“ಬ್ರಿಟಿಷ್ ಸರ್ಕಾರ (British Government) ನನಗೆ ಎರಡು ಜೀವಾವಧಿ ಶಿಕ್ಷೆ (Life imprisonment) ನೀಡುವ ಮೂಲಕ ಹಿಂದುತ್ವದ (Hindutva) ಪುನರ್ಜನ್ಮದ ತತ್ವವನ್ನು ಒಪ್ಪಿಕೊಂಡಿದೆ. ಈ ಕಾರಣಕ್ಕೆ ನನಗೆ ಸಂತೋಷವಾಗಿದೆ.” ಇದು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ (Freedom fighter) ವಿನಾಯಕ್ ದಾಮೋದರ್ ಸಾವರ್ಕರ್ (Vinayak Damodar Savarkar) ತಮಗೆ ಬ್ರಿಟಿಷರು ಶಿಕ್ಷೆ ನೀಡಿದಾಗ ಮಾಡಿದ ಭಾವೋದ್ವೇಗದ ಘೋಷಣೆ ಇದು ಪ್ರತಿಯೊಬ್ಬ ಹಿಂದು ಕೇಳಬೇಕಾದಂತಹ ಮಹಾನ್ ನಾಯಕನ ಘೋಷಣೆ ಎಂದು ಹಾರಿಕಾ ಮಂಜುನಾಥ್ ಹೇಳಿದರು.
ನಿನ್ನೆ ದಿನ ವೀರ ಸಾವರ್ಕರ್ ಜಯಂತೋತ್ಸವದ ನೆನಪಿಗಾಗಿ ಹರಿಹರದ ಹಿಂದೂ ಚಿಂತನ ಪ್ರತಿಷ್ಠಾನದ ವತಿಯಿಂದ ನಗರದ ರಾಘವೇಂದ್ರಸ್ವಾಮಿ ಮಠ ಸಭಾಂಗಣದಲ್ಲಿ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು .ಕಾರ್ಯಕ್ರಮದ ದಿಕ್ಸೂಚಿ ಭಾಷಣವನ್ನು ಮಾಡಿದ ಕುಮಾರಿ ಹಾರಿಕಾ ಮಂಜುನಾಥ್ ಹೌದು, ವೀರ್ ಸಾವರ್ಕರ್, ಈ ಹೆಸರು ಕೇಳಿದರೆ ದೇಶದ ಅದೆಷ್ಟೋ ಯುವಕರು ಇಂದಿಗೂ ರೋಮಾಂಚನಗೊಳ್ಳುತ್ತಾರೆ. ಅವರ ಸ್ವಾತಂತ್ರ್ಯ ಹೋರಾಟ, ಹಿಂದುತ್ವದ ಬಗ್ಗೆ ಅವರ ನಿಲುವು ಯುವಕರಿಗೆ ಅಚ್ಚುಮೆಚ್ಚು ಎಂದು ಹೇಳಿದರು.
ಕುಮಾರಿ ಹಾರಿಕಾ ಮಂಜುನಾಥ್ ಇವರ ಭಾಷಣದ ವೀರಾವೇಶ ಹೇಗಿತ್ತು ಎಂದರೆ ವೀರ ಸಾವರ್ಕರ್ ಮತ್ತೆ ಹುಟ್ಟಿ ಬಂದಿದ್ದಾರೆ,ಪ್ರತಿ ಮನೆಯಲ್ಲೂ ವೀರ ಸಾವರ್ಕರ್ ರಂತಹ ಮಗ ಹುಟ್ಟಲಿ ಎನ್ನುವಂತಿತ್ತು ಕುಮಾರಿ ಹಾರಿಕಾ ಮಂಜುನಾಥ್ ಅವರು ದಿಕ್ಸೂಚಿ ಭಾಷಣ .
ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಅಸ್ತಿತ್ವದೊಂದಿಗೆ, ಪ್ರಖರ ಹಿಂದುತ್ವವಾದಿಯಾಗಿದ್ದ ವೀರ್ ಸಾವರ್ಕರ್ ಜನಿಸಿದ್ದು ಮೇ 28, 1883ರಲ್ಲಿ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಭಾಗೂರ್ ಅವರ ಜನನವಾಗಿದ್ದು, ತಂದೆ ದಾಮೋದರ್ ಪಂತ್, ತಾಯಿ ರಾಧಾಬಾಯಿ. ನಾಲ್ವರು ಸಹೋದರ, ಸಹೋದರಿಯರ ಜೊತೆ ಸಾವರ್ಕರ್ ಬೆಳೆದಿದ್ದಾರೆ. ನಾಸಿಕ್‌ನಲ್ಲಿ ವೀರ್ ಸಾವರ್ಕರ್ ಆರಂಭಿಕ ಶಿಕ್ಷಣ ಪಡೆದರು. ಚಿಕ್ಕಂದಿನಿಂದಲೇ ತೀಕ್ಷ್ಣ ಬುದ್ಧಿಶಕ್ತಿಯನ್ನು ಸಾವರ್ಕರ್ ಹೊಂದಿದ್ದರು.
ತಮ್ಮ ಬಾಲ್ಯದಲ್ಲಿಯೇ ಸಾವರ್ಕರ್ ಭಗವದ್ಗೀತೆ ಶ್ಲೋಕಗಳ ಕಂಠಪಾಠದಿಂದ ಹೆಸರಾಗಿದ್ದರು. ಆ ಸಮಯದಲ್ಲಿ ಲೋಕಮಾನ್ಯ ಬಾಲ ಗಂಗಾದರ್ ತಿಲಕ್ ಅವರ “ಕೇಸರಿ” ಪತ್ರಿಕೆ ಮಹಾರಾಷ್ಟ್ರದಲ್ಲಿ ಬಹಳ ಜನಪ್ರಿಯವಾಗಿತ್ತು. ಸಾವರ್ಕರ್ ಕೂಡ ಕೇಸರಿ ಪತ್ರಿಕೆಯನ್ನು ಓದಲು ಆರಂಭಿಸಿದ್ದಕ್ಕೆ ಅವರ ಮನಸಲ್ಲಿಯೂ ಕ್ರಾಂತಿಕಾರಿ ಆಲೋಚನೆಗಳು ಮೊಳಕೆಯೊಡೆಯಲು ಪ್ರಾರಂಭಿಸಿದವು. ಕೇಸರಿ ಪತ್ರಿಕೆಯ ಬರಹಗಳಿಂದ ಪ್ರಭಾವಿತರಾದ ಸಾವರ್ಕರ್ ಕವನಗಳು ಮತ್ತು ಲೇಖನಗಳನ್ನು ಬರೆಯಲು ಪ್ರಾರಂಭಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ವೀರ್ ಸಾವರ್ಕರ್
ಇನ್ನು, ಕಾನೂನು ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಸಾವರ್ಕರ್ ಅವರದ್ದು. ಆದರೆ, ಬ್ರಿಟಿಷ್ ಸರ್ಕಾರಕ್ಕೆ ನಿಷ್ಠೆಯ ಪ್ರಮಾಣ ವಚನ ಸ್ವೀಕರಿಸಲು ಸಾವರ್ಕರ್ ನಿರಾಕರಿಸಿದ್ದಕ್ಕೆ ಅವರಿಗೆ ವಕೀಲರ ಬಿರುದು ನೀಡಲಿಲ್ಲ. 1899ರಲ್ಲಿ "ದೇಶ ಭಕ್ತರ ಮೇಳ" ಎಂಬ ಗುಂಪನ್ನು ರಚಿಸಿದ್ದ ಸಾವರ್ಕರ್ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಅದಾಗಿ ಒಂದು ವರ್ಷದ ಬಳಿಕ 1900ರಲ್ಲಿ ಸಾವರ್ಕರ್ "ಮಿತ್ರ ಮೇಳ" ಎಂಬ ಸಂಸ್ಥೆಯನ್ನು ಕೂಡ ಸ್ಥಾಪಿಸಿದರು.
ಹಡಗಿನ ಮೂಲಕ ಲಂಡನ್‌ಗೆ ತೆರಳಿದ ವೀರ
4 ವರ್ಷಗಳ ಬಳಿಕ “ಮಿತ್ರ ಮೇಳ”ವೇ "ಅಭಿನವ್ ಭಾರತ್ ಸೊಸೈಟಿ" ಹೆಸರಿನಲ್ಲಿ ದೇಶದಲ್ಲಿ ಮುಂಚೂಣಿಗೆ ಬಂದಿತು. ಈ ಸಂಘಟನೆಯ ಪ್ರಮುಖ ಗುರಿ ಭಾರತಕ್ಕೆ ಸಂಪೂರ್ಣ ರಾಜಕೀಯ ಸ್ವಾತಂತ್ರ್ಯವನ್ನು ಸಾಧಿಸುವುದಾಗಿತ್ತು. ಈ ನಡುವೆ ಕಾನೂನು ಕಲಿಯಲು ಸಾವರ್ಕರ್ ಪರ್ಷಿಯಾ ಎಂಬ ಹಡಗಿನ ಮೂಲಕ ಜೂನ್ 1906ರಲ್ಲಿ ಲಂಡನ್‌ಗೆ ತೆರಳಿದರು. ಸಾವರ್ಕರ್‌ಗೆ ಕುಟುಂಬಸ್ಥರು, ಗೆಳೆಯರು ಸೇರಿ ಬಾಲ ಗಂಗಾದರ್ ತಿಲಕ್ ಕೂಡ ಬಂದು ಬೀಳ್ಕೊಟ್ಟಿದ್ದರು. ಲಂಡನ್‌ಗೆ ಹೊರಡುವ ಸಾವರ್ಕರ್ ರಹಸ್ಯ ಸಭೆಯೊಂದರಲ್ಲಿ “ನಾನು ಶತ್ರುಗಳ ಮನೆಗೆ ಹೋಗಿ ಭಾರತೀಯರ ಶಕ್ತಿಯನ್ನು ಪ್ರದರ್ಶಿಸುತ್ತೇನೆ” ಎಂದು ಹೇಳಿದ್ದು ಪ್ರಮುಖವಾಗಿತ್ತು.
ಇನ್ನು, ಲಂಡನ್‌ನಲ್ಲಿ ಶ್ಯಾಮ್‌ಜಿ ಕೃಷ್ಣ ವರ್ಮ ಅವರನ್ನು ಸಾವರ್ಕರ್ ಭೇಟಿಯಾದರು. ಲಂಡನ್‌ನಲ್ಲಿರುವ ಇಂಡಿಯಾ ಹೌಸ್ ಅವರ ಚಟುವಟಿಕೆಗಳ ಮುಖ್ಯ ಕೇಂದ್ರವಾಗಿತ್ತು. ಹೊಸ ಶಸ್ತ್ರಾಸ್ತ್ರಗಳನ್ನು ಖರೀದಿಸಿ ಭಾರತಕ್ಕೆ ಕಳುಹಿಸುವ ಮೂಲಕ ಸಶಸ್ತ್ರ ಕ್ರಾಂತಿ ಮಾಡುವ ಉದ್ದೇಶ ಅವರದ್ದಾಗಿತ್ತು. ಲಂಡನ್‌ನಲ್ಲಿರುವ ಅನೇಕ ವಿದ್ಯಾರ್ಥಿಗಳನ್ನು ಕ್ರಾಂತಿಗೆ ಪ್ರೇರೇಪಿಸಿದ್ದರು. ಇಂಡಿಯಾ ಹೌಸ್‌ನಲ್ಲಿ ಶ್ಯಾಮ್ ಜಿ ಕೃಷ್ಣ ವರ್ಮಾ ಅವರೊಂದಿಗೆ ಭಾಯಿ ಪರ್ಮಾನಂದ್, ಲಾಲಾ ಹರದಯಾಳ್, ಜ್ಞಾನಚಂದ್ ವರ್ಮಾ, ಮದನ್ ಲಾಲ್ ದಿಂಗ್ರಾ ಅವರಂತಹ ಕ್ರಾಂತಿಕಾರಿಗಳು ಕೂಡ ವಾಸಿಸುತ್ತಿದ್ದರು.
