ಹರಿಹರ:ತಾಲ್ಲೂಕಿನ ಪ್ರತಿಯೊಂದು ಸರ್ಕಾರಿ ಕಚೇರಿಗಳು ಲಂಗು ಲಗಾಮು ಇಲ್ಲದೆ ಭ್ರಷ್ಟಾಚಾರ ಮಿತಿ ಮೀರುತ್ತಿದೆ ಅಧಿಕಾರಿಗಳಿಗೆ ನೌಕರರಿಗೆ ಚಾಟಿ ಬೀಸುವರು ಯಾರು?ಎನ್ನುವುದು ಪ್ರಶ್ನೆಯಾಗಿದೆ.
ತಮ್ಮ ಕೆಲಸದ ನಿಮಿತ್ತ ಜನಸಾಮಾನ್ಯರು ಓಡಾಟದಿಂದ ಹೈರಾಣಾಗುತ್ತಿದ್ದಾರೆ.ಈ ಬಗ್ಗೆ ಗಮನಿಸಬೇಕಿದ್ದ ಶಾಸಕರು ಮೌನಕ್ಕೆ ಶರಣಾಗಿದ್ದಾರೆ.ಶಾಸಕರ ತಾಳ್ಮೆಯನ್ಮು ಕೆಲ ಅಧಿಕಾರಿಗಳು ಪರೀಕ್ಷೆ ಮಾಡುತ್ತಿದ್ದಾರೆ.ಅಲ್ಲದೆ ಶಾಸಕರ ಜನಪ್ರಿಯತೆಗೆ ಭಂಗ ತರುವ ಕೆಲಸವನ್ನು ಕೆಲ ಅಧಿಕಾರಿಗಳ ವರ್ಗದಿಂದ ನಡೆಯುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ.
ಮಾಜಿ ಶಾಸಕ ಹೆಚ್ ಎಸ್ ಶಿವಶಂಕರ್ ಅವರ ಅವಧಿಯಲ್ಲಿ ಅಧಿಕಾರಿಗಳು ಹಾಗೂ ಸರ್ಕಾರಿ ಕಚೇರಿಯ ನೌಕರರು ಒಂದಿಷ್ಟು ಭಯದಿಂದಲಾದರೂ ಕೆಲಸವನ್ನು ಮಾಡುತ್ತಿದ್ದರು.ಆದರೆ ಈಗ ಶಾಸಕ ಎಸ್ ರಾಮಪ್ಪ ಅವರ ಆಡಳಿತದಲ್ಲಿ ಯಾವ ಕಚೇರಿಯ ನೌಕರರು ಮಾತು ಕೇಳದವರಾಗಿದ್ದಾರೆ.ಸಣ್ಣ ಕೆಲಸಕ್ಕೂ ಕೈ ಮುಂದೆ ಮಾಡಿ ಲಂಚಕ್ಕೆ ಬಾಯ್ಬಿಡುತ್ತಾರೆ ಏಕೆ ?ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಹೌದು ! ಮೇಲೆ ಹೇಳಿದ ಸಾರ್ವಜನಿಕರ ಪ್ರಶ್ನೆ ಪ್ರತಿದಿನವೂ ಸರ್ಕಾರಿ ಕಚೇರಿ ಎದುರು ಜನರು ನೋವಿಂದ ಹೇಳುವ ಮಾತಾಗಿದೆ.