ಮತ್ತೆ ಪುಟಿದೇಳುವ ಶಕ್ತಿ ಹರತಾಳು ಹಾಲಪ್ಪನವರಿಗೆ ಇದೆ.!


ಸಾಗರ:ಹರತಾಳು ಹಾಲಪ್ಪ ಒಬ್ಬ ಉತ್ತಮ ರಾಜಕೀಯ ಪಟು.ತಮ್ಮದೇಯಾದ ರಾಜಕೀಯ ವರ್ಚಸ್ಸನ್ನು ಹೊಂದಿದಂಥ ರಾಜಕಾರಣಿ.ತಮ್ಮ ರಾಜಕೀಯ ಜೀವನದುದ್ದಕ್ಕೂ ಅನೇಕ ಸವಾಲುಗಳನ್ನು ಎದುರಿಸಿದ ನಾಯಕ.
ಒಬ್ಬ ರಾಜಕಾರಣಿಗೆ ಇರಬೇಕಾದಂಥ ಎಲ್ಲಾ ಚಾಣಾಕ್ಷತೆ ಮತ್ತು ತಂತ್ರಗಾರಿಕೆಗಳನ್ನು ಹರತಾಳು ಹಾಲಪ್ಪನವರು ಮೈಗೂಡಿಸಿಕೊಂಡಿದ್ದಾರೆ.

ರಾಜ್ಯ ಕಂಡ ಧೀಮಂತ ರಾಜಕಾರಣಿ ಎಸ್ ಬಂಗಾರಪ್ಪನವರ ಗರಡಿಯಲ್ಲಿ ಬೆಳೆದ ಹರತಾಳು ಹಾಲಪ್ಪ ಎಂತಹ ಸವಾಲನ್ನು ಬೇಕಾದರೂ ಎದುರಿಸುತ್ತಾರೆ.ಅದರಲ್ಲೂ ಹರತಾಳ್ ಹಾಲಪ್ಪ ಒಂದೊಮ್ಮೆ ಬಂಗಾರಪ್ಪನವರ ಗರಡಿಯಲ್ಲಿ ಬೆಳೆದವರು.ಇಂದು ಯಡಿಯೂರಪ್ಪನವರ ಗರಡಿಯಲ್ಲಿ ಬೆಳೆಯುತ್ತಿದ್ದಾರೆ.

ಎಸ್ ಬಂಗಾರಪ್ಪ ಮತ್ತು ಬಿ.ಎಸ್ ಯಡಿಯೂರಪ್ಪ ಶಿವಮೊಗ್ಗ ಜಿಲ್ಲೆಯಲ್ಲಿ ಕಂಡ ಅತ್ಯುತ್ತಮ ರಾಜಕಾರಣಿಗಳು.ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಪ್ರಭಾವದ ಮೂಲಕ ಅಧಿಕಾರದ ಕುರ್ಚಿಯನ್ನು ಅಲಂಕರಿಸಿದವರು.ರಾಜಕೀಯ ತಂತ್ರಗಳನ್ನು ಹೆಣೆಯುವುದರಲ್ಲಿ ಇಬ್ಬರು ಅತ್ಯಂತ ಚಾಣಕ್ಷತೆಯ ಪಟುಗಳು.ಅವರಿಬ್ಬರ ಗರಡಿಯಲ್ಲಿ ಮತ್ತು ಮಾರ್ಗದರ್ಶನದಲ್ಲಿ ಬೆಳೆದ ಹರತಾಳು ಹಾಲಪ್ಪ ಮತ್ತೆ ಪುಟಿದೇಳದೆ ಇರುತ್ತಾರೆಯೇ.?
ಮೂರು ವಿಭಿನ್ನ ಕ್ಷೇತ್ರದಲ್ಲಿ ಅಭಿವೃದ್ಧಿಯ ಮಂತ್ರದಿಂದ ಗೆದ್ದುಬಂದ ಹರತಾಳು ಹಾಲಪ್ಪನವರಿಗೆ ಮತ್ತೆ ಬೇರೊಂದು ಕ್ಷೇತ್ರದಲ್ಲಿ ನಿಂತರೂ ಗೆದ್ದು ಬರುವಂತಹ ಶಕ್ತಿ ಅವರಿಗಿದೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಾಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ತಮ್ಮ ಸಾಮರ್ಥ್ಯ ಏನು ಎಂಬುದನ್ನು ರಾಜ್ಯದ ಮತದಾರರಿಗೆ ತೋರಿಸಿಕೊಡುವಂತಹ ಎಲ್ಲ ಶಕ್ತಿ ಮತ್ತು ಯುಕ್ತಿ ಹೊಂದಿದ್ದಾರೆ.