ಸಾವರ್ಕರ್ ಅವರಿಗೆ ಜೀವಾವಧಿ ಶಿಕ್ಷೆ
ಸಾವರ್ಕರ್ ಅವರ ಚಟುವಟಿಕೆಗಳನ್ನು ಗಮನಿಸಿದ ಬ್ರಿಟಿಷ್ ಪೊಲೀಸರು ಮಾರ್ಚ್ 13, 1910ರಂದು ಅವರನ್ನು ಬಂಧಿಸಿದ್ದರು. ಮೋರಿಯಾ ಎಂಬ ಹಡಗಿನ ಮೂಲಕ ಸಾವರ್ಕರ್ ಅವರನ್ನು ಭಾರತಕ್ಕೆ ಕರೆತರಲಾಯಿತು. ಜುಲೈ 10, 1910ರಂದು ಮೊರ್ಸಿಲ್ಲೆಸ್ ಬಂದರಿನಲ್ಲಿ ಹಡಗು ಬಂದು ನಿಂತಾಗ ಸಮುದ್ರಕ್ಕೆ ಹಾರಿದ್ದ ಸಾವರ್ಕರ್ ಈಜಿ ದಡ ಸೇರಿದ್ದರು. ಆ ಬಳಿಕ ಫ್ರೆಂಚ್ ಪೊಲೀಸರಿಗೆ ತಾವೇ ಶರಣಾಗಿದ್ದರು.
ಆದರೆ, ಆಗಿನ ಬ್ರಿಟಿಷ್ ಸರ್ಕಾರ ಸಾವರ್ಕರ್ ಅವರನ್ನು ಫ್ರೆಂಚ್ ಸರ್ಕಾರದಿಂದ ತಮ್ಮ ವಶಕ್ಕೆ ಪಡೆಯಿತು. ಹೇಗ್ ಕೋರ್ಟ್‌ನಲ್ಲಿ ವಿಚಾರಣೆ ನಡೆದು, ಬ್ರಿಟಿಷರ ಆಡಳಿತದ ವಿರುದ್ಧ ಪಿತೂರಿ ನಡೆಸಿದ ಹಾಗೂ ಶಸ್ತ್ರಾಸ್ತ್ರಗಳ ಪೂರೈಕೆಯ ವಿಚಾರವಾಗಿ ಸಾವರ್ಕರ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
ಸಾವರ್ಕರ್ ಅವರ ಎಲ್ಲ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಮತ್ತೊಂದು ಪ್ರಕರಣದಲ್ಲಿ ಬ್ರಿಟಿಷ್ ನ್ಯಾಯಾಧೀಶರು ಜನವರಿ 30, 1911ರಂದು ಸಾವರ್ಕರ್ ಅವರಿಗೆ ಮತ್ತೊಂದು ಜೀವಾವಧಿ ಶಿಕ್ಷೆ ವಿಧಿಸಿದರು. ಹೀಗಾಗಿ ಸಾವರ್ಕರ್ ಎರಡು ಜೀವಾವಧಿ ಶಿಕ್ಷೆಗೆ ಗುರಿಯಾದರು. ಈ ಕಾರಣಕ್ಕಾಗಿ ಸಾವರ್ಕರ್, "ಬ್ರಿಟಿಷ್ ಸರ್ಕಾರವು ನನಗೆ ಎರಡು ಜೀವಾವಧಿ ಶಿಕ್ಷೆ ನೀಡುವ ಮೂಲಕ ಹಿಂದೂ ಪುನರ್ಜನ್ಮದ ತತ್ವವನ್ನು ಒಪ್ಪಿಕೊಂಡಂತಾಗಿದೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದರು.
