ಆಟೋ ಚಾಲಕರಿಂದ ಪಾದಚಾರಿಗಳಿಗೆ ಆಗುತ್ತಿರುವ ಕಿರಿಕಿರಿಯನ್ನು ತಪ್ಪಿಸಿ:ರಾಘವೇಂದ್ರ ಕೊಂಡಜ್ಜಿ.

ಹರಿಹರ:ನಗರ ಪ್ರದೇಶದಲ್ಲಿ ಸಂಚರಿಸುತ್ತಿರುವ ಕೆಲವು ಆಟೋ ಚಾಲಕರಿಂದ ಪಾದಚಾರಿಗಳಿಗೆ ಕಿರಿಕಿರಿ ಆಗುತ್ತಿದೆ.ಅಲ್ಲದೆ ಇತರ ವಾಹನ ಸವಾರರಿಗೂ ಸಹ ಈ ಕಿರಿಕಿರಿಯ ಬಿಸಿ ಮುಟ್ಟಿದೆ.ಕೂಡಲೇ ಪೋಲಿಸ್ ಇಲಾಖೆ ಆಟೋ ಚಾಲಕರಿಗೆ ಸಂಚಾರಿ ನಿಯಮ ಪಾಲಿಸುವಂತೆ ಖಡಕ್ ಸೂಚನೆ ನೀಡಬೇಕು ಎಂದು ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಉಪಾಧ್ಯಕ್ಷ ರಾಘವೇಂದ್ರ ಕೊಂಡಜ್ಜಿ ಆಟೋ ಚಾಲಕರಿಂದ ಆಗುತ್ತಿರುವ ಕಿರಿಕಿರಿಯೂ ಕುರಿತು ತಮ್ಮ ಅಸಮಾಧಾನವನ್ನು ನಮ್ಮ ಮಾಧ್ಯಮ ಪ್ರತಿನಿಧಿಯೊಂದಿಗೆ ಹೊರಹಾಕಿದರು.

