ರಾಣಿಬೆನ್ನೂರು:ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ 2023 ಪ್ರಬಲ ಅಭ್ಯರ್ಥಿಯಾಗಿ ಸಂತೋಷಕುಮಾರ ಐ.ಪಾಟೇಲ್ ಕಣಕ್ಕಿಳಿಯುವುದು ನಿಚ್ಚಳವಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಹತ್ತು ತಿಂಗಳು ಬಾಕಿ ಇದ್ದು ಈಗಾಗಲೇ ವಿವಿಧ ಪಕ್ಷದ ಸ್ಪರ್ಧಾಕಾಂಕ್ಷಿಗಳು ಕ್ಷೇತ್ರದ ಮತದಾರರ ಮನಗೆಲ್ಲಲು ವಿವಿಧ ಕಸರತ್ತು ಮಾಡುತ್ತಿದ್ದಾರೆ.ಆ ನಿಟ್ಟಿನಲ್ಲಿ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಸಂತೋಷಕಮಾರ ಪಾಟೇಲ್ ಅವರು ಸ್ಪರ್ಧಿಸುವುದು ನಿಚ್ಚಳವಾಗಿದ್ದು ಈಗಾಗಲೇ ಅವರು ರಾಣೆಬೆನ್ನೂರು ಕ್ಷೇತ್ರದಾದ್ಯಂತ ಮತದಾರರ ಮನಗೆಲ್ಲಲು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಈಗಾಗಲೇ ನಡೆಸುತ್ತಿದ್ದಾರೆ .
ಯಾವ ಪಕ್ಷದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂಬುದು ಇನ್ನೂ ನಿಶ್ಚಯವಾಗಿಲ್ಲ ,ಆದರೆ "ಸಂತೋಷ" ಎಂಬ ನಾಮ ಬಲದಿಂದ ಕ್ಷೇತ್ರದ ಮತದಾರರ ಮನಗೆಲ್ಲಲು ಹೊರಟಿದ್ದಾರೆ .
"ನವಯುಗ" ಎಂಬ ಅಭಿಯಾನದ ಮೂಲಕ ಸಂತೋಷಕುಮಾರ ಪಾಟೀಲ್ ಅಭಿಮಾನಿ ಬಳಗದಿಂದ ತಾಲ್ಲೂಕಿನಾದ್ಯಂತ ಇರುವ ಪ್ರತಿ ಗ್ರಾಮದ,ಪ್ರತಿ ಮನೆಯ ಸದಸ್ಯರಿಂದ ಸಂತೋಷಕುಮಾರ ಪಾಟೇಲ್ ಅವರ ಹೆಸರಿನಲ್ಲಿ ವಿನೂತನ ರೀತಿಯ ಸದಸ್ಯತ್ವವನ್ನ ಪಡೆಯುತ್ತಿದ್ದಾರೆ ಹಾಗೂ ನಡೆಸುತ್ತಿದ್ದಾರೆ.
ಈಗಾಗಲೇ ಸಂತೋಷಕುಮಾರ ಪಾಟೇಲ್ ಅಭಿಮಾನಿ ಬಳಗದವರು ಸಾಮಾಜಿಕ ಜಾಲತಾಣವನ್ನು ಅತ್ಯಂತ ಪ್ರಭಾವಿಶಾಲಿಯಾಗಿ ಬಳಸಿಕೊಳ್ಳುವ ಮೂಲಕ ಕ್ಷೇತ್ರಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಬಿರುಸಿನ ಪ್ರಚಾರಕ್ಕೆ ನಾಂದಿ ಹಾಡಿದ್ದಾರೆ.
ಈಗಾಗಲೇ ಸಂತೋಷಕುಾರ ಪಾಟೀಲ್ ಅವರು ಬಿಜೆಪಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿದ್ದು ,ವಾಯುವ್ಯ ಸಾರಿಗೆ ನಿಗಮದ ನಿರ್ದೇಶಕರಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಆದರೆ ಸಂತೋಷಕುಮಾರ ಪಾಟೇಲ್ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆಯೇ?ಅಥವಾ ಬೇರೊಂದು ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆಯೇ?ಇಲ್ಲ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ.? ಎಂಬ ವಿಚಾರದಲ್ಲಿ ಸಂತೋಷಕುಮಾರ ಪಾಟೀಲ್ ಅವರ ಮುಂದಿನ ನಡೆ ಅತ್ಯಂತ ಕುತೂಹಲಕಾರಿಯಾಗಿದೆ.
