ರೌಡಿಶೀಟರ್ ಅರುಣ ಕುಗ್ವೆ ಇವನನ್ನು ಕೂಡಲೇ ಬಂಧಿಸಿ:ಗೋಪಾಲಕೃಷ್ಣ ಬೇಳೂರು.

*ಸಾಗರ ಬಿಜೆಪಿ ಪಕ್ಷದ ಯುವಮೋರ್ಚಾ ಅಧ್ಯಕ್ಷ ಅರುಣ್ ಕುಗ್ವೆ ಮತ್ತು ಆತನ ಸಂಗಡಿಗರನ್ನು ಬಂಧಿಸುವಂತೆ  ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನೇತೃತ್ವದಲ್ಲಿ ಎ ಎಸ್ ಪಿ ರೋಹನ್ ಜಗದೀಶ್ ರವರಿಗೆ ಮನವಿ....!* 

*ಸಾಗರ:ಸಾಗರದಲ್ಲಿ ಬಿಜೆಪಿ ಪಕ್ಷದ ಯುವಮೋರ್ಚಾ ಅಧ್ಯಕ್ಷ ಅರುಣ್ ಕುಗ್ವೆ ಮತ್ತವರ ಸಂಗಡಿಗರನ್ನು ಬಂಧಿಸುವಂತೆ ಒತ್ತಾಯಿಸಿ ಬೇಳೂರು ಗೋಪಾಲಕೃಷ್ಣ ನೇತೃತ್ವದಲ್ಲಿ ಡಿವೈಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿ ASP ರೋಹನ್ ಜಗದೀಶ್ ರವರಿಗೆ ಮನವಿ ಸಲ್ಲಿಸಿದರು.*
 
ಈ ಸಂದರ್ಭದಲ್ಲಿ ಮಾತನಾಡಿದ *ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು* ಸಾಗರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಇತ್ತೀಚೆಗೆ ಭೂಮಾಫಿಯ ಹೆಚ್ಚಾಗಿದ್ದು ಆಡಳಿತರೂಢ *ಬಿಜೆಪಿ ಪಕ್ಷದ ಮುಖಂಡರುಗಳು ತಮ್ಮ ಶಾಸಕರ ಕುಮ್ಮಕ್ಕಿನಿಂದ ಭೂ ಮಾಫಿಯಾ ದಂಧೆ ಮಾಡುತ್ತಿದ್ದು ಇದರ ಬಗ್ಗೆ ಸಾಮಾನ್ಯ ಜನರು ಪ್ರಶ್ನೆ ಮಾಡಿದಲ್ಲಿ ಅಂಥವರ ಮೇಲೆ ಮಾರಣಾಂತಿಕ ಹಲ್ಲೆ ಮಾಡುತ್ತಿರುವುದು ಹೆಚ್ಚಾಗುತ್ತಿದೆ* ಇದಕ್ಕೆ ಉದಾಹರಣೆ ಎಂಬಂತೆ ನಿನ್ನೆ *ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅರುಣ್ ಕುಗ್ವೆ ಎಂಬುವವನು ಮನೋಜ್ ಕುಗ್ವೆ ಎಂಬುವವರ ಮೇಲೆ ಹಲ್ಲೆ ನಡೆಸಿರುವುದೇ ತಾಜಾ ನಿದರ್ಶನ* ಈ ಅರುಣ್ ಕುಗ್ವೆ ಒಬ್ಬ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು ಈತನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. 

*ಸಾಗರ ಕ್ಷೇತದ ಶಾಸಕರ ಆಡಳಿತದಲ್ಲಿ ರೌಡಿಸಂ ದಬ್ಬಾಳಿಕೆ ಮೂಲಕ ಭೂಮಾಫಿಯಾದಲ್ಲಿ ಶಾಮೀಲಾಗಿ ಸಾಮಾನ್ಯ ಜನರ ಮೇಲೆ ದಬ್ಬಾಳಿಕೆ ಹೆಚ್ಚಾಗಿದ್ದು, ಎಂಡಿಎಫ್ ಗಲಾಟೆಯೇ ಅದಕ್ಕೆ ಉದಾಹರಣೆ. ಇಲ್ಲಿಯವರೆಗೂ ಆ ಗಲಾಟೆಯಲ್ಲಿ ಪಾಲ್ಗೊಂಡವರ ಮೇಲೆ ಯಾವುದೇ ಕ್ರಮ ಕೈಗೊಳ್ಳುವ ಯೋಗ್ಯತೆ ಸರ್ಕಾರಕ್ಕಾಗಲಿ, ಶಾಸಕರಿಗಾಗಲಿ, ಪೊಲೀಸ್ ಇಲಾಖೆಗಾಗಲಿ ಇಲ್ಲದಿರುವುದೇ ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಿದರು.*