ಉದಾಹರಣೆಗೆ ತಾಲ್ಲೂಕು ಕಂದಾಯ ಕಚೇರಿ ಎನ್ನುವುದು ಲಂಗು ಲಗಾಮು ಇಲ್ಲದಂತಾಗಿದೆ.ಪ್ರತಿಯೊಂದು ಕೆಲಸಕ್ಕೂ ಅಲೆದಾಟ ಓಡಾಟ ಮಾಡುವುದೇ ಜನರ ಪ್ರತಿನಿತ್ಯದ ಕಾಯಕವಾಗಿದೆ.ರೈತರ ಭೂಮಿ ಸಂಬಂಧಿಸಿದ ಪಹಣಿ ತಿದ್ದುಪಡಿ ಹಾಗೂ ಖರಾಬ್ ತಿದ್ದುಪಡಿ ಜಮೀನಿಗೆ ಅಟ್ಲಾಸ್ ಆಖಾರ್ ಬಂದ್ ಹಕ್ಕುಪತ್ರ ಇತ್ಯಾದಿ ನೂರಾರು ಕೆಲಸಗಳು ಇರುತ್ತದೆ.ಈ ಕೆಲಸಗಳಿಗೆ ಕನಿಷ್ಠ ಒಂದರಿಂದ 3ತಿಂಗಳು ಜನರು ತಾಲ್ಲೂಕು ಕಚೇರಿಗೆ ಅಲೆದಾಟ ಮಾಡಬೇಕಾಗುತ್ತದೆ.ಅರ್ಜಿಯನ್ನು ಕೊಡುವುದು ನಾಡಕಚೇರಿಯಲ್ಲಿ ಅರ್ಜಿ ಕೊಟ್ಟ ಮೇಲೆ ಕೆಲಸಕ್ಕಾಗಿ ಕಂದಾಯ ಕಚೇರಿಗೆ ತಿರುಗುವುದು ಸಾಮಾನ್ಯ ವಿಷಯವಾಗಿ ಬಿಟ್ಟಿದೆ.1ಸಣ್ಣ ಪೌತಿ ಅಂದರೆ ಜಮೀನು ಮಾಲೀಕ ಸತ್ತಮೇಲೆ ದಾಖಲೆ ಸಂಬಂಧಪಟ್ಟ ವಂಶಸ್ಥರ ಹೆಸರಿಗೆ ಬದಲಾವಣೆ ಮಾಡುವುದಕ್ಕೆ ಕನಿಷ್ಠ ನಾಲ್ಕಾರು ತಿಂಗಳು ಅಲೆದಾಡಬೇಕಾಗುತ್ತದೆ.ಗ್ರಾಮ ಲೆಕ್ಕಾಧಿಕಾರಿಯಿಂದ ಹಿಡಿದು ರೆವಿನ್ಯೂ, ತಹಸೀಲ್ದಾರ್ ಹಾಗೂ ಭೂಮಿ ಕೇಂದ್ರದ ಕಂಪ್ಯೂಟರ್ ಆಪರೇಟರ್ ಅಧಿಕಾರಿಯವರೆಗೆ ದಿನಾಲು ಅಲೆದಾಡುವದು ನಡೆಯುತ್ತದೆ.ಇಲ್ಲಿ ಪ್ರತಿ ಹಂತದಲ್ಲಿಯೂ ಲಂಚ ಭ್ರಷ್ಟಾಚಾರ ಮಾಮೂಲಾಗಿಬಿಟ್ಟಿದೆ.ಅಧಿಕಾರಿ ಅಥವಾ ನೌಕರ ತನ್ನ ಮನಸ್ಸು ಸರಿಯಿದ್ದರೆ ಸಾರ್ವಜನಿಕರ ಕೆಲಸ ಮಾಡುತ್ತಾರೆ ಇಲ್ಲವಾದರೆ ಮೀಟಿಂಗು ಅಥವಾ ಇನ್ನಿತರ ಯಾವುದಾದರೂ ಜನರನ್ನು ವಾಪಸ್ಸು ಕಳಿಸುತ್ತಾರೆ.
