ಹರಿಹರ:ಕಳೆದ ಹದಿನೈದು ದಿನಗಳ ಹಿಂದೆ ಹರಿಹರ ತಹಸೀಲ್ದಾರ್ ಡಾ॥ಅಶ್ವತ್ಥ್ ಎಂ.ಬಿ ಅವರು ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಮಾರಾಟ ಮಾಡುವ ಖದೀಮರನ್ನ ತಮ್ಮ ಕಚೇರಿಗೆ ಕರೆಸಿ ಸಮಗ್ರ ವಿಚಾರಣೆ ನಡೆಸಿ ಮುಂದಿನ ದಿನದಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹಣದ ಆಮಿಷ ಒಡ್ಡಿ ಅಕ್ಕಿಯನ್ನು ಖರೀದಿಸಿದರೆ ನಿಮ್ಮನ್ನ ತಾಲ್ಲೂಕಿನಿಂದ ಗಡೀಪಾರು ಮಾಡಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದ್ದರು.
ಅದೇ ರೀತಿ ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಖರೀದಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿದ ಹರಿಹರ ಸೂರ್ಯ ಪತ್ರಿಕೆಯ ಸಂಪಾದಕರ ಮೇಲೆ ಅಕ್ರಮ ಅಕ್ಕಿಯ ಖದೀಮರು ಅವರ ಮೇಲೆ ಮಾರಣಾಂತಿಕ ಹಲ್ಲೆಗೆ ಯತ್ನ ನಡೆಸಿದರು .ಅಲ್ಲದೆ ಅವರಿಗೆ ಜೀವ ಬೆದರಿಕೆ ಒಡ್ಡಿದ್ದರು.ಈ ಸಂಬಂಧ ಹರಿಹರ ಸೂರ್ಯ ಪತ್ರಿಕೆಯ ಸಂಪಾದಕ ವೀರೇಶ ಅವರು ನಗರ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಿದ್ದರು ಇದರ ಜತೆ ಹರಿಹರದ ತಹಸೀಲ್ದಾರ್ ಡಾ.ಅಶ್ವತ್ಥ್ ಎಂ.ಬಿ ಅವರಿಗೂ ಸಹ ದೂರನ್ನ ನೀಡಿದ್ದರು.
ಹರಿಹರ ಸೂರ್ಯ ಪತ್ರಿಕೆಯ ಸಂಪಾದಕ ವೀರೇಶ್ ಇವರ ದೂರಿಗೆ ಸಂಬಂಧಿಸಿದಂತೆ ತಹಸೀಲ್ದಾರ್ ಡಾ.ಅಶ್ವತ್ಥ್ ಎಂ,ಬಿ ಅವರು ವೀರೇಶ್ ಅವರ ಹಲ್ಲೆಗೆ ಯತ್ನಿಸಿದವರನ್ನು ಸೇರಿದಂತೆ ಎಲ್ಲಾ ಅಕ್ಕಿ ಖದೀಮರನ್ನ ತಮ್ಮ ಕಚೇರಿಗೆ ಕರೆಸಿ ಸಮಗ್ರ ವಿಚಾರಣೆ ನಡೆಸಿ ಮುಂದಿನ ದಿನದಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ಮಾಡುವುದು ಕಂಡುಬಂದರೆ ತಾಲ್ಲೂಕಿನಿಂದ ಗಡಿಪಾರು ಮಾಡುವ ಎಚ್ಚರಿಕೆಯನ್ನು ನೀಡಿದ್ದರು.ಅದರಂತೆ ವೀರೇಶ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ ವ್ಯಕ್ತಿಯವ ಬಗ್ಗೆ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಶಿರಸ್ತೇದಾರ್ ರಮೇಶ್ ಅವರಿಗೆ ನೋಟಿಸ್ ಜಾರಿ ಮಾಡಿದರು.ವೀರೇಶ್ ಇವರ ಮೇಲೆ ಹಲ್ಲೆ ನಡೆಸಿದವರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಸರಿಸುಮಾರು ಇಪ್ಪತ್ತು ದಿನಗಳೇ ಕಳೆದಿವೆ ಆದರೆ ಇದುವರೆಗೂ ಹಲ್ಲೆಗೆ ಯತ್ನಿಸಿದ ವ್ಯಕ್ತಿಗಳ ಮೇಲೆ ಇದುವರೆಗೂ ಎಫ್ ಐಆರ್ ದಾಖಲಿಸಿಲ್ಲ ಎಂದು ಹಲ್ಲೆಗೊಳಗಾದ ಹರಿಯರ ಸೂರ್ಯ ಪತ್ರಿಕೆಯ ಸಂಪಾದಕ ಎಂ ವೀರೇಶ್ ಅವರು ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.
ಇಷ್ಟೆಲ್ಲ ಘಟನೆಗಳು ನಡೆದರೂ ಸಹ ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಖರೀದಿ ಮಾಡಿ,ಮಾರಾಟ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.ಇವರ್ಯಾರು ತಾಲ್ಲೂಕು ದಂಡಾಧಿಕಾರಿಗಳ ಎಚ್ಚರಿಕೆಗೂ ಬಗ್ಗುತ್ತಿಲ್ಲ ,ಪೊಲೀಸ್ ಇಲಾಖೆಯವರ ಭಯ ಇಲ್ಲವೇ, ಇಲ್ಲ.ಒಟ್ಟಾರೆಯಾಗಿ ತಿಂಗಳ ಕೊನೆಯಲ್ಲಿ 20 ನೇ ತಾರೀಕಿನ ನಂತರ ಅನ್ನಭಾಗ್ಯ ಅಕ್ಕಿ ಖರೀದಿ ಮತ್ತು ಮಾರಾಟ ಜೋರಾಗಿ ನಡೆಯುತ್ತಲೇ ಇದೆ.
ಜಿಲ್ಲೆಯಲ್ಲಿ ಖಡಕ್ ಐಪಿಎಸ್ ಅಧಿಕಾರಿಗಳು ಇದ್ದರು ಈ ಖದೀಮರಿಗೆ ಯಾವುದೇ ರೀತಿಯ ಭಯ ಇಲ್ಲದಂತಾಗಿದೆ ಇನ್ನೂ ತಾಲ್ಲೂಕು ದಂಡಾಧಿಕಾರಿಗಳ ಎಚ್ಚರಿಕೆಯ ಮಾತು ಇವರಿಗೆ ಯಾವ ಲೆಕ್ಕ ಹೇಳಿ .
ತಾಲ್ಲೂಕು ದಂಡಾಧಿಕಾರಿಗಳು ಅನ್ನಭಾಗ್ಯ ಅಕ್ಕಿ ಮಾರಾಟವನ್ನು ತಡೆಯುವ ನಿಟ್ಟಿನಲ್ಲಿ ಖದೀಮರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆಯೇ? ಅಥವಾ ಎಲ್ಲ ಅಧಿಕಾರಿಗಳಂತೆ ಹೊಸತರಲ್ಲಿ ಗುಡುಗಿ ನಂತರ ಸುಮ್ಮನಾಗುತ್ತಾರಾ ಕಾದು ನೋಡಬೇಕಾಗಿದೆ.
ತಾಲ್ಲೂಕು ದಂಡಾಧಿಕಾರಿಗಳಾದ ಡಾ.ಅಶ್ವತ್ಥ್ ಎಂ.ಬಿ ಅವರು ತಮ್ಮ ತಮ್ಮ ಕಚೇರಿಗೆ ವಿಚಾರಣೆಗೆಂದು ಕರೆಸಿದ ಖದೀಮರೇ ಇಂದು ಮತ್ತೆ ಅನ್ನಭಾಗ್ಯ ಅಕ್ಕಿ ಮಾರಾಟ ಮಾಡುತ್ತಿದ್ದಾರೆ.ಈ ಎಲ್ಲಾ ವಿಚಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಗೊತ್ತಿಲ್ಲವೇ? ಎಂಬ ಅನುಮಾನ ಕಾಡುತ್ತಿದೆ.ಪೋಲಿಸ್ ಇಲಾಖೆಗೆ ಗೊತ್ತಿದ್ದರೂ ಕ್ರಮ ಕೈಗೊಳ್ಳುವ ಅಧಿಕಾರವಿಲ್ಲ ಏಕೆಂದರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಈ ಹಿಂದೆ ಪೊಲೀಸ್ ಇಲಾಖೆಯ ಜೊತೆ ಮಾತಿನ ಸಮರ ನಡೆಸಿದ್ದಾರೆ.ಆದ್ದರಿಂದ ಪೊಲೀಸ್ ಇಲಾಖೆಯವರು ಆಹಾರ ಇಲಾಖೆಯವರು ಕಂಪ್ಲೇಂಟ್ ಮಾಡಿದರೆ ಮಾತ್ರ ಸ್ಥಳಕ್ಕೆ ತೆರಳಿ ಅವರು ನೀಡುವ ಕಂಪ್ಲೇಂಟಿನ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ.ಹೀಗಿರುವಾಗ ಆಹಾರ ಇಲಾಖೆಯವರು ಅನ್ನಭಾಗ್ಯ ಅಕ್ಕಿ ಮಾರಾಟ ಗಾರರ ಮೇಲೆ ನೇರವಾಗಿ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಪೊಲೀಸ್ ಇಲಾಖೆಯವರಿಗೆ ಕ್ರಮ ಕೈಗೊಳ್ಳಲು ಬಿಡಬೇಕು.ಇಬ್ಬರ ಜಗಳದಲ್ಲಿ ಅನ್ನಭಾಗ್ಯ ಅಕ್ಕಿ ಖದೀಮರಿಗೆ ಲಾಭವಾಗಬಾರದು.
0 Comments