ನಿನ್ನೆಯ ದಿನ *ಮನೋಜ್ ಕುಗ್ವೆ" ಎಂಬುವವರ ಮೇಲೆ ಹಲ್ಲೆ ನಡೆಸಿರುವುದಲ್ಲದೆ, *ಆಸ್ಪತ್ರೆಗೆ ನುಗ್ಗಿ ತಲೆ ಹೊಡೆದಿದ್ದಾರೆ. ಇಂತಹ ಸುಸಂಸ್ಕೃತ ಕ್ಷೇತ್ರ ಸಾಗರದಲ್ಲಿ ಈ ರೀತಿಯ ಘಟನೆ ನಡೆಯುತ್ತಿರುವುದು ಖೇದಕರ!!,* ಪೊಲೀಸ್ *ಇಲಾಖೆಗೆ ನೈತಿಕತೆ ಇದ್ದಲ್ಲಿ ಅರುಣ್ ಕುಗ್ವೆ ಮೇಲೆ ಕ್ರಮ ತೆಗೆದುಕೊಳ್ಳಬೇಕು ಒಂದು ವೇಳೆ ತೆಗೆದುಕೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.*
ಸಾಗರ ಕ್ಷೇತ್ರದಲ್ಲಿ ಅಶಾಂತಿ ಉಂಟು ಮಾಡುತ್ತಿರುವ ಕೆಲವು ಕಿಡಿಗೇಡಿಗಳಿಗೆ ಶಾಸಕರ ಬೆಂಬಲವಿದ್ದು ಗೃಹ ಸಚಿವರ ಮೂಲಕ ಅವರ ಮೇಲೆ ಯಾವುದೇ ದೂರು ದಾಖಲಾಗದಂತೆ ನೋಡಿಕೊಳ್ಳುತ್ತಾರೆ 
*ಸಾಗರದಲ್ಲಿರುವ ಡಿವೈಎಸ್ಪಿ ರೋಹನ್ ರವರು ದಕ್ಷ ಅಧಿಕಾರಿಯಾಗಿದ್ದಾರೆ ಅವರ ಮೇಲೆ ನಂಬಿಕೆ ಯಿಂದ ಬಂದು ನಮ್ಮ ಮನವಿ ಕೊಟ್ಟಿದ್ದೇವೆ ನಮ್ಮ ಮನವಿಯನ್ನು ಅವರು ಪುರಸ್ಕರಿಸಿತ್ತಾರೆಂಬ ಅಚಲವಾದ ನಂಬಿಕೆಯಿದೆ ಎಂದರು.* 
*ಈ ಹಿಂದೆ ಹಲವು ಬಾರಿ ಗಡಿ ಗಡಿಪಾರಾಗಿರುವ ಅರುಣ್ ಕುಗ್ವೆ ಸಾಗರ ಕ್ಷೇತ್ರದಲ್ಲಿ ತನ್ನ ಪಟಾಲಂ ಕಟ್ಟಿಕೊಂಡು ದಬ್ಬಾಳಿಕೆ ಹಾಗೂ ರಾಬರಿ ಪ್ರಕರಣಗಳಲ್ಲಿ ಕಂಡು* *ಬಂದಿರುತ್ತಾನೆ ಆ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸಿ ಆತನ ವಿರುದ್ಧ ಕ್ರಮ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.*
 
*ಮನವಿ ಸ್ವೀಕರಿಸಿ ಮಾತನಾಡಿದ ASP ರೋಹನ್ ಜಗದೀಶ್ ರವರು ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿಲ್ಲ.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ಕಾನೂನು ರೀತಿಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.*

ಈ ಸಂದರ್ಭದಲ್ಲಿ *ಸಾಗರ ನಗರಸಭೆ ವಿರೋಧ ಪಕ್ಷದ ನಾಯಕ ಗಣಪತಿ ಮಂಡಗಳಲೆ, ಜಿ.ಪಂ ಮಾಜಿ ಸದಸ್ಯೆ ಅನಿತಾ ಕುಮಾರಿ,ರವಿ ಕುಗ್ವೆ, ವಿ.ಶಂಕರ್, ಯಶ್ವಂತ್ ಫಣಿ,ಸಂತೋಷ್ ಸದ್ಗುರು,ರವಿ ಲಿಂಗನಮಕ್ಕಿ. ಪ್ರವೀಣ್ ಬಣಕರ್. ತಾರಮೂರ್ತಿ,ಅನ್ವರ್,ಸಲೀಂ,ರಮೇಶ್ ಚಂದ್ರಗುತ್ತಿ,ಹಂಸ ರಾಮನಗರ,ಚಿನ್ಮಯ್ ಮೊದಲಾದವರು ಇದ್ದರು.


Post a Comment

0 Comments