ತುಂಗಭದ್ರ ನದಿಗೆ ಹಾರಿದ ಯುವಕ!?NDRF ಪಡೆಯಿಂದ ರಕ್ಷಣಾ ಕಾರ್ಯ.


ಹರಿಹರ:ಇಂದು ಮಧ್ಯಾಹ್ನ ಹನ್ನೆರಡು ಗಂಟೆಗೆ ನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿಯಿರುವ ತುಂಗಭದ್ರ ನದಿಗೆ ಯುವಕನು ಹಾರಿದ್ದು NDRF  ಪಡೆಯಿಂದ ಯುವಕರನ್ನು ರಕ್ಷಣೆ ಮಾಡಲಾಯಿತು.
ಯುವಕನು ಅಪಾರ ಜಿಲ್ಲಾಧಿಕಾರಿ ನಜ್ಮಾ,ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,ತಾಲ್ಲೂಕು ದಂಡಾಧಿಕಾರಿ ಕೆ ಬಿ ರಾಮಚಂದ್ರಪ್ಪ ,ತಾಲ್ಲೂಕು ಪಂಚಾಯ್ತಿ ಇಒ ಗಂಗಾಧರನ್,ನಗರಸಭೆ ಆಯುಕ್ತ ಬಸವರಾಜ್ ,ಪೋಲಿಸ್ ವೃತ್ತ ನಿರೀಕ್ಷಕ ಸತೀಶ್ ಯು,ನಗರ ಠಾಣಾಧಿಕಾರಿ ಸುರೇಶ್ ಎಸ್ ,ಕುಮಾರಪಟ್ಟಣಂ ಠಾಣಾಧಿಕಾರಿ ಸಂಜೀವ್ ಕುಮಾರ್ ,ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲೇ ತುಂಗಭದ್ರಾ ನದಿಗೆ ಯುವಕರು ಹಾರಿದ ಕೂಡಲೇ ಯುವಕನ ರಕ್ಷಣೆಗೆ ಬೆಂಗಳೂರಿನ ಎನ್ ಡಿ ಆರ್ ಎಫ್ ಪಡೆ ಧಾವಿಸಿದ್ದು ಯುವಕನ ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು.
NDRF ಪಡೆ ತುಂಗಭದ್ರ ನದಿಗೆ ಹಾರಿದ ಯುವಕನ ರಕ್ಷಣೆ ಮಾಡುವ ಸಂದರ್ಭದಲ್ಲಿ ಹರಿಹರ ಹಾಗೂ ಕೋಡಿಯಾಲ ಹೊಸಪೇಟೆಯ ನೂರಾರು ಜನರು ವಿಪತ್ತು ನಿರ್ವಹಣಾ ಸಂದರ್ಭದಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳುವುದು ಹೇಗೆ ಎಂಬುದನ್ನು ನೋಡಿ ಕಲಿತರು .

