ಹಲಗೇರಿ ಪೋಲಿಸರಿಂದ ಮಿಂಚಿನ ಕಾರ್ಯಾಚರಣೆ,ಅಪೆ ಆಟೊ ಕಳ್ಳರ ಬಂಧನ .!!!


ರಾಣೇಬೆನ್ನೂರು:ರಾಣೇಬೆನ್ನೂರು ತಾಲ್ಲೂಕು ಹಲಗೇರಿ ಪೋಲಿಸ್ ಇಲಾಖೆಯಿಂದ ನಿನ್ನೆ ದಿನ ಮಿಂಚಿನ ಕಾರ್ಯಾಚರಣೆ ನಡೆಸಿ ಆಪೆ ಆಟೊ ಮತ್ತು ಕಬ್ಬಿಣವನ್ನು ಕಳ್ಳತನ ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿಗಳಿಂದ ಸರಿ ಸುಮಾರು 4.15.000 ರೂಪಾಯಿಗಳ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.ರಾಣೇಬೆನ್ನೂರಿನ ಮೂರು ಜನ ಆರೋಪಿತರು ಈ ಕೃತ್ಯದಲ್ಲಿ ಭಾಗಿಯಾಗಿದ್ದರು.ಇವರು ಬೈಕ್ ಕಳ್ಳತನದ ಜೊತೆಗೆ ಅಪೆ ಗೂಡ್ಸ್  ಆಟೋಗಳು ಮತ್ತು ಕಬ್ಬಿಣವನ್ನು ಕಳ್ಳತನ ಮಾಡುತ್ತಿದ್ದರು.

ಆರೋಪಿತರ ಪತ್ತೆಗಾಗಿ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾವೇರಿ ಮತ್ತು ಪೊಲೀಸ್ ಉಪ ಅಧೀಕ್ಷ ಕರು ರಾಣೇಬೆನ್ನೂರ ಅವರ ಮಾರ್ಗದರ್ಶನದಲ್ಲಿ  ಬೈಕ್ ಹಾಗೂ ಆಪೆ ಗೂಡ್ಸ್ ವಾಹನದಲ್ಲಿ ಕಬ್ಬಿಣ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲು ಒಂದು ವಿಶೇಷ ತಂಡವನ್ನು ಹಲಗೇರಿ ಮತ್ತು ಕುಮಾರಪಟ್ಟಣಂ ವೃತ್ತ ನಿರೀಕ್ಷಕರಾದ ಶ್ರೀಮತಿ ಭಾಗ್ಯವತಿ ಬಂತಿ ಅವರ ನೇತೃತ್ವದಲ್ಲಿ ಹಲಗೇರಿ ಪೊಲೀಸ್ ಠಾಣೆಯ ಪಿಎಸ್ ಐ ಮೇಘರಾಜ್ ಎಂ.ವಿ ಮತ್ತು ಪಿಎಸ್ ಐ ಶ್ರೀ ಕೆ.ಸಿ ಕೋಮಲಾಚಾರ್ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡವನ್ನು ಆರೋಪಿತರ ಪತ್ತೆಗಾಗಿ ರಚಿಸಲಾಗಿತ್ತು.

ಈ ವಿಶೇಷ ತಂಡದ ಮಿಂಚಿನ ಕಾರ್ಯಾಚರಣೆಯಿಂದ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಇವರಿಂದ ಬರೋಬ್ಬರಿ 4.15.000 ರೂಪಾಯಿಗಳ ಮೌಲ್ಯದ ತತ್ತ್ವವನ್ನ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಹಲಗೇರಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ವಿ.ಎಚ್ ಕೊಪ್ಪದ್ ಮಾರುತಿ ಬಣಕಾರ್, ಎಂ ಎನ್ ಗೇೂಣೆರ,ಮಂಜುನಾಥ್ ಗೌಡ್ರ,ಕೃಷ್ಣ ಎಂ.ಆರ್ ಹಾಗೂ ಪ್ರೊಬೆಷನರಿ ಪಿಎಸ್ಐ ಶರತ್, ಮಹೇಶ್ ಕುಮಾರ್ ಮತ್ತು ಇತರ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Post a Comment

0 Comments