ಇನ್ನು ಪಹಣಿಯಲ್ಲಿ ಖರಾಬ್ ತಿದ್ದುಪಡಿ ಅಥವಾ ಸಣ್ಣಪುಟ್ಟ ಲೋಪ ದೋಷಗಳನ್ನು ಸರಿಪಡಿಸುವುದು ನಿಜಕ್ಕೂ ಮನುಷ್ಯರಾದವರಿಗೆ ಸಾಧ್ಯವಿಲ್ಲದ ಮಾತಾಗಿದೆ.ಒಬ್ಬ ಜಮೀನು ಮಾಲಿಕ ತನ್ನ ಪಹಣಿ ತಿದ್ದುಪಡಿ ಮಾಡಬೇಕು ಅಂತಾದರೆ ತಾಲ್ಲೂಕು ಕಚೇರಿಗೆ ಅರ್ಜಿ ನೀಡಿ ಅಲ್ಲಿ ಅಲೆದಾಟ ನಡೆಸಿದ ಮೇಲೆ ಅದು ಉಪವಿಭಾಗಾದ ಕಚೇರಿಗೆ ಬರುತ್ತದೆ ಅಲ್ಲಿ ಮತ್ತೆ ಅಲೆದಾಟ ನಡೆಸಿದ ಮೇಲೆ ಉಪವಿಭಾಗಾಧಿಕಾರಿಯ ಹತ್ತಿರ ಸಹಿಗಾಗಿ ಬರುತ್ತದೆ.ಅಲ್ಲಿ ಕನಿಷ್ಠ ಹದಿನೈದು ದಿನ ಸಹಿಗಾಗಿ ಕಾದು ನಂತರ ಮತ್ತೆ ತಾಲ್ಲೂಕು ಕಚೇರಿಗೆ ಬರುತ್ತದೆ. ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಫೈಲ್ ಹೋಗುವದು ಕನಿಷ್ಠ ಒಂದು ವಾರ ಬೇಕಾಗುತ್ತದೆ ಫೈಲ್ ಎಲ್ಲಿದೆ ಎಂದು ಹುಡುಕುವುದಕ್ಕೆ ದಿನಾಲು ಅಲೆದಾಟ ಭೂಮಿ ಕೇಂದ್ರದವರು ಎಸಿ ಕಚೇರಿಯಿಂದ ಫೈಲ್ ಬಂದೇ ಇಲ್ಲ ಎಂದು ಹೇಳುತ್ತಾರೆ. ಎಸಿ ಕಚೇರಿಯಲ್ಲಿ ಫೈನ್ ಹೋಗಿದೆ ಎಂದು ಹೇಳುತ್ತಾರೆ ಮಧ್ಯಂತರದಲ್ಲಿ ಫೈಲ್ ಎಲ್ಲಿ ಕಾಣೆಯಾಗಿದೆ ಎಂದು ಗೊತ್ತಾಗುವುದೇ ಇಲ್ಲ.ಜನರು ನೌಕರನಿಗೆ ಕೈಬೀಸಿ ಮಾಡಿದಾಗ ಫೈಲ್ ತತಕ್ಷಣದಲ್ಲೇ ಪ್ರತ್ಯಕ್ಷವಾಗುತ್ತದೆ.ವಿಪರ್ಯಾಸವೇನೆಂದರೆ ಒಮ್ಮೊಮ್ಮೆ ಜನರು ಸಂಪೂರ್ಣ ದಾಖಲೆಯೊಂದಿಗೆ ನೀಡಿದ ಎಲ್ಲಾ ಫೈಲ್ ಸಿಗೋದೇ ಇಲ್ಲವಾಗಿದೆ.ಮತ್ತೆ ಎಲ್ಲಾ ದಾಖಲೆಗಳನ್ನು ಕ್ರೋಡೀಕರಿಸಿ ಹೊಸ ದಾಖಲೆಯ ಫೈಲನ್ನು ನೀಡಿ ಕೆಲಸವನ್ನ ಮಾಡಿಸಬೇಕಾದ ಅನಿವಾರ್ಯತೆ ಹರಿಹರದ ಕಂದಾಯ ಇಲಾಖೆಯಲ್ಲಿ ನಡೆಯುತ್ತಿದೆ.
ಕಂದಾಯ ಸಚಿವ ಆರ್ ಅಶೋಕ್ ಸಾಮ್ರಾಟ್ ಜನರ ಮನೆಮನೆಗೆ ರೈತರ ದಾಖಲೆಗಳನ್ನು ನೀಡುತ್ತೇವೆ ಎಂದು ಹೊಸದಾದ ಯೋಜನೆ ಜಾರಿಗೆ ತಂದಿದ್ದು ಕೇವಲ ಕಾಗದದ ಮೇಲಿನ ಆದೇಶಕ್ಕೆ ಮಾತ್ರ ಸೀಮಿತವಾಗಿದೆ.ಈ ಯೋಜನೆಯಿಂದ ಯಾವ ರೈತರಿಗೂ ಏನು ಪ್ರಯೋಜನವಿಲ್ಲವಾಗಿದೆ.ಪುಗಸಟ್ಟೆ ಬಿಟ್ಟಿ ಪ್ರಚಾರಕ್ಕೆ ಸರ್ಕಾರ ಈ ತರದ ಡಮ್ಮಿ ಯೋಜನೆ ಜಾರಿಗೆ ತಂದಿದೆ ಎಂದು ಜನರು ಅಪಹಾಸ್ಯದಿಂದ ನಗುತ್ತಿದ್ದಾರೆ.