ಓದುಗರ ಮಿತ್ರರೇ ಈ ಸುದ್ದಿ ನಿಮಗೆ ಆಶ್ಚರ್ಯವಾಯಿತೇ ?ಹೌದು ಇಂದು ಕೇಂದ್ರ ವಿಪತ್ತು ನಿರ್ವಹಣಾ ತಂಡ ನಗರದ ತುಂಗಭದ್ರಾ ನದಿಯಲ್ಲಿ ಅಣುಕು ಪ್ರದರ್ಶನವನ್ನು ನಡೆಸಿತು .
ವಿಪರೀತ ಮಳೆ ಬಂದು ಪ್ರವಾಹ ಪರಿಸ್ಥಿತಿ ನಿರ್ಮಾಣವಾದಾಗ ವಿಪತ್ತು ನಿರ್ವಹಣಾ ತಂಡ ಜನರನ್ನ ಯಾವ ರೀತಿಯಲ್ಲಿ ರಕ್ಷಣೆ ಮಾಡುತ್ತದೆ .ಜನರಿಗೆ ಬೇಕಾದ ಅಗತ್ಯ ಆಹಾರ ಪೂರೈಕೆಯನ್ನು ಹೇಗೆ ಒದಗಿಸುತ್ತದೆ .ಈ ಸಂದರ್ಭದಲ್ಲಿ ಜನಸಾಮಾನ್ಯರು ಮುಂಜಾಗ್ರತ ಕ್ರಮಗಳನ್ನ ಯಾವ ರೀತಿಯಲ್ಲಿ ತೆಗೆದುಕೊಳ್ಳಬೇಕು . ನದಿಯ ನೀರಿನಲ್ಲಿ ಸಿಲುಕಿದ ಜನರನ್ನು ಯಾವ ರೀತಿಯಲ್ಲಿ ರಕ್ಷಣೆ ಮಾಡಬೇಕು.ನದಿ ನೀರಿನಲ್ಲಿ ಮುಳುಗಿರುವ ಮೃತ ವ್ಯಕ್ತಿಯ ದೇಹವನ್ನು ಯಾವ ರೀತಿಯಲ್ಲಿ ಹೊರತೆಗೆಯಬೇಕು ,ಶೋಧ ಕಾರ್ಯ ಯಾವ ರೀತಿ ಕೈಗೊಳ್ಳಬೇಕು ,ಇವೆಲ್ಲದರ ಕುರಿತು ಇಂದು NDRF ಪಡೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ನೂರಾರು ಜನರ ಸಮ್ಮುಖದಲ್ಲಿ ನದಿ ತೀರದಲ್ಲಿ ಅಣಕು ಪ್ರದರ್ಶನವನ್ನು ಪ್ರದರ್ಶಿಸಿದರು .
ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದು NDRF ಅಣುಕು ಪ್ರದರ್ಶನವನ್ನು ವೀಕ್ಷಿಸಿದರು.

ಸುಮಾರು 3 ಗಂಟೆಗಳಿಗೂ ಹೆಚ್ಚು ಕಾಲ ಅಣುಕು ಪ್ರದರ್ಶನವನ್ನು ನಡೆಸಿದರು.ತಾಲ್ಲೂಕು ಮಟ್ಟದ ಅಗ್ನಿಶಾಮಕದಳದವರು ಸಹ ಈ ಅಣುಕು ಪ್ರದರ್ಶನಕ್ಕೆ  ಸಾಥ್ ನೀಡಿದರು.

ಈ ಸಂದರ್ಭದಲ್ಲಿ ಹೊನ್ನಾಳಿ ಹಾಗೂ ನ್ಯಾಮತಿಯ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ಠಾಣಾಧಿಕಾರಿಗಳು ಮತ್ತು ತಾಲ್ಲೂಕುಮಟ್ಟದ ಅಧಿಕಾರಿಗಳು ಸಹ ಉಪಸ್ಥಿತರಿದ್ದರು .
ಇಂದಿನ ಅಣುಕು ಪ್ರದರ್ಶನ ಜನಸಾಮಾನ್ಯರು ಅಪಾಯದ ಸಂದರ್ಭದಲ್ಲಿ ತಮ್ಮನ್ನು ತಾವು ಯಾವ ರೀತಿ ರಕ್ಷಣೆ ಮಾಡಿಕೊಳ್ಳಬೇಕು ,ಪ್ರವಾಹದ ಪರಿಸ್ಥಿತಿಯ ಸಂದರ್ಭದಲ್ಲಿ ಮತ್ತೊಬ್ಬರ ರಕ್ಷಣೆಯನ್ನು ಯಾವ ರೀತಿ ಮಾಡಬೇಕು ಮತ್ತು ವ್ಯಕ್ತಿಯ ಉಳಿಸುವ ಸಂದರ್ಭದಲ್ಲಿ ಯಾವ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ತಮ್ಮ ಅಣುಕು ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಿದರು .

Post a Comment

0 Comments