ಕುಮಾರಪಟ್ಟಣಂ ನಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ.


ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಕುಮಾರಪಟ್ಟಣಂ ಪೊಲೀಸ್ ಠಾಣೆ ವತಿಯಿಂದ ಸಾರ್ವಜನಿಕರಿಗೆ ತಂಬಾಕು ಮತ್ತು ಮಾದಕ ದ್ರವ್ಯ ದಿಂದಾಗುವ ದುಷ್ಪರಿಣಾಮ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಇದರ ಜೊತೆಗೆ ಗ್ರಾಮೀಣ ಜನರ SC-ST ಕುಂದು ಕೊರತೆಯ ವಿಚಾರಧಾರೆಯನ್ನು ಸಿಪಿಐ ಶ್ರೀಮತಿ ಭಾಗ್ಯವತಿ ಬಂತಿ ಮತ್ತು ಪಿಎಸ್ಐ ಸಂಜೀವ್ ಕುಮಾರ್ ನೇತೃತ್ವದಲ್ಲಿ ನೆರವೇರಿತು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ಭಾಗ್ಯವತಿ ಬಂತಿ ಯವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾದಕ ದ್ರವ್ಯ ವಿರುದ್ಧ ಜಾಗೃತಿ ಮೂಡಿಸುತ್ತಿವೆ, ಆದರೂ ಈಗಿನ ಯುವಪೀಳಿಗೆ ಮಾದಕದ್ರವ್ಯದ ಕಡೆಗೆ ವಾಲುತ್ತಿದ್ದಾರೆ. ಇದರಿಂದ ಆಗುವ ದುಷ್ಪರಿಣಾಮಗಳು ಒಂದಾ? ಎರಡಾ? ಸಾಕಷ್ಟು ಇವೆ. ನೆನಪಿನ ಶಕ್ತಿ ಕಳೆದುಕೊಳ್ಳುವುದು,ನರದೌರ್ಬಲ್ಯ, ಮೆದುಳು ದುರ್ಬಲ, ಲೈಂಗಿಕ ಅಸಮರ್ಥತೆ, ಆತಂಕ, ಖಿನ್ನತೆ, ಕಣ್ಣಿನ ಪೊರೆ, ಮಾನಸಿಕ ಒತ್ತಡ, ಅಸ್ತಮಾ, ಕೆಮ್ಮು, ಕ್ಷಯ, ಹೃದಯ ಸಂಬಂಧಿ ಕಾಯಿಲೆ, ಅನ್ನನಾಳ ಕರುಳು, ಮೂತ್ರಪಿಂಡ ಗಳಂತಹ ದೇಹದ ವೈಫಲ್ಯಕ್ಕೆ ತುತ್ತಾಗುತ್ತಿದ್ದಾರೆ. ಹಾಗಾಗಿ ಇನ್ನಾದರೂ ಇಂತಹ ಚಟಗಳಿಂದ ಯುವಕರು ದೂರ ಆಗಬೇಕು. ಇಂತಹ ದುಶ್ಚಟ ವಿರುದ್ಧ ನಾವು ನೀವು ಹೋರಾಡಬೇಕು. ಮಾದಕ ದ್ರವ್ಯ ಮುಕ್ತ, ತಂಬಾಕು ಮುಕ್ತ ಭಾರತ ನಮ್ಮದಾಗಬೇಕು ಎನ್ನುವ ಅರಿವಿನ ನುಡಿ ನುಡಿದರು. ಇದರ ಜೊತೆಗೆ ಗ್ರಾಮೀಣ ಜನರಿಗೆ, ST-ST ಕುಂದು ಕೊರತೆಯ ಸಭೆ ಯನ್ನು ಹಮ್ಮಿಕೊಳ್ಳಲಾಗಿತ್ತು. ಕುಮಾರಪಟ್ಟಣಂ ನ ಸರಹದ್ದಿನ ವ್ಯಾಪ್ತಿಗೆ ಬರುವ ಗ್ರಾಮದ ಜನರನ್ನು ಹಲವು ಸಂಘ-ಸಂಸ್ಥೆಯವರನ್ನು, ವಕೀಲರನ್ನು, ಗ್ರಾಮ ಪಂಚಾಯಿತಿ ಸದಸ್ಯರನ್ನು ಮತ್ತು  ಸಾರ್ವಜನಿಕರ ಉಪಸ್ಥಿತಿಯಲ್ಲಿ  SC-ST