ಸರ್ಕಾರ ಮೊದಲು ಮಾಡಬೇಕಾದ ಕೆಲಸ ರೈತರ ಪಹಣಿ ಹಾಗೂ ದಾಖಲೆಯಲ್ಲಿ ಇರುವಂತಹ ವ್ಯತ್ಯಾಸಗಳನ್ನು ಸರಿಪಡಿಸಲು ತಿಂಗಳುಗಟ್ಟಲೆ ಓಡಾಡುವ ನಿಯಮವನ್ನ ಮೊದಲು ತೆಗೆದು ಹಾಕಬೇಕು.ಇಲ್ಲಿ ನೌಕರರು ಸರ್ಕಾರದ ನಿಯಮವಿದೆ ಒಂದು ತಿಂಗಳ ಒಳಗೆ ನಿಮ್ಮ ಕೆಲಸವಾಗುವುದಿಲ್ಲ ಕಂಪ್ಯೂಟರ್ ನಲ್ಲಿ ತೆಗೆದುಕೊಳ್ಳುವುದಿಲ್ಲ ಎಂದು ಕಾರಣ ಹೇಳುತ್ತಾರೆ.ಇದು ನಿಜವಾದ ನಿಯಮವಿದ್ದರೆ ರೈತರಿಗೆ ಹೊರೆಯಾದ ನೇಮ ಮೊದಲು ತೆಗೆದುಹಾಕಿ ಕನಿಷ್ಠ ಒಂದು ವಾರದ ಒಳಗೆ ಯಾವುದೇ ತಿದ್ದುಪಡಿ ಇದ್ದರೂ ಸರಿಪಡಿಸುವ ಕೆಲಸ ಸರ್ಕಾರದಿಂದ ಆಗಬೇಕು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಕಂದಾಯ ಇಲಾಖೆಯ ಬಗ್ಗೆ ಮೇಳೆ ಹೇಳಿದ್ದಕ್ಕಿಂತಲೂ ಹೆಚ್ಚಿನ ಭ್ರಷ್ಟಾಚಾರ ಹಾಗೂ ಜನರಿಗೆ ನೀಡುತ್ತಿರುವ ಕಿರುಕುಳ ಅನೇಕ ವಿಚಾರಗಳು ಇನ್ನೂ ನೂರಾರು ಬಾಕಿಯಿದೆ.ಇದನ್ನು ಹಂತ ಹಂತವಾಗಿ ಮುಂದಿನ ದಿನದಲ್ಲಿ ತಿಳಿಸಲಾಗುವುದು.ಈ ಬಗ್ಗೆ ಶಾಸಕ ಎಸ್ ರಾಮಪ್ಪ ನವರು ಪರಿಶೀಲನೆ ಮಾಡಿ ಸರ್ಕಾರದಿಂದ ಆಗಬೇಕಾದ ಬದಲಾವಣೆಯನ್ನು ಮೊದಲು ಮಾಡಿಸಬೇಕು.
