2023 ರಾಣೇಬೆನ್ನೂರು ಮತದಾರರ ಮುಖದಲ್ಲಿ ಸಂತೋಷ.!?


ರಾಣೇಬೆನ್ನೂರು:ರಾಜಾಹುಲಿ ಬಿ.ಎಸ್ ಯಡಿಯೂರಪ್ಪನವರ ಮೆಚ್ಚಿನ ನಗರಗಳಲ್ಲಿ ರಾಣೇಬೆನ್ನೂರು ಸಹ ಒಂದು.ತುಂಗಭದ್ರಾ ನದಿಗೆ ಹೊಂದಿಕೊಂಡಿರುವ ರಾಣೇಬೆನ್ನೂರು ಔದ್ಯೋಗಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ,ಶೈಕ್ಷಣಿಕವಾಗಿ ರಾಜ್ಯದ ಗಮನವನ್ನು ಸೆಳೆದಂತಹ ಪ್ರಮುಖ ನಗರಗಳಲ್ಲಿ ರಾಣೇಬೆನ್ನೂರು ಸಹ ಒಂದು.ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಸಹ ಕರೆಯುತ್ತಾರೆ.
ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಇಚ್ಛೆಯನ್ನು ರಾಜ್ಯದ ಅನೇಕ ನಾಯಕರು ಹೊಂದಿದ್ದಾರೆ.ಈ ಹಿಂದೆಯೂ ಸಹ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಬಿ.ಎಸ್ ಯಡಿಯೂರಪ್ಪನವರ ಪುತ್ರರಾದ ಬಿ.ವೈ ರಾಘವೇಂದ್ರ ಸ್ಪರ್ಧಿಸುತ್ತಾರೆ ಎಂಬ ಮಾತು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹರಿದಾಡಿತ್ತು.ತದನಂತರ ನಡೆದ ಉಪಚುನಾವಣೆಯಲ್ಲಿ ಬಿ.ವೈ ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹದ ಮಾತುಗಳು ಕೇಳಿ ಬಂದಿತ್ತು.ಅದೇ ರೀತಿ ಉಪ ಮುಖ್ಯಮಂತ್ರಿ ಹಾಗೂ ಮಾಜಿ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಸ್ಪರ್ಧಿಸುತ್ತಾರೆ,ಇಲ್ಲ ಅವರ ಪುತ್ರ ಸ್ಪರ್ಧಿಸುತ್ತಾರೆ ಹೀಗೆ ಅನೇಕ ರೀತಿಯಲ್ಲಿ ಪ್ರಮುಖ ರಾಜಕೀಯ ಪಕ್ಷದ ನಾಯಕರು ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಆಗಾಗ ಹರಿದಾಡುತ್ತಲೇ ಇರುತ್ತದೆ .

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಅನೇಕ ನಾಯಕರು ತಾಮುಂದೆ,ನಾಮುಂದೆ ಎಂದು ಮುಗಿ ಬೀಳಲು ಪ್ರಮುಖ ಕಾರಣ ಇಲ್ಲಿನ ಮತದಾರರು.

ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಮತದಾರರು ಬುದ್ದಿವಂತರು,ದಾಸೋಹಕ್ಕೆ ಹೆಸರಾದವರು,ಹಸಿದವರ ಹೊಟ್ಟೆಯನ್ನು ಹೇಗೆ ತುಂಬಿಸುತ್ತಾರೋ ಅದೇ ರೀತಿ ತಮ್ಮನ್ನು ನಂಬಿಬಂದ ನಾಯಕರನ್ನ ಕೈ ಹಿಡಿದು ಮುನ್ನಡೆಸುತ್ತಾರೆ.ಅದಕ್ಕಾಗಿಯೇ ಬಿ.ಎಸ್ ಯಡಿಯೂರಪ್ಪನವರು ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರವನ್ನು ತುಂಬ ಇಷ್ಟಪಡುತ್ತಾರೆ .
ಮುಂದಿನ ರಾಜ್ಯ ವಿಧಾನಸಭಾ  ಚುನಾವಣೆಯಲ್ಲಿ ರಾಣೆಬೆನ್ನೂರು ಕ್ಷೇತ್ರದಿಂದ ಸ್ಪರ್ಧಿಸಲು ಈಗಾಗಲೇ ಪ್ರಮುಖ ಪಕ್ಷದ ಸ್ಪರ್ಧಾಕಾಂಕ್ಷಿಗಳು ಭರ್ಜರಿ ತಯಾರಿ ನಡೆಸಿದ್ದಾರೆ .ಕ್ಷೇತ್ರದ ಮತದಾರರ ಮನ ಗೆಲ್ಲಲು ಅನೇಕ ವಿಧದ ತಂತ್ರಗಳನ್ನು ನಡೆಸುತ್ತಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಣೇಬೆನ್ನೂರಿನ ಮತದಾರರ ಮುಖದಲ್ಲಿ 'ಸಂತೋಷ' ಅರಳುವ ಸಮಯ ಈಗ ಕೂಡಿ ಬಂದಿದೆ.ಕಳೆದ ಉಪಚುನಾವಣೆಯಲ್ಲಿ ಕ್ಷೇತ್ರದ ಮತದಾರರ ಮುಖದಲ್ಲಿ 'ಸಂತೋಷ'ಅರಳಬೇಕಾಗಿತ್ತು.ಆದರೆ ಕೊನೆ ಕ್ಷಣದಲ್ಲಿ ಶಂಕರನ ಕೃಪೆಯಿಂದ ರಾಣೇಬೆನ್ನೂರಿನಲ್ಲಿ ಅರುಣೋದಯವಾಯಿತು.
ಆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಮತದಾರರ ಮುಖದಲ್ಲಿ ಸಂತೋಷ ಅರಳುವುದು ನಿಶ್ಚಯವಾಗಿದೆ.ಈಗಾಗಲೇ ಕ್ಷೇತ್ರದ ಮತದಾರರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಣೆಬೆನ್ನೂರು ತಾಲ್ಲೂಕಿನಾದ್ಯಂತ 'ಸಂತೋಷ'ದಲ್ಲಿ ಕಮಲವನ್ನು ಅರಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಮತ್ತೆ ರಾಣೆಬೆನ್ನೂರಿನಲ್ಲಿ ಅರುಣೋದಯ ವಾಗಬೇಕಾದರೆ ಸ್ವಾಮೀಜಿಯೊಬ್ಬರ ಕೃಪಾಕಟಾಕ್ಷ ಇರಲೇಬೇಕಾಗಿದೆ.ಒಂದು ವೇಳೆ ಸ್ವಾಮೀಜಿಯ ಕೃಪಾಕಟಾಕ್ಷದಿಂದ ರಾಣೇಬೆನ್ನೂರಿನಲ್ಲಿ ಅರುಣೋದಯ ವಾಗುವುದಾದರೆ.ಕ್ಷೇತ್ರದ ಮತದಾರರ ಮುಖದಲ್ಲಿ 'ಸಂತೋಷ' ಮಾಯವಾಗಬಹುದು!?ಈ ಬಾರಿ ಅರುಣೋದಯವಾಗುವುದು ಸ್ವಲ್ಪ ಕಷ್ಟವೇ ?ಏಕೆಂದರೆ ಕಳೆದ ಉಪಚುನಾವಣೆಯ ನಂತರ ದಿನದಿಂದಲೇ ಕ್ಷೇತ್ರದ ಮತದಾರರು 'ಸಂತೋಷ'ಕಳೆದುಕೊಂಡಿದ್ದಾರೆ.ಕ್ಷೇತ್ರದಲ್ಲಿ ಮತ್ತೆ ಅರುಣೋದಯವಾಗಬೇಕಾದರೆ ಅದಕ್ಕೂ ಮೊದಲು ಮತದಾರರ ಮುಖದಲ್ಲಿ ಸಂತೋಷ ಅರಳಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಒಂದು ವೇಳೆ ಕ್ಷೇತ್ರದ ಮತದಾರರಲ್ಲಿ 'ಸಂತೋಷ' ಅರಳದಿದ್ದರೆ ,ಮತದಾರರು ನಿರಾಶರಾಗದೆ ಅದೇ 'ಸಂತೋಷ'ದಲ್ಲಿ 'ಪೊರಕೆ' ಹಿಡಿದು ಕ್ಷೇತ್ರದ ತುಂಬಾ  ಮತದಾರರನ್ನ ಗುಡಿಸಿ ತಮ್ಮ ಬುಟ್ಟಿಗೆ ಹಾಕಿಕೊಳ್ಳಬಹುದು?ಆ ಅವಕಾಶವನ್ನು ಅಲ್ಲೆಗಳೆಯುವಂತಿಲ್ಲ.

ಒಟ್ಟಾರೆಯಾಗಿ ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ 'ಸಂತೋಷ'ದಲ್ಲಿ ಅರಳಬಹುದು?ಇಲ್ಲಾ ಸಂತೋಷದಿಂದ ಗುಡಿಸಬಹುದು?ಒಟ್ಟಾರೆಯಾಗಿ ಮುಂದಿನ ರಾಣೆಬೆನ್ನೂರು ಕ್ಷೇತ್ರದ ತುಂಬಾ 'ಸಂತೋಷ'.ಕ್ಷೇತ್ರದ ಎಲ್ಲಾ ವರ್ಗದ ಜನರ ಮುಖದಲ್ಲಿ ಸಂತೋಷ ಅರಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕ್ಷೇತ್ರದ ಮತದಾರರು ಆ 'ಸಂತೋಷ'ಕ್ಕಾಗಿ ಕಾಯುತ್ತಿದ್ದಾರೆ......

ಪ್ರಕಾಶ್ ಮಂದಾರ.
8880499904

Post a Comment

0 Comments