ಕುಂದುಕೊರತೆ ಸಭೆ ನಡೆಯಿತು  ಸಾರ್ವಜನಿಕರು ತಮ್ಮ ಹಾಗು ತಮ್ಮ ಊರಿನ ಸಮಸ್ಯೆಗಳನ್ನು ಸಾಲುಸಾಲಾಗಿ ಬಿಚ್ಚಿಟ್ಟರು. ಈ ಎಲ್ಲಾ ಸಮಸ್ಯೆಯನ್ನು ಗಂಭೀರವಾಗಿ  ಆಲಿಸಿದ ಸಿಪಿಐ ರವರು ಕೂಡಲೇ ರೈಟರನ್ನು ಕರೆಯಿಸಿ ಪ್ರತಿಯೊಬ್ಬರ ಸಮಸ್ಯೆಯನ್ನು ದಾಖಲಿಸಿಕೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ರವಾನಿಸಲು ತಿಳಿಸಿದರು.ಸಾರ್ವಜನಿಕರ ಸಮಸ್ಯೆಗೆ ಶಾಶ್ವತ ಪರಿಹಾರ ಭರವಸೆ ನೀಡಿದರು.
 ಪಿಎಸ್ಐ ಸಂಜೀವ್ ಕುಮಾರ್ ರವರು ಸಾರ್ವಜನಿಕರನ್ನು ಉದ್ದೇಶಿಸಿ, ಜೀವನ ಬೇಕು, ತಂಬಾಕು ಬೇಡ, ಆರೋಗ್ಯ ಬೇಕು, ಅನಾರೋಗ್ಯ ಬೇಡ. ಭಾವಿ ಭಾರತದ ಪ್ರಜೆಗಳು ನಾವು ನೀವು ಮುಂದಿನ ಜನಾಂಗಕ್ಕೆ ಉತ್ತಮ ಆರೋಗ್ಯಕ್ಕೆ ಉತ್ತಮ ಮಾಲಿನ್ಯ, ಉತ್ತಮ ಪರಿಸರ ಉಳಿಸಿ ಕೊಡಬೇಕಿದೆ. ಪುನೀತ್ ರಾಜಕುಮಾರ್ ರವರು ಭಾರತ ದೇಶ ಕಂಡಂತೆ ಪ್ರತಿಭಾವಂತ ನಟ ಅವರಿಗೆ ಯಾವುದೇ ದುಶ್ಚಟ ಇಲ್ಲದಿದ್ದರೂ ಹೃದಯಾಘಾತದಿಂದ ಮೃತಪಟ್ಟರು.ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ಇದ್ದರೂ ಸಾಲದು,ಯಾವುದೇ ಪದಾರ್ಥಗಳನ್ನು ಸೇವನೆ ಮಾಡಬೇಕಾದರೆ ಅತ್ಯಂತ  ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಇನ್ನಾದರೂ ನಾವು ಪ್ರತಿಜ್ಞೆ ಮಾಡೋಣ. ಮಾದಕದ್ರವ್ಯ ತಂಬಾಕು ಮುಕ್ತ ರಾಜ್ಯ, ತಂಬಾಕು ಮುಕ್ತ ದೇಶ ಕಟ್ಟೋಣ ಎನ್ನುವ ಹಿತನುಡಿ ಯನ್ನು ನುಡಿದರು. ಈ ಒಂದು ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಬೆಣ್ಣೆ ಗೌಡರು ವಕೀಲರು,  ಹನುಮಂತ ಕವಲೆತ್ತು ಗ್ರಾಮ ಪಂಚಾಯಿತಿ ಸದಸ್ಯರು, ನಾಗರಾಜ್, ಶಂಕ್ರಪ್ಪ ಕರೂರು, ಸುರವೇ ಶಂಭು, ತಾನಾಜಪ್ಪ, ಗಿರೀಶ್ ನಲವಾಗಲು, ಬಸವರಾಜ್ ಹಿರೇಮಠ್, ಮಾಜಿ ಗ್ರಾಮ ಪಂಚಾಯತಿ ಸದಸ್ಯರು, ಶಿವು ನಗೆನಹಳ್ಳಿ, ಗಣೇಶ ದ್ಯಾಮಕ್ಕ ನವರ್, ಸಾಗರ್, ಸುನಿಲ್, ಅನಿಲ್ ಮತ್ತು ಗಂಗಾಧರ್ ಕೋಡಿಹಾಳ ಮಾಜಿ ಸದಸ್ಯರು ಇತರರು ಪಾಲ್ಗೊಂಡಿದ್ದರು.

Post a Comment

0 Comments