ಹರಿಹರ ತಾಲ್ಲೂಕಿನಾದ್ಯಂತ ಅಕ್ರಮವಾಗಿ ಹೊಳೆ ಮಣ್ಣು ಸಾಗಾಣಿಕೆ: ಜಿ.ಮಂಜುನಾಥ್ ಆರೋಪ.


ಹರಿಹರ:ಹರಿಹರ ತಾಲ್ಲೂಕಿನಾದ್ಯಂತ ಅಕ್ರಮವಾಗಿ ಹೊಳೆ ಮಣ್ಣು ಸಾಗಾಣಿಕೆ ಆಗುತ್ತಿದ್ದು ಇದು ಒಂದು ದೊಡ್ಡ ಮಾಫಿಯವಾಗಿ ಬೆಳೆದಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಜಿ ಮಂಜುನಾಥ್ ಆರೋಪಿಸಿದ್ದಾರೆ.

ಇಂದು ತಾಲ್ಲೂಕು ದಂಡಾಧಿಕಾರಿ ಡಾ॥ಅಶ್ವಥ್.ಎಂ.ಬಿ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದ ಅವರು ಹರಿಹರ ತಾಲ್ಲೂಕಿನಾದ್ಯಂತ ಎಗ್ಗಿಲ್ಲದೆ ಹೊಳೆ ಮಣ್ಣಿನ ಮಾಫಿಯಾ ನಡೆಯುತ್ತಿದೆ ಅಕ್ರಮವಾಗಿ ತಾಲ್ಲೂಕಿನ ಗುತ್ತೂರು, ದೀಟೂರು, ಪಾಮೇನಹಳ್ಳಿ,ಸಾರಥಿ,ಕರ್ಲಹಳ್ಳಿ,ಚಿಕ್ಕಬಿದರಿ ಗ್ರಾಮಗಳಲ್ಲಿ ಉಳುಮೆ ಮಾಡುವಂಥ ಜಮೀನುಗಳಲ್ಲಿ ಅಕ್ರಮವಾಗಿ ಹೊಳೆ ಮಣ್ಣಿನ ಮಾಫಿಯಾ ನಡೆಯುತ್ತಿದೆ.ಸರ್ಕಾರದ ಆದೇಶದಂತೆ ತಮ್ಮ ಜಮೀನುಗಳ ಅಭಿವೃದ್ಧಿಗೆ ದೃಷ್ಟಿಯಿಂದ 3ಅಡಿ ವರೆಗೂ ಮಾತ್ರ ಜಮೀನನ್ನ ಅಗಿಯಲು ಅವಕಾಶವಿದೆ .3 ಅಡಿಗಿಂತ ಕೆಳಗೆ ಜಮೀನಿನನ್ನು ಅಗಿಯಲು ಕಾನೂನಿನಲ್ಲಿ ಅವಕಾಶವಿಲ್ಲ.ಆದರೆ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡುವ ಮಾಫಿಯಾದವರು ಸರ್ಕಾರದ ಕಾನೂನು ಆದೇಶಗಳನ್ನು ಉಲ್ಲಂಘನೆ ಮಾಡಿ ಸರಿಸುಮಾರು ಹತ್ತರಿಂದ ಇಪ್ಪತ್ತು ಅಡಿಗಿಂತ ಹೆಚ್ಚಿನ ಆಳದವರೆಗೂ ಮಣ್ಣನ್ನ ಅಗೆಯುತ್ತಿದ್ದಾರೆ.ಅದರಲ್ಲೂ ಜೆಸಿಬಿ ಹಿಟಾಚಿ ಬಳಸಿ ಭೂತಾಯಿಯ ಒಡಲನ್ನು ಬಗೆದು ಯಥೇಚ್ಛವಾಗಿ ಮಣ್ಣನ್ನು ತೆಗೆದು,10 ವೀಲ್,6 ವೀಲ್ ಲಾರಿಗಳ ಮೂಲಕ ಯಾವುದೇ ಪರ್ಮಿಟ್ ಇಲ್ಲದೆ ಅಕ್ರಮವಾಗಿ ಮಣ್ಣನ್ನು ಸಾಗಾಣಿಕೆ ಮಾಡುತ್ತಿದ್ದಾರೆ.
ಅನುಮತಿ ಇಲ್ಲದ ನೂರಾರು ಇಟ್ಟಿಗೆ ಭಟ್ಟಿಗಳಿಗೆ ಅನಧಿಕೃತವಾಗಿ ಭೂತಾಯಿಯ ಒಡಲನ್ನು ಬಗೆದು ತೆಗೆದ ನೂರಾರು ಲೋಡ್ ಗಟ್ಟಲೆ ಮಣ್ಣನ್ನು 1ಲೋಡಿಗೆ ಏಳರಿಂದ 8ಸಾವಿರ ರೂಪಾಯಿವರೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಜಿ ಮಂಜುನಾಥ್ ನೇರವಾಗಿ ಆರೋಪಿಸಿದ್ದಾರೆ.

ಈ ರೀತಿ ಸರ್ಕಾರದ ಕಾನೂನು ಆದೇಶಗಳನ್ನು ಉಲ್ಲಂಘಿಸಿ ಭೂತಾಯಿಯ ಒಡಲನ್ನು ಬಗೆದು ಅಕ್ರಮವಾಗಿ ಮಣ್ಣನ್ನು ಸಾಗಿಸುತ್ತಿರುವರ ಮೇಲೆ ಕಾನೂನು ರೀತಿ ಶಿಸ್ತು ಕ್ರಮ ತೆಗೆದುಕೊಳ್ಳಬೇಕು.ಅದೇ ರೀತಿ ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಈ ಮಣ್ಣು ಮಾಫಿಯಾವನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ಇಂದು ಹರಿಹರ ತಾಲ್ಲೂಕು ದಂಡಾಧಿಕಾರಿ ಡಾ॥ ಅಶ್ವತ್ಥ್ ಎಂ.ಬಿ ಇವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ತಾಲ್ಲೂಕು ದಂಡಾಧಿಕಾರಿ ಡಾ॥ ಎಂ. ಬಿ ಅಶ್ವತ್ಥ್ ಅವರು ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಯನ್ನು ಪಡೆದು ನಮ್ಮ ಕಂದಾಯ ಇಲಾಖೆಯ ಚೌಕಟ್ಟಿನ ಅಡಿಯಲ್ಲಿ ಏನು ಕ್ರಮ ತೆಗೆದುಕೊಳ್ಳಲು ಸಾಧ್ಯವೋ ಈ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಅದೇ ರೀತಿ ಅಕ್ರಮ ಮಣ್ಣು ಸಾಗಣೆ  ತಡೆಗಟ್ಟುವ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗುತ್ತೇವೆ ಎಂಬ ಭರವಸೆಯನ್ನು ಸಂಬಂಧಿಸಿದ ಸಂಘಟನೆಯ ಅಧ್ಯಕ್ಷರಿಗೆ ನೀಡಿದರು .

ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಆರ್ ಶ್ರೀನಿವಾಸ್ ,ಮಾಲತೇಶ, ಬಸವರಾಜ್, ರವಿಚಂದ್ರನ್ ,ಗಣೇಶ್ ,ಉಪಸ್ಥಿತರಿದ್ದರು.

Post a Comment

0 Comments