ಡಿಎಪಿ ಗೊಬ್ಬರ ಬೇಕೆ, ಹಾಗಾದರೆ ಬೇವಿನಹಿಂಡಿ ತೆಗೆದುಕೊಳ್ಳಿ. !?ರೈತರ ಜೀವ ಹಿಂಡುತ್ತಿರುವ ತ್ಯಾಗರ್ತಿ ನ್ಯಾಯಬೆಲೆ ಅಂಗಡಿ.!!!


ಸಾಗರ:ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರೇ.ರೈತರಿಗಾಗಿ ನಮ್ಮ ಸರ್ಕಾರ ಎಂದು ಹೇಳುವ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರೇ ಒಮ್ಮೆ ಈ ಸುದ್ದಿಯನ್ನು ನೋಡಿ. ಗೊಬ್ಬರ  ಅಂಗಡಿಗಳ ಮಾಲೀಕರ ದುರಹಂಕಾರ .ಒಟ್ಟಾರೆ ರೈತರನ್ನು ಶೋಷಿಸುತ್ತಿರುವ ಕೃಷಿ ಮತ್ತು ಗೊಬ್ಬರದ ಅಂಗಡಿಗಳ ಮಾಲೀಕರು.

ಮುಂಗಾರು ಪ್ರಾರಂಭಗೊಂಡಿದೆ,ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.ರೈತರು ತಮ್ಮ ಜಮೀನುಗಳಿಗೆ ಬೇಕಾದ ಅಗತ್ಯ ಕೃಷಿ ಪದಾರ್ಥಗಳ ತೆಗೆದುಕೊಳ್ಳಲು ಗೊಬ್ಬರದ ಅಂಗಡಿಗಳಿಗೆ ತೆರಳುತ್ತಿದ್ದಾರೆ .

ತಮಗೆ ಬೇಕಾದ ಕೃಷಿ ಪದಾರ್ಥಗಳನ್ನು ತೆಗೆದುಕೊಳ್ಳಲು ಈ ದೇಶದ "ಬೆನ್ನೆಲುಬು"ರೈತ ಸಮುದಾಯಕ್ಕೆ ಹಕ್ಕು ಇಲ್ಲದಂತಾಗಿದೆ.
ತಾಲ್ಲೂಕು ಕೃಷಿ ಅಧಿಕಾರಿಗಳು ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಬೀಜಗಳು,ಗೊಬ್ಬರಗಳು ಸಮರ್ಪಕವಾಗಿ ದಾಸ್ತಾನು ಆಗಿದೆ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ವಿತರಣೆ ಮಾಡಲು ತಾಲ್ಲೂಕು ಕೃಷಿ ಅಧಿಕಾರಿಗಳು ಈಗಾಗಲೇ ಸಂಬಂಧಿಸಿದ ಅಂಗಡಿಯ ಮಾಲೀಕರಿಗೆ  ತಿಳಿಸಿದ್ದಾರೆ.ಆದರೆ ಕೆಲವು ಗೊಬ್ಬರ ಅಂಗಡಿಗಳ ಮಾಲೀಕರು ಕೃಷಿ ಅಧಿಕಾರಿಗಳ ಮಾತನ್ನು ಧಿಕ್ಕರಿಸಿ ರೀತಿಯ ಧೋರಣೆಯನ್ನು ತಾಳಿದ್ದಾರೆ ಇದರಿಂದ  ರೈತರು ಮಾತ್ರ ಇದುವರೆಗೂ ತಮ್ಮ ಜಮೀನಿಗೆ ಬೇಕಾದ ಅಗತ್ಯ ಕೃಷಿ ಸಂಬಂಧಿಸಿದ ಪದಾರ್ಥಗಳನ್ನು ತೆಗೆದುಕೊಳ್ಳಲು ಪರದಾಡುವಂಥ ಪರಿಸ್ಥಿತಿ ಶಿವಮೊಗ್ಗ ಜಿಲ್ಲೆ 'ಸಾಗರ ತಾಲ್ಲೂಕಿನ ರೈತರಿಗೆ ಬಂದೊದಗಿದೆ.

ಸಾಗರ ತಾಲ್ಲೂಕಿನಾದ್ಯಂತ ಇರುವಂತಹ  ಗೊಬ್ಬರದ ಅಂಗಡಿಯ ಮಾಲೀಕರು ಅದೇ ರೀತಿ ನ್ಯಾಯಬೆಲೆ ಅಂಗಡಿಯ ಮೂಲಕ ವಿತರಣೆಯಾಗುತ್ತಿರುವ ಗೊಬ್ಬರಗಳು ಇಂದು ನಮ್ಮ ರೈತ ಸಮುದಾಯಕ್ಕೆ ಸಮರ್ಪಕವಾಗಿ ದೊರೆಯುತ್ತಿಲ್ಲ.

