ಗಣಪತಿ ಕೆರೆಯ ಪಕ್ಕದಲ್ಲಿ ಲೇಔಟ್ ನಿರ್ಮಾಣ!? ಮೊದಲು ಆರ್ಭಟ,ಈಗ ಮೌನ.ಹಾಲಪ್ಪನವರೇ ಏನಿದು ಒಳಮರ್ಮ ?



ಸಾಗರ:-ಮಾನ್ಯ ಶಾಸಕರು ಸುಂದರವಾಗಿ ಗಣಪತಿ ಕೆರೆಯ ನಿರ್ಮಾಣ ಮಾಡುವಲ್ಲಿ ತೊಡಗಿದ್ದಾರೆ.ಇದಕ್ಕೆ ನಮ್ಮ DSS ವತಿಯಿಂದ ಅಭಿನಂದನೆಗಳು.

ಆದರೆ ಕೆರೆಯ ವಿಸ್ತೀರ್ಣವನ್ನು ದೊಡ್ಡದು ಮಾಡುತ್ತೆವೆಂದು ಹಲವಾರು ಭಾರಿ ಸ್ಥಳೀಯ ಆಡಳಿತ ಪಕ್ಷದ ಜನಪ್ರತಿನಿಧಿಗಳು ಹಾಗೂ ಶಾಸಕರ ಬಾಯಲ್ಲಿಯೇ ಹಲವಾರು ಬಾರಿ ಹೇಳಿದ್ದರು.ಶಾಸಕರು ಕೂಡ ಈ ಮಾತಿಗೆ ಬದ್ಧವಾಗಿದ್ದರು ಏಕೋ ಏನೋ ಈ ಕೆರೆಯ ವಿಸ್ತೀರ್ಣ ಅಗಲವಾಗಲೇಇಲ್ಲ.ಸವೆ೯ವರದಿ ಬರುವ ಪೂವ೯ದಲ್ಲಿಯೇ ಸಕಾ೯ರ       ಜನರ  ತೆರಿಗೆಯ ಕೊಟ್ಯಾಂತರ ಹಣವನ್ನು ತಮ್ಮ ಮನಸೋಇಚ್ಚೆಯಂತೆ ಬಳಸಿ ಸೂತ್ತಲು ಗಡಿಯನ್ನು ಇವರೆ ನಿಮಿ೯ಸಿದರೂ ಕೊಟ್೯ ಆದೇಶ ಏನು ಬರುತ್ತೋ ಗೊತ್ತಿಲ್ಲ.ಒಂದು ವೇಳೆ ನ್ಯಾಯಲಯದ ಆದೇಶ ವ್ಯತಿರಿಕ್ತವಾಗಿ ಬಂದರೆ ಜನರ ತೆರಿಗೆಯ ಹಣ ನೀರಿನಲ್ಲಿ ಹೋಮ ಮಾಡಿದಂತೆ ಆಗುತ್ತೆ.
ಮಾನ್ಯ ಶಾಸಕರು ಆರಂಭದಲ್ಲಿ ಗಣಪತಿ ಕೆರೆಯ ಕೆಳಭಾಗದಲ್ಲಿ ಇರುವ ಚಂದ್ರಮಾವಿನಕೊಪ್ಪಲು ಗದ್ದೆಯನ್ನು ಯಾವುದೇ ಕಾರಣಕ್ಕೂ ಲೇಔಟ್ ನಿಮಿ೯ಸಲ್ಲಿಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸಾರಿ ಸಾರಿ ಹೇಳಿದ್ದರು ಇದನ್ನು ಒಂದು ವೇಳೆ ಅವಶ್ಯಕತೆ ಬಿದ್ದರೆ ಸಕಾ೯ರವೆ ಖರಿದಿಸಿ ಸುಂದರವಾದ ಉದ್ಯಾನವನ್ನುನಿರ್ಮಾಣ ಮಾಡುತ್ತೆವೆ ಎಂದು ಶಾಸಕರು ಮತ್ತು ಸ್ಥಳೀಯ ಆಡಳಿತ ಪಕ್ಷದ ಜನಪ್ರತಿನಿಧಿಗಳು ಅನೇಕ ಬಾರಿ ಪುನರುಚ್ಚರಿಸಿದ್ದರು.ಸಾಗರ ಜನತೇಯು ಸಂಭ್ರಮ ಪಟ್ಟಿತ್ತು.

*ಇದಕ್ಕಾಗಿ ಸಕಾ೯ರ 5 ಕೋಟಿ ಹಣವನ್ನು AC ಖಜಾನೆಯಲ್ಲಿ ಮಿಸಲಿಡಲಾಗಿತ್ತು*

ಅದು ಏಕೋ ಏನೋ ಗೊತ್ತಿಲ್ಲ? ಈಗ ಲೇಔಟ್ ನಿರ್ಮಾಣ ಶರವೇಗದಲ್ಲಿ ನಡೆಯುತ್ತಿದೆ ಹಿಂದೆ ಇದ್ದಕ್ಕೆ ಯಾವುದೇ ಕಾರಣಕ್ಕೂ *ಲೇಔಟ್ ನಿರ್ಮಾಣ ಮಾಡುಲು ಬಿಡುವುದಿಲ್ಲವೆಂದು ಹೇಳಿದ ಸಕಾ೯ರವೇ ಮೌನಕ್ಕೆ ಶರಣಾಗಿದೆ* ಸಾಗರ ಜನ ಅಬ್ಬಬ ಎಂದು ತಮ್ಮ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.