1857ರ ಸ್ವಾತಂತ್ರ್ಯ ಸಂಗ್ರಾಮ
ಇನ್ನು, ವೀರ್ ಸಾವರ್ಕರ್ ಅವರು ಬ್ರಿಟಿಷ್ ದಾಖಲೆಗಳನ್ನು ಅಧ್ಯಯನ ಮಾಡಿದ ಬಳಿಕ "ದಿ ಫ್ರೀಡಂ ಸ್ಟ್ರಗಲ್ ಆಫ್ 1857" ಎಂಬ ಪುಸ್ತಕವನ್ನು ಬರೆದರು. ರಹಸ್ಯವಾಗಿ ಮುದ್ರಿಸಲು ಅದನ್ನು ಭಾರತಕ್ಕೆ ಕಳುಹಿಸಲಾಯಿತು. ಈ ಪುಸ್ತಕದಲ್ಲಿನ ಮಾಹಿತಿಗೆ ಬ್ರಿಟಿಷ್ ಸರ್ಕಾರವು ನಡುಗಿ, ಅದನ್ನು ಪ್ರಕಟಿಸಲು ಅನುಮತಿಸಲೇ ಇಲ್ಲ. ಬಳಿಕ ಪ್ಯಾರಿಸ್‌ನಲ್ಲಿ ಅದನ್ನು ಮುದ್ರಿಸಲು ಪ್ರಯತ್ನಿಸಿದರು, ಅಲ್ಲಿಯೂ ಅದು ಸಾಧ್ಯವಾಗಲಿಲ್ಲ.
1857ರ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಬರೆದಿರುವ ಸಾವರ್ಕರ್ ಬರೆದಿರುವ ಪುಸ್ತಕ ಅತ್ಯಂತ ವಿಶ್ವಾಸಾರ್ಹವಾಗಿದೆ. ಸಾವರ್ಕರ್ ಏನಾದ್ರೂ ಆ ಪುಸ್ತಕ ಬರೆಯದೇ ಇದ್ದಿದ್ದರೆ 1857ರ ಕ್ರಾಂತಿ ಇತಿಹಾಸದಲ್ಲಿ ಸಣ್ಣ ದೇಶದ್ರೋಹದ ಘಟನೆಯಾಗಿಯೇ ಉಳಿದುಬಿಡುತ್ತಿತ್ತು.
ಅಂಡಮಾನ್‌ನ ಕಾಲೇಪಾನಿ ಜೈಲು
1911ರಲ್ಲಿ ಸಾವರ್ಕರ್ ಅವರನ್ನು ಅಂಡಮಾನ್‌ನ ಕಾಲೇಪಾನಿಗೆ ಕಳುಹಿಸಲಾಯಿತು. ಅವರ ಅಣ್ಣ ಗಣೇಶ್ ಸಾವರ್ಕರ್ ಕೂಡ ಅಲ್ಲಿಯೇ ಇದ್ದರು. ಕಾಲೇಪಾನಿ ಜೈಲಿನಲ್ಲಿ ಸಾವರ್ಕರ್ ಭೀಕರ ಹಿಂಸೆ ಅನುಭವಿಸಿದ್ದರು. ತಮ್ಮ ಜೈಲಿನ ಜೀವನದ ಬಗ್ಗೆ ಸಾವರ್ಕರ್, “ಮೇರಾ ಲೈಫ್ ಜೈಲ್” ಪುಸ್ತಕದಲ್ಲಿ ವಿವರಿಸಿದ್ದಾರೆ. ಅಂಡಮಾನ್‌ನಲ್ಲಿನ ಜೈಲಿನ ಕತ್ತಲೆಯ ಕೋಣೆಯಲ್ಲಿ ಬಹಳ ಸುಂದರವಾದ ಕವಿತೆಗಳನ್ನು ಅವರು ಬರೆದರು. ಸಾವಿನ ಬಗ್ಗೆ ಸಾವರ್ಕರ್ ಬರೆದ ಕವಿತೆ ಮನ ಮುಟ್ಟುವಂತದ್ದಾಗಿದ್ದು, ದೇಶಭಕ್ತಿಯ ಭಾವವನ್ನು ಹೊಂದಿತ್ತು.
