ನಾಮದೇವ ಸಿಂಪಿ ಸಮಾಜದ ಬಂಧುಗಳಿಂದ ಹರಿಹರದಲ್ಲಿ ವಿಠಲ-ರುಕ್ಮಿಣಿ ದಿಂಡಿ ಉತ್ಸವ ಕಾರ್ಯಕ್ರಮ.


ಹರಿಹರ:ಹರಿಹರದಲ್ಲಿ ಇಂದು ನಾಮದೇವ ಸಿಂಪಿ ಸಮಾಜದ ಬಂಧುಗಳಿಂದ ವಿಠ್ಠಲ ರುಕ್ಮಣಿ ದಿಂಡಿ ಮಹೋತ್ಸವ ಕಾರ್ಯಕ್ರಮವು ನಡೆಯಿತು.
ಕಳೆದ 1ವಾರದಿಂದ ನಗರದ ನಡುವಲಪೇಟೆಯ ವಿಠ್ಠಲ ರುಕ್ಮಣಿ ದೇವಸ್ಥಾನದಲ್ಲಿ ಪ್ರತಿದಿನ ದೇವರ ನಾಮಸ್ಮರಣೆ, ಭಜನಾ ಕಾರ್ಯಕ್ರಮ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಯುತ್ತಿದ್ದವು.

ಇಂದು ಬೆಳಿಗ್ಗೆ ನಡುವಲ ಪೇಟೆಯ ವಿಠ್ಠಲ ರುಕ್ಮಣಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ನಂತರದಲ್ಲಿ ದೇವರನ್ನ ಟ್ರ್ಯಾಕ್ಟರ್ ನ ವಿಶೇಷ ಪಲ್ಲಕ್ಕಿಯಲ್ಲಿರಿಸಿ ಸಮಾಜದ ವಿವಿಧ ಬಂಧುಗಳ ಕಲಾ ತಂಡದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಅದ್ದೂರಿಯಾಗಿ ನಡೆದ ವಿಠಲ ರುಖುಮಾಯಿ ದಿಂಡಿ ಮಹೋತ್ಸವ ಕಾರ್ಯಕ್ರಮ ನೋಡುಗರ ಮನದಲ್ಲಿ ದೈವಭಕ್ತಿ ಮೂಡುತ್ತಿತ್ತು.

ಈ ಬಾರಿ ದಿಂಡಿ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲು ಪ್ರಮುಖ ಕಾರಣ ಸಮಾಜದ ವಿವಿಧ ಮಂಡಳಿಯ ಪದಾಧಿಕಾರಿಗಳ ಶ್ರಮ ಮತ್ತು ದೈವಭಕ್ತಿ .
ನಾಮದೇವ ಸಿಂಪಿ ಸಮಾಜದ ವಿಠಲ ರುಖುಮಾಯಿ ದಿಂಡಿ ಮಹೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಸಮಾಜದ ಹಿರಿಯರು ಹಾಗೂ ನಗರಸಭಾ ಸದಸ್ಯರಾದ ಶಂಕರ್ ಖಟಾವ್ ಕರ್ , ಲಕ್ಷ್ಮೀ ಮೋಹನ್ ದುರುಗೋಜಿ ,ನಾಗರತ್ನ,ನಾಮದೇವ ಸಿಂಪಿ ಸಮಾಜದ ಯುವ ಮಂಡಳಿಯ ಅಧ್ಯಕ್ಷ ಮೋಹನ್ ದುರ್ಗೋಜಿ ,ಪ್ರಧಾನ ಕಾರ್ಯದರ್ಶಿ ಸಂತೋಷ್ ಪಿಸೆ,ಗುರುಮೂರ್ತಿ ಹೇೂವಳೆ,ಅರುಣ್ ಬೊಂಗಾಳೆ ಭೋಜಾರಾಜ ಹೊವಳೆ,ಪದ್ಮಾವತಿ ಬೊಂಗಾಳೆ, ಸುರೇಖಾ ಬೊಂಗಾಳೆ ,ರಂಜನಾ, ಮಾದೇವಿ ಬೊಂಗಾಳೆ, ನಿರ್ಮಲಾ ದುರ್ಗೋಜಿ,ಕಿರಣ್ ಕಟಾವಕರ್  ಟಿ ಜೆ ಮುರುಗೇಶಪ್ಪ, ಮಂಜುನಾಥ್, ಮುರುಳಿ, ರತ್ನ ಪಿಸೆ,ಸೇರಿದಂತೆ ಸಮಾಜದ ದೊಡ್ಡ ಮಂಡಳಿ, ಯುವ ಮಂಡಳಿ ,ಮಹಿಳಾ ಮಂಡಳಿ,ಭಜನಾ ಮಂಡಳಿಯ ಎಲ್ಲಾ ಪದಾಧಿಕಾರಿಗಳು ಸಮಾಜದ ಮುಖಂಡರು ಬಂಧುಗಳು ದೈವ ಭಕ್ತಿ  ಕಾರ್ಯಕ್ರಮದ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Post a Comment

0 Comments