ಈಗಾಗಲೇ ಸಂತೋಷಕುಮಾರ ಪಾಟೀಲ್ ಅವರು ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರಾದ್ಯಂತ ಮತದಾರರ ಮನ ಗೆಲ್ಲಲು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಯಾವುದೇ ಪಕ್ಷದ ಚಿಹ್ನೆಯ ಅಡಿಯಲ್ಲಿ ಮಾಡುತ್ತಿಲ್ಲ.ಅಲ್ಲದೆ ಸಂತೋಷಕುಮಾರ ಪಾಟೇಲ್ ಅಭಿಮಾನಿ ಬಳಗದವರು ಯಾವುದೇ ಪಕ್ಷದ ಸದಸ್ಯತ್ವದ ಅಭಿಯಾನ ನಡೆಸುತ್ತಿಲ್ಲ, ಮೇಲಾಗಿ ಸಂತೋಷಕುಮಾರ ಪಾಟೀಲ್ ಅವರ ಹೆಸರಿನ ಸದಸ್ಯತ್ವದ ಅಭಿಯಾನ ನಡೆಸುತ್ತಿದ್ದಾರೆ.ಅಂದರೆ ರಾಣೇಬೆನ್ನೂರು ಕ್ಷೇತ್ರಾದ್ಯಂತ ಸಂತೋಷಕುಮಾರ ಪಾಟೀಲ್ ಹೆಸರಿನಲ್ಲಿ ಸದಸ್ಯತ್ವ ನಡೆಯುತ್ತಿದೆ,ಸಂತೋಷಕುಮಾರ ಪಾಟೀಲ್ ಹೆಸರಿನಲ್ಲಿ ಕಾರ್ಯಕ್ರಮ ನಡೆಯುತ್ತಿದೆ,ಸಂತೋಷಕುಮಾರ ಪಾಟೀಲ್ ಹೆಸರಿನಲ್ಲಿ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ,ಸಂತೋಷಕುಮಾರ ಪಾಟೇಲ್ ಹೆಸರಿನಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ,ಸಂತೋಷಕುಮಾರ ಪಾಟೇಲ್ ಹೆಸರಿನಲ್ಲಿ ದಾನ- ಧರ್ಮಗಳು ನಡೆಯುತ್ತಿವೆ ,ಹೀಗೆ ಪ್ರತಿಯೊಂದು ಕಾರ್ಯಕ್ರಮವು ಸಂತೋಷಕುಮಾರ ಪಾಟೀಲ್ ಹೆಸರಿನಲ್ಲಿ ನಡೆಯುತ್ತಿದೆ ವಿನಃ ಯಾವುದೇ ಪಕ್ಷದ ಚಿಹ್ನೆಯ ಅಡಿಯಲ್ಲಿ ಕಾರ್ಯಕ್ರಮ ನಡೆಯುತ್ತಿಲ್ಲ ಇದು ಕ್ಷೇತ್ರದ ಮತದಾರರಲ್ಲಿ ಸಂತೋಷಕುಮಾರ ಪಾಟೇಲ್ ಅವರ ಮುಂದಿನ ನಡೆಗೆ ಸಂಬಂಧಿಸಿದಂತೆ ಅತ್ಯಂತ ಕುತೂಹಲಕಾರಿ..!
ಒಟ್ಟಾರೆಯಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಣೆಬೆನ್ನೂರು ಕ್ಷೇತ್ರದ ಮತದಾರರ ಮುಖದಲ್ಲಿ ಸಂತೋಷ(ಬಿಜೆಪಿ) ಅರಳಿಸುತ್ತಾರೆ.?ತಮ್ಮ ಎದುರಾಳಿಗಳ ಮುಖದಲ್ಲಿ ಇರುವಂತಹ ಸಂತೋಷವನ್ನ (ಎ.ಎ.ಪಿ)ಗುಡಿಸಿ ತಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತಾರೆ ?ಇಲ್ಲ ಎಲ್ಲ ಸಂತೋಷವನ್ನು ಒಟ್ಟಿಗೆ (ಪಕ್ಷೇತರ)ಸೇರಿಸಿ ಕ್ಷೇತ್ರದ ಮತದಾರರಿಗೆ ನೀಡುತ್ತಾರೆಯೇ ?ಕಾದು ನೋಡಬೇಕಾಗಿದೆ.
0 Comments