ಜನಸಂಖ್ಯೆಗೆ ಅನುಗುಣವಾಗಿ ನಗರ ಪ್ರದೇಶದಲ್ಲಿ ಇಂತಿಷ್ಟೇ ಆಟೊಗಳು ಇರಬೇಕು ಎಂಬ ನಿಯಮವಿದೆ.ಅಲ್ಲದೆ ಯಾವುದೇ ಆಟೋ ಚಾಲಕರಿಂದ ಪಾದಚಾರಿಗಳಿಗೆ ಮತ್ತು ಇತರ ವಾಹನ ಸವಾರರಿಗೆ ತೊಂದರೆ ಆಗದಂತೆ ಸೂಕ್ತವಾದ ಸ್ಥಳದಲ್ಲಿ ಪಾರ್ಕಿಂಗ್ ಮಾಡಬೇಕು ಮತ್ತು ಪ್ರಯಾಣಿಕರಿಗಾಗಿ ಕಾಯಬೇಕು ಎಂಬ ನಿಯಮವೂ ಇದೆ .ಆದರೆ ಹರಿಹರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಆಟೊಗಳು ಇದ್ದು  ಕೆಲವು ಆಟೋ ಚಾಲಕರು ಸಂಚಾರಿ ನಿಯಮವನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿದ್ದಾರೆ ಅಲ್ಲದೆ  ಪಾದಚಾರಿಗಳು ನಡೆದುಕೊಂಡು ಹೋಗದಂಥ ಸ್ಥಿತಿಯಲ್ಲಿ ತಮ್ಮ ಆಟೊಗಳನ್ನು ಚಾಲನೆ ಮಾಡುತ್ತಿದ್ದಾರೆ .ಪಾದಚಾರಿಗಳ ಸಮೀಪದಲ್ಲೇ ನಿಧಾನಗತಿಯಲ್ಲಿ ಅವರು ಮುಂದೆ ಸಾಗದಂತೆ ತಡಿಯುತ್ತಾ ಸಾಗುತ್ತಿದ್ದಾರೆ ಇದರಿಂದ ಪಾದಚಾರಿಗಳಿಗೆ ಹಾಗೂ ಪ್ರಯಾಣಿಕರಿಗೆ ತುಂಬಾ ಕಿರಿಕಿರಿಯಾಗುತ್ತಿದೆ.
ನಗರ ಪೊಲೀಸ್ ಠಾಣೆ ಹಾಗೂ ತಾಲ್ಲೂಕು ಕಚೇರಿಗಳ ಮುಂದೆ ಅತ್ಯಧಿಕ ಸಂಖ್ಯೆಯಲ್ಲಿ ಆಟೋಗಳು ನಿಲ್ಲುತ್ತಿದ್ದಾವೆ ತಮ್ಮ ಕೆಲಸ ಕಾರ್ಯ ನಿಮಿತ್ತ ಬರುವ ಗ್ರಾಮೀಣ ಭಾಗದ ಜನರಿಗೆ ಮುಂದೆ ಸಾಗಲು ಅನುವು ಮಾಡಿಕೊಡದೆ ಅಡ್ಡಾದಿಡ್ಡಿ ಆಟೋಗಳನ್ನು ಚಾಲನೆ ಮಾಡುತ್ತಾರೆ .ಇದು ನಗರ ಪೊಲೀಸ್ ಠಾಣೆ ಮುಂಭಾಗದಲ್ಲೇ ಈ ರೀತಿಯ ಕಿರಿಕಿರಿ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಮೌನಕ್ಕೆ ಶರಣಾಗಿದೆ .ಕೂಡಲೇ ಹರಿಹರ ನಗರ ಪ್ರದೇಶದ ಕೆಲವು ಆಟೋ ಚಾಲಕರಿಂದ ಆಗುತ್ತಿರುವ ಕಿರಿಕಿರಿಯನ್ನು ಸಂಬಂಧಿಸಿದ ಇಲಾಖೆಯವರು ತಪ್ಪಿಸಬೇಕು. ಅಲ್ಲದೆ ಕೆಲವು ಆಟೊ ಚಾಲಕರು ಇದುವರೆಗೂ ಚಾಲನಾ  ಪರವಾನಗಿಯನ್ನ ಪಡೆದುಕೊಂಡಿರುವುದಿಲ್ಲ ,1ಮಾಹಿತಿಯ ಪ್ರಕಾರ ತಾಲ್ಲೂಕಿನಲ್ಲೇ ಸರಿ ಸುಮಾರುಬ1400 ಒಟ್ಟು ಆಟೊಗಳು ಇದೆ ಎಂಬ ಮಾಹಿತಿ ಇದೆ.ಅದರಲ್ಲಿ ಎಲ್ಲಾ ಸರಿಯಾದ ದಾಖಲೆಗಳನ್ನಿಟ್ಟು ಚಾಲನೆ ಮಾಡುತ್ತಿರುವ ಆಟಗಳು ಕೇವಲ 400 ಇನ್ನು ಉಳಿದ ಆಟಗಳಲ್ಲಿ ಸಮರ್ಪಕವಾದ ದಾಖಲಾತಿಗಳು ಇಲ್ಲ, ಹಾಗೂ ತಮ್ಮ ಆಟೋ ಸಂಬಂಧಿಸಿದ ಸರಿಯಾದ ಲೈಸನ್ಸ್ ಮತ್ತು ವಿಮೆ ಮಾಡಿಸಿರುವುದಿಲ್ಲ,ಆಟೊ ಮಾಲೀಕರು ಮತ್ತು ಸಂಘದವರಿಂದ ಯಾವುದೇ ರೀತಿಯ ಸದಸ್ಯತ್ವವನ್ನ ನೋಂದಾವಣೆ ಮಾಡಿಸದೇ ಇರುವ ಅದೆಷ್ಟೋ ಆಟೊ ಚಾಲಕರು ನಗರದಲ್ಲಿ ಸಂಚರಿಸುತ್ತಿದ್ದಾರೆ.ಕೂಡಲೇ ಇಂತಹ  ಆಟೋಗಳನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುವ ಮೂಲಕ ಪಾದಚಾರಿಗಳು ಮತ್ತು ಪ್ರಯಾಣಿಕರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸುವಂತೆ ಮಾಧ್ಯಮದ ಮೂಲಕ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಹರಪನಹಳ್ಳಿ ಸರ್ಕಲ್ಲಿನ ಟ್ರಾಪಿಕ್ ಸಿಗ್ನಲ್ ಲೈಟ್ ಗಳು ಕಳೆದ 2ವರ್ಷದಿಂದ ಕೆಟ್ಟು ಹೋಗಿವೆ.ದುರಸ್ತಿಗೊಳಿಸಬೇಕಾದ ಇಲಾಖೆಯ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ .ಟ್ರಾಫಿಕ್ ಸಿಗ್ನಲ್ ಲೈಟ್ ಇಲ್ಲದ ಕಾರಣ ಸರ್ಕಲ್ ನಲ್ಲಿಯೇ ದೊಡ್ಡ ಅನಾಹುತ ಆಗುವ ಸಂಭವವಿದೆ .ಅನಾಹುತವಾಗುವ ಮೊದಲೇ ಎಚ್ಚೆತ್ತುಕೊಂಡು ಹರಪ್ಪನಹಳ್ಳಿ ಸರ್ಕಲ್ಲಿನ  ಟ್ರಾಫಿಕ್ ಸಿಗ್ನಲ್ ಲೈಟ್ ಗಳನ್ನು ಸರಿಪಡಿಸುವ ಮೂಲಕ ಮುಂದಾಗಬಹುದಾದ ಭಾರಿ ಅನಾಹುತವನ್ನು ತಡೆಯುವಂತೆ ಈ ಸಂದರ್ಭದಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನೆನಪಿಸಲು ಇಷ್ಟ ಪಡುತ್ತೇವೆ ಎಂದರು .

Post a Comment

0 Comments