ಹೇಳಿ-ಕೇಳಿ ರೈತ ಸಮುದಾಯ ಡಿಎಪಿ ಗೊಬ್ಬರವನ್ನು ಹೆಚ್ಚಾಗಿ ತಮ್ಮ ಕೃಷಿ ಜಮೀನುಗಳಿಗೆ ಬಳಸುತ್ತದೆ .ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾಗರ ತಾಲ್ಲೂಕಿನಾದ್ಯಂತ ಸಮರ್ಪಕವಾಗಿ ಡಿಎಪಿ ಗೊಬ್ಬರವನ್ನು ಸಂಬಂಧಿಸಿದ ಅಂಗಡಿಗಳಿಗೆ ವಿತರಣೆ ಮಾಡಲಾಗಿದೆ .ತಾಲ್ಲೂಕಿನಲ್ಲಿರುವ ಒಟ್ಟು ಕೃಷಿ ಜಮೀನಿಗೆ ಸಂಬಂಧಿಸಿದಂತೆ ಬೇಕಾಗುವಂಥ ಅಗತ್ಯ ಪ್ರಮಾಣದ ಡಿಎಪಿ ಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ ಎಂಬ ಹೇಳಿಕೆಯನ್ನ ಕೃಷಿ ಅಧಿಕಾರಿಗಳು ನೀಡಿದ್ದಾರೆ.ಆದರೆ ತಾಲ್ಲೂಕಿನಲ್ಲಿರುವ ಕೆಲ ಗೊಬ್ಬರದ ಅಂಗಡಿಯ ಮಾಲೀಕರು ಮತ್ತು ನ್ಯಾಯಬೆಲೆ ಅಂಗಡಿಯ ಮೂಲಕ ವಿತರಣೆ ಮಾಡುತ್ತಿರುವ ಕೆಲವು ನ್ಯಾಯಬೆಲೆ ಅಂಗಡಿಯ ಮಾಲೀಕರು ರೈತರಿಗೆ ಹೊಸ ಕಂಡಿಷನ್ ಹಾಕುತ್ತಿದ್ದರೆ.
ನಿಮಗೆ ಡಿಎಪಿ ಗೊಬ್ಬರ ಬೇಕಾದರೆ ಬೇವಿನ ಹಿಂಡಿಯನ್ನು ತೆಗೆದುಕೊಳ್ಳಿ ಎಂಬ ಷರತ್ತನ್ನು ಸಾಗರ ತಾಲ್ಲೂಕಿನ ರೈತರಿಗೆ ಹಾಕುತ್ತಿದ್ದಾರೆ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ದಿನೇಶ್  ಶಿರಿವಾಳ ಆರೋಪಿಸಿದ್ದಾರೆ.

ಒಂದಕ್ಕೊಂದು ಲಿಂಕ್ ಮಾಡದೆ ರೈತರಿಗೆ ಬೇಕಾದಂಥ ಗೊಬ್ಬರವನ್ನು ಮತ್ತು ಕ್ರಿಮಿನಾಶಕವನ್ನು ನೀಡಬೇಕು ಎಂಬ ಆದೇಶವಿದೆ .ಆದರೆ ತಾಲ್ಲೂಕಿನ ಕೆಲ ಗೊಬ್ಬರದ ಅಂಗಡಿಯ ಮಾಲೀಕರು ಸರ್ಕಾರದ ಆದೇಶ ಉಲ್ಲಂಘಿಸಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆ .

ಇಂದು ತ್ಯಾಗರ್ತಿಯ ವ್ಯವಸಾಯ ಸೇವಾ ಸಹಕಾರ ಬ್ಯಾಂಕಿನ ವತಿಯಿಂದ ನಡೆಯುತ್ತಿರುವ ನ್ಯಾಯಬೆಲೆ ಅಂಗಡಿಯ ಮೂಲಕ ಕೃಷಿ ಇಲಾಖೆ ಅಗತ್ಯ ಪ್ರಮಾಣದ ಡಿಎಪಿ ಗೊಬ್ಬರವನ್ನು ವಿತರಣೆ ಮಾಡಲು ಅನುಕೂಲ ಮಾಡಿಕೊಟ್ಟಿದೆ.ಆದರೆ ತ್ಯಾಗರ್ತಿಯ ನ್ಯಾಯಬೆಲೆ ಅಂಗಡಿಯವರು ರೈತರಿಗೆ ಬೇಕಾದಂಥ ಡಿಎಪಿ ಗೊಬ್ಬರವನ್ನು ಸಮರ್ಪಕವಾಗಿ ವಿತರಣೆ ಮಾಡದೆ ರೈತರಿಗೆ ಬೇವಿನಹಿಂಡಿ ಖರೀದಿಸಿದರೆ ಮಾತ್ರ ಡಿಎಪಿ ಗೊಬ್ಬರ ನೀಡುತ್ತೇವೆ ಎಂಬ ಕಂಡಿಷನ್ ಹಾಕುತ್ತಿದ್ದರೆ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ದಿನೇಶ್ ಶಿರವಾಳ ನಮ್ಮ ಮಾಧ್ಯಮ ಪ್ರತಿನಿಧಿಯೊಂದಿಗೆ ಫೋನ್ ಮೂಲಕ ಹಂಚಿಕೊಂಡಿದ್ದಾರೆ .

ತ್ಯಾಗರ್ತಿ ನ್ಯಾಯಬೆಲೆ ಅಂಗಡಿಗಳಿಂದ ವಿತರಣೆಯಾಗುತ್ತಿರುವ ಗೊಬ್ಬರದಲ್ಲಿ ಕಂಡಿಷನ್ ಹಾಕುತ್ತಿರುವುದು ಇದೇನು ಮೊದಲಲ್ಲ ಈ ಹಿಂದಿನಿಂದಲೂ ತ್ಯಾಗರ್ತಿ ನ್ಯಾಯಬೆಲೆ ಅಂಗಡಿಯವರು ರೈತರನ್ನು ಶೋಷಣೆ ಮಾಡುತ್ತಲೇ ಬಂದಿದ್ದಾರೆ .

ತ್ಯಾಗರ್ತಿ ನ್ಯಾಯಬೆಲೆ ಅಂಗಡಿಯ ಮಾಲೀಕರು ಸರ್ವಾಧಿಕಾರಿ ಧೋರಣೆಯನ್ನು ತಾಳಿದ್ದು ,ಸೂತ್ರಧಾರ ಮನೆಯಲ್ಲೇ ಕುಳಿತು ಗೊಂಬೆಯನ್ನ ಆಡಿಸುತ್ತಿದ್ದಾನೆ .ಸೂತ್ರಧಾರನ ಆಟದಂತೆ ನ್ಯಾಯಬೆಲೆ ಅಂಗಡಿ ನಡೆಸುವವರು ಕುಣಿಯುತ್ತಿದ್ದಾರೆ .ಇದು ಆ ಭಾಗದ ಎಲ್ಲಾ ರೈತರಿಗೂ ಗೊತ್ತಿರುವ ವಿಚಾರವೇ ಆಗಿದೆ .ಆದರೆ ಇದರ ಬಗ್ಗೆ  ಚಕಾರವೆತ್ತುವರು ಮಾತ್ರ ಕೆಲವೇ ಕೆಲವು ಜನರಾಗಿದ್ದಾರೆ .

ಕೃಷಿ ಸಚಿವ ಬಿ ಸಿ ಪಾಟೀಲ್ ಅವರೇ ತ್ಯಾಗರ್ತಿ ನ್ಯಾಯಬೆಲೆ ಅಂಗಡಿಗಳಿಂದ ವಿತರಣೆಯಾಗುತ್ತಿರುವ ಗೊಬ್ಬರದಲ್ಲಿ ರೈತರಿಗೆ ಶೋಷಣೆಯಾಗುತ್ತಿದೆ .ರೈತರಿಗೆ ಹೊಸ ಷರತ್ತನ್ನು ವಿಧಿಸಿ ಗೊಬ್ಬರ ವಿತರಣೆ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿಮ್ಮ ಆಪ್ತ ಸಹಾಯಕನ ಗಮನಕ್ಕೆ ತರಲಾಗಿದೆ.ತಾವು ತ್ಯಾಗರ್ತಿ ನ್ಯಾಯಬೆಲೆ ಅಂಗಡಿವರು ರೈತರಿಗೆ ಶೋಷಣೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಆಧಾರದ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತೀರಿ ಎಂಬುದು ಇಡೀ ರಾಜ್ಯದ ರೈತ ಸಮುದಾಯ ಕಾದು ಕುಳಿತಿದೆ.

