ಹರಿಹರ:ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್,ಜಿಲ್ಲಾ ಆಯುಷ್ ಇಲಾಖೆ,ಭಾರತೀಯ ಪುರಾತತ್ವ ಇಲಾಖೆ,ದಾವಣಗೆರೆ. ತಾಲ್ಲೂಕಾಡಳಿತ,ಧನ್ವಂತರಿ ಪತಂಜಲಿ ಆರೋಗ್ಯ ಕೇಂದ್ರ, ಸಪ್ತರ್ಷಿ ಯೋಗ ಸ್ಪೋರ್ಟ್ಸ್ ಅಕಾಡೆಮಿ,ಹರಿಹರ.ತಪೋವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ದಾವಣಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ 8 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು "ಮಾನವೀಯತೆಗಾಗಿ ಯೋಗ" ಎಂಬ ಘೋಷವಾಕ್ಯದೊಂದಿಗೆ ನಾಳೆ ಬೆಳಗ್ಗೆ 5.30 ಕ್ಕೆ ಐತಿಹಾಸಿಕ ಪಾರಂಪರಿಕ ಕ್ಷೇತ್ರವಾದ ಹರಿಹರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಬೈರತಿ ಬಸವರಾಜ್ ನೆರೆವೇರಿಸಲಿದ್ದಾರೆ . ಹರಿಹರದ ಶಾಸಕ ಎಸ್ ರಾಮಪ್ಪ ನವರು ಅಧ್ಯಕ್ಷತೆ ವಹಿಸಲಿದ್ದು,ಮುಖ್ಯ ಅತಿಥಿಗಳಾಗಿ ದಾವಣಗೇರಿ ಸಂಸದರಾದ ಜಿ ಎಂ ಸಿದ್ದೇಶ್ ,ವಿಧಾನಪರಿಷತ್ ಸದಸ್ಯರಾದ ಡಾ.ವೈ ಎ ನಾರಾಯಣಸ್ವಾಮಿ,ಮೋಹನ್ ಕುಮಾರ್ ಕೊಂಡಜ್ಜಿ ,ಚಿದಾನಂದ ಎಂ. ಗೌಡ,ಕೆ ಎಸ್ ನವೀನ್,ನಗರಸಭೆ ಸದಸ್ಯರಾದ ಶ್ರೀಮತಿ ಶಾಹಿನಾಬಾನು ದಾದಪೀರ್, ತಪೋವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಚೇರ್ ಮನ್ ಡಾ॥ ಶಶಿಕುಮಾರ್ ಮೆಹರವಾಡೆ,ವಿಶೇಷ ಆಹ್ವಾನಿತರಾಗಿ ಶ್ರೀ ರಾಮಚಂದ್ರಪ್ಪ ಭಾ.ಅ.ಸೇ ಮಾನ್ಯ ಆಯುಕ್ತರು ಆಯುಷ್ ಇಲಾಖೆ ಬೆಂಗಳೂರು.ಉಪಸ್ಥಿತರಿರಲಿದ್ದಾರೆ.
ಈ ವೇಳಾಪಟ್ಟಿಯಂತೆ ಎಂಟನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮ ನಡೆಯಲಿದೆ .
ಧ್ಯಾನ :5:30 ರಿಂದ 6 ಗಂಟೆಯವರೆಗೆ,
ವೇದಿಕೆ ಕಾರ್ಯಕ್ರಮ:6 ರಿಂದ 6:55 ರವರೆಗೆ.
ಯೇೂಗ ಕಾರ್ಯಕ್ರಮ :7 ರಿಂದ 7:35 ರವರೆಗೆ.
ಸನ್ಮಾನ ಕಾರ್ಯಕ್ರಮ 7:40 ರಿಂದ .
ನಂತರ ಉಪಾಹಾರ .ನಡೆಯಲಿದೆ ಎಂದು ತಾಲ್ಲೂಕಾಡಳಿತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ .
ಈ ಕಾರ್ಯಕ್ರಮದಲ್ಲಿ ಹರಿಹರದ ಎಲ್ಲಾ ಇಲಾಖೆಯ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗ ,ಹರಿಹರದ ಎಲ್ಲಾ ಯೋಗಾಸಕ್ತರು, ಸಾರ್ವಜನಿಕರು ವಿವಿಧ ಸಂಘ ಸಂಸ್ಥೆಗಳು,ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ನಿರ್ದೇಶಕರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹರಿಹರ.ಹರಿಹರ ತಾಲ್ಲೂಕಿನ ಎಲ್ಲಾ ಆಯುಷ್ ವೈದ್ಯಾಧಿಕಾರಿಗಳು ಹಾಗೂ ಚಿಗಟೇರಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಆಯುಷ್ ವಿಭಾಗದ ಎಲ್ಲ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ನಾಳೆಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ .
0 Comments