ಕೆಲ ಘಟನೆಗಳು ಕೆಲವು ದಿನಗಳವರೆಗೆ ಮಾತ್ರ ಮತದಾರರು ನೆನಪಿಟ್ಟುಕೊಳ್ಳುತ್ತಾರೆ.ಅಭಿವೃದ್ಧಿಯೇ ಮಾನದಂಡವಾಗಿರಬೇಕಾದರೆ ಜಾತಿ ಯಾವ ಲೆಕ್ಕಕ್ಕೂ ಬರುವುದಿಲ್ಲ.ಒಂದು ವೇಳೆ ಜಾತಿಯ ರಾಜಕಾರಣ ನಡೆದಿದ್ದೇ ಆದರೆ ರೇಣುಕಾಚಾರ್ಯ ಹೊನ್ನಾಳಿ ಕ್ಷೇತ್ರದಿಂದ ಮತ್ತೆ, ಮತ್ತೆ ಗೆದ್ದು ಬರುತ್ತಿರಲಿಲ್ಲ.ಕೇವಲ ಐದರಿಂದ ಹತ್ತು ಸಾವಿರ ಜಾತಿಯ ಮತಗಳನ್ನ ಹೊಂದಿರುವ  ಎಂ.ಪಿ ರೇಣುಕಾಚಾರ್ಯ ಇಂದು ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ದತ್ತುಪುತ್ರರಾಗಿ ಬೆಳೆದಿದ್ದಾರೆ.

ಹರತಾಳು ಹಾಲಪ್ಪ ಹೊಸನಗರ, ಸೊರಬ, ಸಾಗರ ಕ್ಷೇತ್ರದಲ್ಲಿ ಸ್ಪರ್ಧಿಸಿ ತಾನು ಏನು ಎಂಬುದನ್ನ ಈಗಾಗಲೇ ತಮ್ಮ ವಿರೋಧಿಗಳಿಗೆ ತೋರಿಸಿಕೊಟ್ಟಿದ್ದಾರೆ.ಹರತಾಳು ಹಾಲಪ್ಪರವರಿಗೆ ಮತ್ತೊಂದು ಕ್ಷೇತ್ರ ನೀಡಿದರು ಗೆದ್ದು ಬರುವಂಥ ಸಾಮರ್ಥ್ಯ ಹೊಂದಿದ್ದಾರೆ.ಆದರೆ ಅವರ ವಿರೋಧಿಗಳು ಗೆದ್ದು ಬರುವುದು ಕಷ್ಟವಾಗಿದೆ.

