ರಾಣೇಬೆನ್ನೂರು:ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕು ಕುಮಾರ ಪಟ್ಟಣಂ ಪೊಲೀಸ್ ಠಾಣಾ ಸರಹದ್ದಿನ ಕವಲೆತ್ತು ಗ್ರಾಮದ ದುರ್ಗಾ ಕಾಲೊನಿಯಲ್ಲಿರುವ ಭೀಮನಗೌಡ ಪಾಟೀಲ್ ಇವರ ಖಾಲಿ ನಿವೇಶನದಲ್ಲಿ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಸಂಗ್ರಹಿಸಿದ ಹಿನ್ನಲೆ ಕುಮಾರಪಟ್ಟಣಂ ಪಿಎಸ್ ಐ ಸಂಜಯಕುಮಾರ್ ಖಚಿತ ಮಾಹಿತಿಯ ಮೇಲೆ ದಾಳಿ ನಡೆಸಿದ್ದಾರೆ.
ಕುಮಾರಪಟ್ಟಣಂ ಪೊಲೀಸ್ ಠಾಣಾ ಸರಹದ್ದಿನ ಕವಲೆತ್ತು ಗ್ರಾಮದ ಭೀಮನಗೌಡ ಪಾಟೀಲ್ ಇವರ ಖಾಲಿ ನಿವೇಶನದಲ್ಲಿ ಸುಮಾರು 1ಲಕ್ಷ ಮೌಲ್ಯದ ನೂರು ಮೆಟ್ರಿಕ್ ಟನ್ ಮರಳನ್ನು ವಶಪಡಿಸಿಕೊಂಡಿದ್ದಾರೆ.
ಪಿಎಸ್ಸೈ ಸಂಜೀವ್ ಕುಮಾರ್ ಅವರ ಕಾರು 2ದಿನದ ಹಿಂದೆ ಅಪಘಾತವಾಯಿತು ಅದೃಷ್ಟವಶಾತ್ ಸಂಜೀವ್ ಕುಮಾರ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು ಸಣ್ಣಪುಟ್ಟ ಗಾಯಗಳಾಗಿದ್ದು ಅವರು ವಿಶ್ರಾಂತಿ ಪಡೆಯಬೇಕಾಗಿತ್ತು.
ಆದರೆ ಪಿಎಸ್ಸೈ ಸಂಜೀವಕುಮಾರ ಕರ್ತವ್ಯವೇ ದೇವರೆಂದು ನಂಬಿ,ಅಪಘಾತ ಆಘಾತದಿಂದ ಹೊರಬಂದು ಕೆಲವೇ ಗಂಟೆಗಳಲ್ಲಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿ ತಮ್ಮ ವ್ಯಾಪ್ತಿಯ ಸರಹದ್ದಿನಲ್ಲಿ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವತ್ತ ಗಮನ ಹರಿಸುತ್ತಿದ್ದಾರೆ.
ಪಿಎಸ್ಸೈ ಸಂಜೀವ್ ಕುಮಾರ್ ಅವರ ಕಾರ್ಯ ದಕ್ಷತೆಗೆ ಕುಮಾರಪಟ್ಟಣಂ ಪೊಲೀಸ್ ಠಾಣಾ ಸರಹದ್ದಿನ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕವಲೆತ್ತು ಗ್ರಾಮದ ದುರ್ಗಾ ಕಾಲೋನಿಯಲ್ಲಿ ತುಂಗಭದ್ರಾ ನದಿ ತೀರದಿಂದ ಅಕ್ರಮ ಮರಳು ಗಣಿಗಾರಿಕೆಯಿಂದ ಮರಳು ಸಂಗ್ರಹಣೆ ಮಾಡಿದ ಮರಳು ಅಡ್ಡೆಯ ಮೇಲೆ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ,ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ರಾಣೆಬೆನ್ನೂರು ಗ್ರಾಮಾಂತರ ಡಿವೈಎಸ್ಪಿ ಶ್ರೀ. ಟಿ.ವಿ ಸುರೇಶ್ ