ಹಂದಿಗಳ ಉಪಟಳ,ಬೇಸತ್ತ ಹರಿಹರದ ನಾಗರಿಕರು.!?


ಹರಿಹರ:ಹಂದಿಗಳ ಉಪಟಳಕ್ಕೆ ನಿಯಂತ್ರಣವೇ ಇಲ್ಲದಂತಾಗಿದೆ.ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಂದಿಗಳ ಉಪಟಳ ಮಿತಿಮೀರಿದೆ.ನಗರ ಪ್ರದೇಶದ ಜನರು ಇದರಿಂದ ಹೈರಾಣಾಗಿ ಹೋಗಿದ್ದಾರೆ.ಇವುಗಳ ನಿಯಂತ್ರಣ ಕಷ್ಟ ಸಾಧ್ಯವೇ? ಎಂಬ ಪ್ರಶ್ನೆ ನಗರದ ನಾಗರಿಕರಲ್ಲಿ ಮೂಡಿದೆ.

ಕಳೆದ 2ದಿನಗಳ ಹಿಂದೆ ನಗರದ ಗ್ರಾಹಕರೊಬ್ಬರು ಮನೆಗೆ ಬೇಕಾದಂತಹ ಅಗತ್ಯ ದಿನಸಿ ಸಾಮಾಗ್ರಿಗಳನ್ನು ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋಗಲು ಬೈಕಿನಲ್ಲಿ ಇಡಬೇಕು ಅಷ್ಟರಲ್ಲಿ ಹಂದಿ ಒಂದು ಬಂದು ಮನೆಗೆ ಬೇಕಾದ ಅಗತ್ಯ ಸಾಮಗ್ರಿಗಳ ಚೀಲವನ್ನೇ ಎಳೆದುಕೊಂಡು ಹೋಗಿದೆ ಇದರ ಜೊತೆಗೆ 2ಕೆಜಿ ಮೀನು ಹಂದಿಯ ಪಾಲು. ಸರಿಸುಮಾರು ಎರಡು ಸಾವಿರ ರೂಪಾಯಿಗಳ ಮನೆಯ ದಿನಸಿ ಸಾಮಾನು ಹಂದಿಗಳ ಪಾಲಾಗಿತ್ತು .ಇಷ್ಟೇ ಅಲ್ಲ ನಗರ ಪ್ರದೇಶದ ಜನರು ಸ್ವಲ್ಪ ಯಾಮಾರಿದರೂ ಹಂದಿಗಳು ಮನೆ ಒಳಗೆ ನುಗ್ಗಿ ಮನೆಯಲ್ಲಿ ಅಡುಗೆ ಇದನ್ನು ತಿಂದು ಮತ್ತು ಪಾತ್ರೆಯನ್ನು  ಕಸಿದುಕೊಂಡು ಹೋಗುತ್ತಿವೆ.
ಇದು ಒಂದೆರಡು ವಾರ್ಡಿನ ಸಮಸ್ಯೆ ಅಲ್ಲ ನಗರದ ಮೂವತ್ತೊಂದು ವಾರ್ಡಿನಲ್ಲೂ ಇದೇ ಸಮಸ್ಯೆ .ಪ್ರತಿನಿತ್ಯ ಒಂದಿಲ್ಲ ಒಂದು ಘಟನೆಗಳು ನಡೆಯುತ್ತಲೇ ಇವೆ .ನಗರಸಭೆಯ ಸಾಮಾನ್ಯ ಸಭೆಯಲ್ಲೂ ಸಹ ಈ ಹಂದಿಗಳ ಉಪಟಳ ನಿಯಂತ್ರಣಕ್ಕೆ ತರುವಂಥ ಪ್ರಯತ್ನ ಮಾಡಿ ಎಂದು  ಪರಿಪರಿಯಾಗಿ ಮನವಿ ಮಾಡಿಕೊಳ್ಳುತ್ತಿದ್ದಾರೆ .ಇದರ ಬಗ್ಗೆ ನಗರಸಭೆಯ ಸಾಮಾನ್ಯ ಚರ್ಚೆಯ ಮೇಲೆ ಚರ್ಚೆ ನಡೆಯುತ್ತಿದೆ, ಆದರೆ ಹಂದಿಗಳ ನಿಯಂತ್ರಣ ಮಾತ್ರ ಆಗುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ .

ಇನ್ನಾದರೂ ನಗರಸಭೆಯ ಅಧಿಕಾರಿಗಳು ಹಂದಿಗಳ ಉಪಟಳ ನಿಯಂತ್ರಣಕ್ಕೆ ಮುಂದಾಗುತ್ತಾರೋ ಕಾದು ನೋಡಬೇಕಿದೆ .

Post a Comment

0 Comments