ಸಹಾಯಕ ಕೃಷಿ ಅಧಿಕಾರಿಗಳಿಂದ ಗೊಬ್ಬರದ ಅಂಗಡಿಯ ಮಾಲೀಕರಿಗೆ ನೋಟಿಸ್ ಜಾರಿ.ಪರವಾನಗಿಯನ್ನು ರದ್ದುಪಡಿಸುವ ಎಚ್ಚರಿಕೆ!!!


ಸಾಗರ:ಸಾಗರ ತಾಲ್ಲೂಕಿನಾದ್ಯಂತ ಕೆಲವು ರಸಗೊಬ್ಬರ ಮಾರಾಟಗಾರರು ರೈತರ ಬೇಡಿಕೆಗೆ ಅನುಗುಣವಾದ ಗೊಬ್ಬರದ ಜೊತೆಗೆ ಇತರೆ ರಸ ಗೊಬ್ಬರ ಹಾಗೂ ಇತರೆ ಔಷಧಿಗಳನ್ನು ಜೋಡಣೆ (ಲಿಂಕ್) ಮಾಡಿ ಮಾರಾಟ ಮಾಡುತ್ತಿರುವ ಕುರಿತು ನಮ್ಮ ಮಂದಾರ ನ್ಯೂಸ್ ವೆಬ್ ಪೋರ್ಟಬಲ್ ಸುದ್ದಿವಾಹಿನಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ ಇವರ ಮಾಹಿತಿಯ ಆಧಾರದ ಮೇಲೆ ವಿಸ್ತಾರವಾದ ವರದಿಯನ್ನ ಇಂದು ಬೆಳಿಗ್ಗೆ ಪ್ರಕಟಿಸಿತ್ತು.

ನಮ್ಮ ಸುದ್ದಿವಾಹಿನಿಯ ವರದಿಯಿಂದ ಎಚ್ಚೆತ್ತುಕೊಂಡ ಕೃಷಿ ಅಧಿಕಾರಿಗಳು ಸುದ್ದಿ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ತಾಲ್ಲೂಕಿನ ರಸಗೊಬ್ಬರ ಮಾರಾಟಗಾರರಿಗೆ ಲಿಖಿತ ರೂಪದಲ್ಲಿ ನೋಟಿಸನ್ನೂ ಜಾರಿ ಮಾಡಿದ್ದಾರೆ.
ರಸಗೊಬ್ಬರ ಮಾರಾಟಗಾರರು ರೈತರ ಬೇಡಿಕೆ ಸಲ್ಲಿಸುತ್ತಿರುವ ರಸಗೊಬ್ಬರ ಜೊತೆಗೆ ಇತರೆ ರಸಗೊಬ್ಬರ ಹಾಗೂ ಇತರೆ ಔಷಧಿಗಳನ್ನು  ಲಿಂಕ್ ಮಾಡಿ ಮಾರಾಟ ಮಾಡಲು ಅವಕಾಶವಿರುವುದಿಲ್ಲ ,ಯಾವುದೇ ಕಾರಣದಿಂದ ರೈತರು ಕೇಳುವ ರಸಗೊಬ್ಬರ ಹೊರತುಪಡಿಸಿ ಒತ್ತಾಯಪೂರ್ವಕವಾಗಿ ಇತರೆ ಗೊಬ್ಬರಗಳನ್ನು ಲಿಂಕ್ ಮಾಡಿ ಮಾರಾಟ ಮಾಡಬಾರದೆಂದು ಕಟ್ಟುನಿಟ್ಟಾದ ಸೂಚನೆಯನ್ನ ತಾಲ್ಲೂಕು ಕೃಷಿ ಅಧಿಕಾರಿ ಕಾಶೀನಾಥ್ ಅವರು ಲಿಖಿತ ರೂಪದಲ್ಲಿ ನೀಡಿದ್ದಾರೆ .

ಲಿಖಿತ ರೂಪದಲ್ಲಿ ನೀಡಿರುವ ನೋಟಿಸ್ ಉಲ್ಲಂಘಿಸಿ ರಸಗೊಬ್ಬರ ಮಾರಾಟಗಾರರು ರೈತರ ಬೇಡಿಕೆಯ ಗೊಬ್ಬರದ ಜೊತೆ ಒತ್ತಾಯ ಪೂರ್ವಕವಾಗಿ ಬೇರೆ ಗೊಬ್ಬರ ಅಥವಾ ಔಷಧಿಯನ್ನ ಲಿಂಕ್ ಮಾಡಿ ಮಾರಾಟ ಮಾಡಿದ ದೂರುಗಳು ಬಂದರೆ ಮಾರಾಟಗಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂಬ ಎಚ್ಚರಿಕೆಯನ್ನು ತಾಲ್ಲೂಕಿನ ರಸಗೊಬ್ಬರ ಮಾರಾಟಗಾರರಿಗೆ ನೀಡಿದ್ದಾರೆ.

ಈಗಾಗಲೇ ತಮ್ಮ ಸುದ್ದಿವಾಹಿನಿಯೂ ತ್ಯಾಗರ್ತಿ ರಸಗೊಬ್ಬರ ಮಾರಾಟ ಮಾಡುವ ನ್ಯಾಯಬೆಲೆ ಅಂಗಡಿಯ ಕುರಿತು ವಿಸ್ತಾರವಾದ ವರದಿಯನ್ನು ಪ್ರಕಟಿಸಿತ್ತು .ವರದಿಗೆ ಸಂಬಂಧಿಸಿದಂತೆ ಕೃಷಿ ಅಧಿಕಾರಿಗಳು ತುರ್ತಾಗಿ ನೋಟಿಸ್ ಜಾರಿ ಮಾಡುವ ಮೂಲಕ ತಾಲ್ಲೂಕಿನ ಇಡೀ ರೈತ ಸಮುದಾಯದ ಬೆನ್ನಿಗೆ ನಿಂತಿರುವುದು ರೈತರ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಲು ಸಹಕಾರಿಯಾಗಿದೆ .

ಮಂದಾರ ನ್ಯೂಸ್ ವೆಬ್ ಪೋರ್ಟಬಲ್ ಸುದ್ದಿವಾಹಿನಿ ವ್ಯವಸ್ಥೆಯ ಲೋಪ ದೋಷವನ್ನು ಎತ್ತಿ ಹಿಡಿದು ಸಂಬಂಧಿಸಿದ ಅಧಿಕಾರಿಗಳ ಕಣ್ಣು ತೆರೆಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಇರುತ್ತದೆ.ಈ ವಿಚಾರದಲ್ಲಿ ನಮಗೆ ಬರುವ ಗೊಡ್ಡು ಬೆದರಿಕೆಗಳಿಗೆ ನಾವು ಅಂಜುವುದಿಲ್ಲ.ನಮ್ಮದು ದಿಟ್ಟ ಹೆಜ್ಜೆ,ನ್ಯಾಯ ಪರವಾದ ಧ್ವನಿ ,ಹಾದಿಯಲ್ಲಿ ಬೀದಿಯಲ್ಲಿ ಹೋಗುವವರ ಬಗ್ಗೆ  ತಲೆಕೆಡಿಸಿಕೊಳ್ಳದ ನಡೆ.

ಪ್ರಕಾಶ್ ಮಂದಾರ.
ಸಂಪಾದಕರು.
8880499904

Post a Comment

0 Comments