ತಿಂಗಳಲ್ಲಿ 3 ದಿನ ಮುಖ್ಯಮಂತ್ರಿಗಳು ದಾವಣಗೆರೆ ಜಿಲ್ಲಾ ಪ್ರವಾಸ ಮಾಡುತ್ತಾರೆ.ಅದರಲ್ಲೂ ಆರ್ಯರ ಮುಖ್ಯಮಂತ್ರಿಗಳಿಗೆ ತವರುಮನೆಯಾಗಿದೆ.ಈ ಸಂದರ್ಭದಲ್ಲಿ ಶಾಸಕ ಎಸ್ ರಾಮಪ್ಪನವರು ಸಿಎಂ ಅವರ ಬಳಿ ಕಂದಾಯ ಇಲಾಖೆಯ ನ್ಯೂನ್ಯತೆ ಬಗ್ಗೆ ಇನ್ನಿತರೆ ಜನರಿಗೆ ಆಗುತ್ತಿರುವ ಅನಾನುಕೂಲತೆಯ ಬಗ್ಗೆ ಗಮನವನ್ನು ಹರಿಸಿದ್ದರೆ ಜನರಿಗೆ ಅದರಿಂದ ಅನುಕೂಲವಾಗುತ್ತಿತ್ತು.ಮುಖ್ಯಮಂತ್ರಿಗಳು ಸಹ ಕೇವಲ ಮಠ ಮಂದಿರಗಳನ್ನು ಸುತ್ತುವುದರಿಂದ ಜನಸಾಮಾನ್ಯರಿಗೆ ಯಾವುದೇ ಅನುಕೂಲವಿಲ್ಲ ಎಂದು ಸಾರ್ವಜನಿಕರು ಖಾರವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.
ಈಗಲಾದರೂ ಶಾಸಕರು ಸರ್ಕಾರದ ಗಮನಕ್ಕೆ ತರಬೇಕು.ಕನಿಷ್ಠ ವಾರದಲ್ಲಿ 2ದಿನವಾದರೂ ಸರ್ಕಾರಿ ಕಚೇರಿಗೆ ಶಾಸಕರು ಭೇಟಿ ನೀಡಿ ಅಲ್ಲಿಯ ನ್ಯೂನ್ಯತೆ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಜನರು ಹೇಳುತ್ತಿದ್ದಾರೆ.
ಕ್ಷೇತ್ರದ ಮತದಾರರು ಶಾಸಕರ ಮೇಲೆ ಅಪಾರವಾದ ನಂಬಿಕೆ ಗೌರವವನ್ನು ಹೊಂದಿದ್ದಾರೆ.ಅವರು ಶಾಸಕರಿಂದ ನಿರೀಕ್ಷೆ ಮಾಡುತ್ತಿರುವದು ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸ ಸುಸಲಿತವಾಗಿ ಸಾಗುವಂತೆ ಮಾಡಿದರೆ ಸಾಕು ಮತ್ತೇನು ಶಾಸಕರಿಂದ ಅವರು ಅಪೇಕ್ಷೆ ಮಾಡೋದಿಲ್ಲ ಆ ನಿಟ್ಟಿನಲ್ಲಿ ಶಾಸಕರು ಸಾಗುತ್ತಾರೆ ಕಾದು ನೋಡಬೇಕಾಗಿದೆ.
ಹರಿಹರದ ನೂತನ ತಾಲ್ಲೂಕು ದಂಡಾಧಿಕಾರಿಗಳಾದ ಡಾಕ್ಟರ್ ಅಶ್ವತ್ಥ್ ಇವರು ಕಂದಾಯ ಇಲಾಖೆಯಲ್ಲಿ ಆಗುತ್ತಿರುವ ವಿಳಂಬ ದತ್ತ ಗಮನ ಹರಿಸುತ್ತಾರೆಯೇ ?ತಾಲ್ಲೂಕು ಕಚೇರಿಯಲ್ಲಿರುವ ನೌಕರರಿಗೆ ಈ ವಿಚಾರದಲ್ಲಿ ವಿಷಯ ಮುಟ್ಟಿಸುತ್ತಾರೆ ಎಂಬೋದನ್ನ ತಾಲ್ಲೂಕಿನ ಜನರು ಕಾಯುತ್ತಿದ್ದಾರೆ.ಬದಲಾವಣೆಯಾದರೆ ಈಗಿನ ತಹಸೀಲ್ದಾರ್ ಡಾಕ್ಟರ್ ಅಶ್ವತ್ಥ್ ಇವರಿಂದ ಬದಲಾಗಬೇಕು ಇಲ್ಲದಿದ್ದರೆ ಮುಂದೆಂದೂ ಬದಲಾಗುವುದಿಲ್ಲ ಎಂಬುದು ಜನರ ಅನಿಸಿಕೆಯಾಗಿದೆ.
ಪ್ರಕಾಶ್ ಮಂದಾರ
ಸಂಪಾದಕರು
8880499904
0 Comments