ಇಂದು ಹರಿಹರದಲ್ಲಿ ಸ್ವಾತಂತ್ರ ವೀರ "ಸಾರ್ವಕರ್" ಜಯಂತೋತ್ಸವ.


ಹರಿಹರ:ಇಂದು ಹರಿಹರದಲ್ಲಿ ಹಿಂದೂ ಚಿಂತನ ಪ್ರತಿಷ್ಠಾನ ಹರಿಹರ  ಇವರ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ ಸಂಗ್ರಾಮದ ವೀರ ಸೇನಾನಿ ಸಾವರ್ಕರ್ ಜಯಂತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ನಗರದ ಹೊರವಲಯದಲ್ಲಿರುವ  ರಾಘವೇಂದ್ರ ಸ್ವಾಮಿ ಮಠದ ಸಭಾಂಗಣದಲ್ಲಿ ಇಂದು ಸಂಜೆ 5 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಶ್ರೀ ಅಭಿನವ ಹಾಲಶ್ರೀ  ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ.ದಿಕ್ಸೂಚಿ ಭಾಷಣವನ್ನು ಕುಮಾರಿ ಹಾರಿಕ ಮಂಜುನಾಥ್ ಮಾಡಲಿದ್ದು ಸಮಸ್ತ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಹಾಗೂ ಸಾರ್ವರ್ಕರ್ ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸುವಂತೆ ಕಾರ್ಯಕ್ರಮದ ಆಯೋಜಕರು ಮನವಿ ಮಾಡಿಕೊಂಡಿದ್ದಾರೆ.

Post a Comment

0 Comments