ಇದರ ಹಿಂದೆ ಯಾವುದೋ ಕಾಣದ ಶಕ್ತಿಯಂತು ಕೆಲಸ ಮಾಡಿದೆ.

*ಈ ಲೇಔಟ್ ನಿರ್ಮಾಣ ಅವೈಜ್ಞಾನಿಕವಾಗಿದೆ ಒಂದು ವೇಳೆ ಈ ಲೇಔಟ್ ನಲ್ಲಿ ಮನೆ ಕಟ್ಟಿ ಕೊಂಡರೆ ಮಳೆಗಾಲದಲ್ಲಿ ಎಲ್ಲಾ ಮನೆಗಳಿಗೂ ನೀರು ನುಗ್ಗಿ ಆಸ್ತಿ ಪಾಸ್ತಿ ಹಾನಿ ಮತ್ತು ಜನರ ನಿತ್ಯದ ಗೋಳನ್ನು ಮುಂದೆ ಕೇಳುವವರ್ಯರು?*

ಊರಿಗೆ ಸುಂದರವಾಗಿ ಹಸಿರಿನಂತೆ ಕಂಗೊಳಿಸುತ್ತಿದ್ದ ರೈತರ ಪಾಲಿಗೆ  ಆಸರೆ ಯಾಗಿದ್ದ ಊರಿನ ಸ್ವಭಗನ್ನು ಹೆಚ್ಚಿಸಿದ್ದ ಈ ಕೆರೆಯ ಮುಂಬಾಗಕ್ಕೆ ಕೆಲವರಿಂದ ಎಂಥಹ ದುಸ್ಥಿತಿ ಬಂದೊದಗಿದೆ!

ಶಾಸಕರು ಬೇರೆ ಬೇರೆ ಲೇಔಟ್ ಗಳ ನಿಮಾ೯ಣದ ಬಗ್ಗೆ ರಾಜ ಕಾಲುವೆಯ ಬಗ್ಗೆ ಗುಣಮಟ್ಟದ ಕಾಮಗಾರಿಯ ಬಗ್ಗೆ ಹೆಚ್ಚು ಮಾತನಾಡುತ್ತಲೇ ಇರುತ್ತಾರೆ. ಅವರಿಗೆ ಈ ವ್ಯವಸ್ಥೆ ತಿಳಿದಿದಿಯೋ ತಿಳಿದಿಲವೋ ಒಮ್ಮೆ ತಿಳಿದಿದ್ದರೂ ಮೌನರಾಗಿದ್ದಾರೋ! ನಮಗಂತೂ ಗೊತ್ತಿಲ್ಲ.

*ಮಾನ್ಯ ಶಾಸಕರೇ ನಮ್ಮ DSS ನಿಂದ ಒಂದೇ ಒಂದು ಮನವಿ ಆಗ್ರಹ ಏನಾದರೂ ತಿಳಿದುಕೊಳ್ಳಿ ಯಾವುದೇ ಕಾರಣಕ್ಕೂ ಲೇಔಟ್ ನಿರ್ಮಾಣ ವಾಗುವುದ್ದಕ್ಕೆ ಅವಕಾಶ ಕೊಡಬೇಡಿ. ಸಾಗರ ಜನತೆಯ ಪರವಾಗಿ DSS ನಿಂದ ಈ ಬೇಡಿಕೆ*

ಮಾನ್ಯ ಜಿಲ್ಲಾಧಿಕಾರಿಗಳು ,ನಗರಾಭಿವೃದ್ಧಿ ಪ್ರಾಧಿಕಾರ ಶಿವಮೊಗ್ಗ ಈ ಇಲಾಖೆಯ ಅಧಿಕಾರಿಗಳಿಂದಲೇ ಇಂಥದೊಂದು ಹಸಿರು ವಣ೯ ಹಳದಿ ವಣ೯ವಾಗಿ ಮಾಪಾ೯ಟಾಗಿ ಹೋಗಿದೆ.ಇನ್ನಾದರೂ ಕ್ರಮತೆಗೆದುಕೊಳ್ಳಿ ಮಾನ್ಯ ಜಿಲ್ಲಾಧಿಕಾರಿಗಳೇ!


                  *ಲಕ್ಷ್ಮಣ್ ಸಾಗರ್*
              ತಾಲ್ಲೂಕು ಸಂಚಾಲಕರು
                   DSS ಸಾಗರ.

Post a Comment

0 Comments