ಕೂಡಲೇ ತ್ಯಾಗರ್ತಿ ನ್ಯಾಯಬೆಲೆ ಅಂಗಡಿಯ ಮೂಲಕ ವಿತರಣೆ ಆಗುತ್ತಿರುವ ಡಿಎಪಿ ಗೊಬ್ಬರಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಹಾಗಾದಾಗ ಮಾತ್ರ ತ್ಯಾಗರ್ತಿ ನ್ಯಾಯಬೆಲೆ ಅಂಗಡಿ ನಡೆಸುತ್ತಿರುವವರ ಸರ್ವಾಧಿಕಾರಿ ಧೋರಣೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ .

ಈ ಹಿಂದೆಯೂ ತ್ಯಾಗರ್ತಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕಿನ ಮೂಲಕ ರೈತರಿಗೆ ವಿತರಣೆಯಾದ ಸಾಲದಲ್ಲೂ ಕೋಟ್ಯಂತರ₹ಅವ್ಯವಹಾರ ನಡೆದಿದೆ? .ಖಾಲಿ ಚೆಕ್ಕಿನ ಮೇಲೆ ಸಹಿಯನ್ನು ಪಡೆದು ರೈತರನ್ನು ವಂಚಿಸಲಾಗಿದೆ?ಕೂಡಲೇ ಇದರ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಏಕೆಂದರೆ ಕೆಲವು ಚೆಕ್ ಗಳ ಮೇಲೆ ಪೋರ್ಜರಿ ಸಹಿ ಮಾಡಿದ್ದ ಆರೋಪ ಹಿಂದಿನ ಕಾರ್ಯದರ್ಶಿಯ ಮೇಲೆ ಕೇಳಿಬಂದಿದೆ .ಈಗಾಗಲೇ ಈ ಹಿಂದಿನ ಕಾರ್ಯದರ್ಶಿ ನ್ಯಾಯಬೆಲೆ ಅಂಗಡಿ ಮತ್ತು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಎರಡನ್ನೂ ತನ್ನ ಹಿಡಿತದಲ್ಲಿ ಇಟ್ಟುಕೊಂಡು ತನ್ನ ಮನೆಯ ಸ್ವತ್ತು ಎಂಬಂತೆ ನಡೆಸಿಕೊಂಡು ಹೋಗುತ್ತಿದ್ದಾನೆ .ಕೂಡಲೇ ಅವರ ಬಗ್ಗೆ ತನಿಖೆ ನಡೆಸಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿಕೊಳ್ಳಬೇಕು .

ರೈತರನ್ನು ವಂಚಿಸುವ ಯಾರೇ ಆಗಲಿ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಾಗ ಮಾತ್ರ ನಮ್ಮ ರೈತರ ಬದುಕು ಹಸನಾಗಲು ಸಾಧ್ಯವಾಗುತ್ತದೆ ಇಲ್ಲವಾದರೆ ಅವರು ಈ ದೇಶದ "ಬೆನ್ನು ಮುರಿದ" ರೈತರಾಗಿಯೇ ಉಳಿಯಬೇಕಾಗುತ್ತದೆ,ಕೊನೇ ತನ್ಕ ಬದುಕಬೇಕಾಗುತ್ತದೆ.

ಇದಕ್ಕೆ ಸಂಬಂಧಿಸಿದಂತೆ ಸಾಗರ ವಿಧಾನಸಭಾ ಕ್ಷೇತ್ರದ ಅಭಿವೃದ್ದಿ ಹರಿಕಾರ ಹರತಾಳು ಹಾಲಪ್ಪ ತ್ಯಾಗರ್ತಿ ನ್ಯಾಯಬೆಲೆ ಅಂಗಡಿಯಿಂದ ರೈತರಿಗೆ ಶೋಷಣೆ ಮಾಡುತ್ತಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಯನ್ನು ಪಡೆದು ತ್ಯಾಗರ್ತಿ ನ್ಯಾಯಬೆಲೆ ಅಂಗಡಿ ಮತ್ತು ನ್ಯಾಯಬೆಲೆ ಅಂಗಡಿಯನ್ನು ಹಿಡಿತದಲ್ಲಿಟ್ಟುಕೊಂಡು ಆಟವಾಡಿಸುತ್ತಿರುವ ಸೂತ್ರಧಾರನ ಮೇಲೆ ಕ್ರಮ ಕೈಗೊಳ್ಳಲಿ ತಾಲ್ಲೂಕಿನ ರೈತರನ್ನ ಉಳಿಸಿಕೊಳ್ಳಲಿ ಎಂಬುದು ನಮ್ಮ ಮಾಧ್ಯಮದ ಆಶಯವಾಗಿದೆ .

ಪ್ರಕಾಶ್ ಮಂದಾರ 
ಸಂಪಾದಕರು.
8880499904

Post a Comment

0 Comments