಲ್ಲೂಕು ಪಂಚಾಯತ್ ಅನುದಾನದಲ್ಲಿ ನಿರ್ಮಿತಿ ಕೇಂದ್ರದಿಂದ ದುರಸ್ತಿ ಕಾರ್ಯ ನಡೆಯುತ್ತಿದ್ದು ಹಳೆಯ ಹೆಂಡತಿಗೆ ಹೊಸ ಸೀರೆಯನ್ನು ಉಡಿಸಿದಂತಿದೆ .
ಈಗಾಗಲೇ ಕಟ್ಟಡ ಸಂಪೂರ್ಣ ದುರಸ್ತಿಗೊಂಡಿದ್ದು ಹೊಸ ಕಟ್ಟಡವನ್ನೇ ನಿರ್ಮಾಣ ಮಾಡುವಂಥ ಪರಿಸ್ಥಿತಿ ಇದ್ದರೂ ಸಹ 13ಲಕ್ಷ ವೆಚ್ಚದಲ್ಲಿ ಹಳೆ ಕಟ್ಟಡವನ್ನು ದುರಸ್ತಿ ಕಾರ್ಯ ಕೈಗೊಳ್ಳುವ ಮೂಲಕ ಜನಸಾಮಾನ್ಯರ ತೆರಿಗೆ ಹಣವನ್ನು ಉಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿದೆ ?

ವಿಪರೀತ ಮಳೆ ಬಂದಾಗ ಕಟ್ಟಡ  ಮೇಲ್ಛಾವಣಿ ಸೋರುತ್ತಿದ್ದು ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಟ್ಟಡದ ಮೇಲ್ಗಡೆ ಶೀಟ್ ಗಳನ್ನು ಅಳವಡಿಸುವ ಮೂಲಕ ಕಟ್ಟಡವು ಸೋರುವಿಕೆಯನ್ನು ನಿಯಂತ್ರಿಸಲಾಗದಿ ಅದರ ಜೊತೆ ಮೇಲ್ಚಾವಣಿಯಲ್ಲಿ ಒಂದು ಕಾರ್ಯಕ್ರಮದ ಸಭಾಂಗಣದ ತರ ನಿರ್ಮಾಣ ಮಾಡಲಾಗಿದೆ.

ಅದೇ ರೀತಿ ಪಕ್ಕದಲ್ಲಿ ತಾಲ್ಲೂಕು ಪಂಚಾಯ್ತಿ ನಿತ್ಯ ಆಯೋಜಿಸಿರುವ ಕಾರ್ಯಕ್ರಮದ ಸಭಾಂಗಣದ ಕಟ್ಟಡವನ್ನು ದುರಸ್ತಿಗೊಳಿಸಲಾಗಿದೆ .ಈಗಾಗಲೇ ಕಟ್ಟಡಕ್ಕೆ ಸುಣ್ಣ ಬಣ್ಣದ ಕಾರ್ಯ ನಡೆಯುತ್ತಿದ್ದು ಸುಮಾರು 13 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಂಡಿದ್ದಾರೆ.

Post a Comment

0 Comments