ಹರತಾಳು ಹಾಲಪ್ಪ ಅವರನ್ನು ಸೋಲಿಸಲೇ ಬೇಕು ಎಂದಾದರೆ ಅವರ ವಿರೋಧಿಗಳು ಹೆಣೆಯುತ್ತಿರುವ ತಂತ್ರಗಳು ಬದಲಾಗಬೇಕು.ಕೇವಲ M.D.F ಘಟನೆಯನ್ನೇ ಮುಂದಿಟ್ಟುಕೊಂಡು ತಾಲ್ಲೂಕಿನ ಪ್ರಬಲ ಸಮುದಾಯಗಳು ಮುಂದಿನ ಚುನಾವಣೆಯಲ್ಲಿ ಹರತಾಳು ಹಾಲಪ್ಪನವರ ವಿರುದ್ಧ ಕೆಲಸ ಮಾಡುತ್ತದೆ.ನಾವು ಅತ್ಯಂತ ಸುಲಭವಾಗಿ ಗೆದ್ದು ಬಿಡುತ್ತೇವೆ ಎಂದು ಮೈ ಮರೆತರೆ ಅದು ಶುದ್ಧ ಸುಳ್ಳಾಗುತ್ತದೆ ಮತ್ತು ಮೂರ್ಖತನವಾಗುತ್ತದೆ.
ಸದ್ಯ ಸಾಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪ್ರಬಲ ಅಭ್ಯರ್ಥಿಯಾಗಿ ಹರತಾಳು ಹಾಲಪ್ಪ ಹೊರತು ಮತ್ಯಾರು ಇಲ್ಲ.ಅಂದರೆ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲವೆಂದರ್ಥ.ಈಗ ಹೇಳಿ-ಕೇಳಿ ಚುನಾವಣೆ ವರ್ಷ,ಅಧಿಕಾರದಲ್ಲಿರುವುದು ಬಿಜೆಪಿ ಪಕ್ಷ.ಕ್ಷೇತ್ರಕ್ಕೆ ಅನುದಾನ ತರುವ ವಿಚಾರದಲ್ಲಿ ಹರತಾಳು ಹಾಲಪ್ಪ ಒಂದು ಹೆಜ್ಜೆ ಮುಂದೆ.ಈ ಚುನಾವಣಾ ವರ್ಷದಲ್ಲಿ ತಮ್ಮ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಾರದೆ ಇರುತ್ತಾರೆಯೇ?ಜನರಿಗೆ ಕಾಣುವಂಥ ಅಭಿವೃದ್ಧಿ ಕೆಲಸ ಮಾಡದೇ ಇರುತ್ತಾರೆಯೇ ?ಮುಂದಿನ ಸಚಿವ ಸಂಪುಟದಲ್ಲಿ ಮಂತ್ರಿಯಾದರೂ ಆಶ್ಚರ್ಯವಿಲ್ಲ.ಮಂತ್ರಿಯಾದ ಮೇಲೆ ಮತ್ತು ಅಧಿಕಾರದ ಕುರ್ಚಿ ಸಿಕ್ಕ ಮೇಲೆ ಅವರ ಹಿಂದೆ ಓಡಾಡುವರ ಸಂಖ್ಯೆಯೂ ಅಷ್ಟೇ ಏರಿಕೆಯಾಗುತ್ತದೆ.ಚುನಾವಣೆ ವರ್ಷದಲ್ಲಿ ಇದು ಮುಖ್ಯವಾಗುತ್ತದೆ.
ಬಂಗಾರಪ್ಪನವರ ಮತ್ತು ಯಡಿಯೂರಪ್ಪನವರ ಗರಡಿಯಲ್ಲಿ ಬೆಳೆದವರರಿಗೆ ಪಕ್ಷೇತರ ಅಭ್ಯರ್ಥಿಯಾಗಿ ನಿಂತರೂ ಗೆದ್ದು ಬರುತ್ತೇವೆ ಎಂಬ ನಂಬಿಕೆ ಇಲ್ಲದೇ ಇರುತ್ತದೆಯೇ?ಅವರ ರಾಜಕಾರಣದ ಪಟ್ಟುಗಳನ್ನು ಕಲಿಯದೆ ಇರುತ್ತಾರೆಯೇ ?ಇವೆಲ್ಲ ಮೈಗೂಡಿಸಿಕೊಂಡ ಮೇಲೆಯೇ ಉತ್ತಮ ರಾಜಕಾರಣಿ ಆಗಲು ಸಾಧ್ಯ.ಇಂದು ಯಡಿಯೂರಪ್ಪ ಬಿಜೆಪಿಗೆ ಅನಿವಾರ್ಯ ಏಕೆ ಹೇಳಿ ಅವರ ರಾಜಕೀಯ ಚಾಣಾಕ್ಷತೆ.ಅದೇ ರೀತಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಇವರು ತಮ್ಮ ಚಾಣಾಕ್ಷತೆಯಿಂದ ತಮ್ಮ ಮಗನನ್ನು 2 ಬಾರಿ ರಾಜ್ಯದ ಮುಖ್ಯಮಂತ್ರಿ ಮಾಡಿದ್ದಾರೆ.ಅದೇ ರೀತಿ ಎಸ್.ಬಂಗಾರಪ್ಪ ಹಲವು ಪಕ್ಷಗಳನ್ನು ಸೃಷ್ಟಿಸಿದರೂ ಹಲವು ಪಕ್ಷಗಳನ್ನು ಬದಲಾಯಿಸಿದರು ಆದರೂ ರಾಜ್ಯದ ಮುಖ್ಯಮಂತ್ರಿಯಾಗಿ ಇಂದಿಗೂ ರಾಜ್ಯ ಕಂಡ ಮರೆಯಲಾಗದ ಅತ್ಯುತ್ತಮ ಮುಖ್ಯಮಂತ್ರಿ ಎಂಬ ಹೆಸರನ್ನು ಜನಮಾಸದಲ್ಲಿ  ಅಜಾರಾಮರವಾಗಿ ಉಳಿಸಿಕೊಂಡಿದ್ದಾರೆ.
ಅದೇ ಕಾರಣಕ್ಕೆ ಹೇಳುವುದು ಹರತಾಳು ಹಾಲಪ್ಪನವರಿಗೆ ಮತ್ತೆ ಪುಟಿದೇಳುವ ಶಕ್ತಿ ಇದೆ ಎಂದು.ಪುಟಿದೇಳುತ್ತಾರೆ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗುತ್ತಾರೆ ಅದರಲ್ಲಿ ಯಾವುದೇ ಅನುಮಾನವಿಲ್ಲ.ಇದುವರೆಗೂ ನಮ್ಮ ಮಾಧ್ಯಮ ಸೂಕ್ಷ್ಮವಾಗಿ ಜನರ ಮಧ್ಯೆ ಮಾಹಿತಿಯನ್ನು ಕಲೆ ಹಾಕಿದ ವಿಚಾರವನ್ನು ಈ ಬರಹದ ಮೂಲಕ ಹೊರಹಾಕುತ್ತಿದ್ದೇವೆ.

ಏನೆಲ್ಲಾ ಘಟನೆಗಳು ನಡೆದರೂ ಹಾಲಪ್ಪನವರ ಜನಪ್ರಿಯತೆ ಇನ್ನೂ ಕುಂದಿಲ್ಲ.........

*ಪ್ರಕಾಶ್ ಮಂದಾರ*
*ಸಂಪಾದಕರು*
*8880499904*

Post a Comment

0 Comments