ಪರಿಶಿಷ್ಟ ವರ್ಗದ ಮೀಸಲಾತಿ ಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀಗಳು ಕೈಗೊಂಡಿರುವ ಹೋರಾಟಕ್ಕೆ ಹರಿಹರದ ಬಿಜೆಪಿಯ ಪ್ರಬಲ ಆಕಾಂಕ್ಷಿ ಚಂದ್ರಶೇಖರ್ ಪೂಜಾರ್ ಇವರು ಶ್ರೀಗಳಿಗೆ ಬೆಂಬಲ ನೀಡಿದರು. ಕಳೆದ 2ದಿನಗಳ ಹಿಂದೆ ಹರಿಹರದಲ್ಲಿ ಶ್ರೀಗಳ ಸತ್ಯಾಗ್ರಹವನ್ನು ಬೆಂಬಲಿಸಿ ನಡೆದ ಪಾದಯಾತ್ರೆ ಪ್ರತಿಭಟನೆಯಲ್ಲಿ ಸಮಾಜದ ಹೋರಾಟವನ್ನು ಪ್ರೋತ್ಸಾಹಿಸಿ ಪಾದಯಾತ್ರಿಗಳಿಗೆ ಊಟದ ವ್ಯವಸ್ಥೆಯನ್ನ ಮಾಡಿದರು ಆ ಕಾರಣದಿಂದ ಪ್ರಸನ್ನಾನಂದ ಸ್ವಾಮೀಜಿಗಳು ಚಂದ್ರಶೇಖರ್ ಪೂಜಾರ್ ಅವರಿಗೆ ಆಶೀರ್ವದಿಸಿದರು.
0 Comments