ಅದಾದ ಬಳಿಕ 1921ರಲ್ಲಿ ಸಾವರ್ಕರ್ ಅವರನ್ನು ಕಾಲೇಪಾನಿಯಿಂದ ರತ್ನಗಿರಿ ಜೈಲಿಗೆ ಕಳುಹಿಸಲಾಯಿತು. 1937ರಲ್ಲಿ, ಅವರು ಜೈಲಿನಿಂದ ಬಿಡುಗಡೆಗೊಂಡರು. ನಂತರ ಅವರು ಸುಭಾಷ್ ಚಂದ್ರ ಬೋಸ್ ಅವರೊಂದಿಗೆ ತಮ್ಮ ಯೋಜನೆಗಳನ್ನು ಮುಂದುವರಿಸಿದರು. 1948ರಲ್ಲಿ ಮಹಾತ್ಮಾ ಗಾಂಧೀಜಿ ಅವರ ಹತ್ಯೆಯಲ್ಲಿ ಸಾವರ್ಕರ್ ಅವರ ಮೇಲೆ ನಿರಾಧಾರ ಆರೋಪ ಹೋರಿಸಲಾಯಿತು. ಆದರೆ, ಕೆಲವೇ ದಿನಗಳಲ್ಲಿ ಅವರು ನಿರಪರಾಧಿ ಎಂದು ಸಾಬೀತಾಯಿತು. ಈ ಘಟನೆಯ ಬಳಿಕ ಸಾವರ್ಕರ್ ಆರೋಗ್ಯ ಹದಗೆಟ್ಟು ಫೆಬ್ರವರಿ 26, 1966ರಂದು ಇಹಲೋಕ ತ್ಯಜಿಸಿದರು. ಈ ಮೂಲಕ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಪ್ರಖರ ಹಿಂದುತ್ವವಾದಿಯ ರೋಚಕ ಕಥೆ ಅಂತ್ಯವಾಯಿತು.ಕುಮಾರಿ ಹಾರಿಕಾ ಮಂಜುನಾಥ್ ಇವರ ದಿಕ್ಸೂಚಿ ಭಾಷಣವನ್ನು ಆಲಿಸುತ್ತಿದ್ದ ತಾಲ್ಲೂಕಿನ ನೂರಾರು ಯುವಕರು ಒಮ್ಮೆ ಮೂಕ ವಿಸ್ಮಿತರಾದರು.ಕುಮಾರಿ ತನ್ನ ಪ್ರೌಢಾವಸ್ಥೆಯಲ್ಲಿ ವೀರ ಸಾವರ್ಕರ್ ಅವರ ಬಗ್ಗೆ ಅನೇಕ ವಿಚಾರಗಳನ್ನು ತಿಳಿದುಕೊಂಡಿರುವುದು ಅವರಲ್ಲಿರುವ ದೇಶಭಕ್ತಿ ಎದ್ದು ಕಾಣುತ್ತಿತ್ತು.ಒಬ್ಬ ವೀರ ಕ್ರಾಂತಿಕಾರನ ಹೋರಾಟದ ಇಂಚಿಂಚು ಮಾಹಿತಿಯನ್ನು ತಮ್ಮ ದಿಕ್ಶೂಚಿ ಭಾಷಣ ರೂಪದಲ್ಲಿ ನೆರೆದಿದ್ದ ಯುವಕರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು .ಕಾರ್ಯಕ್ರಮದ ಆಯೋಜಕರು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನ ಆಯೋಜನೆ ಮಾಡುವ ಮೂಲಕ ನಮ್ಮ ಹಿಂದೂ ಯುವಕರನ್ನು ಬಡಿದೆಬ್ಬಿಸುವ ಪ್ರಯತ್ನವನ್ನು ಮಾಡಿದ್ದಂತೂ ಸತ್ಯ .
ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಸಮಸ್ತ ದೇಶಭಕ್ತರು ಉಪಸ್ಥಿತರಿದ್ದು ಹಾರಿಕಾ ಮಂಜುನಾಥ್ ಇವರ ದಿಕ್ಸೂಚಿ ಭಾಷಣವನ್ನು ಆಲಿಸಿದರು.
ಪ್ರಕಾಶ್ ಮಂದಾರ
ಸಂಪಾದಕರು
8880499904
0 Comments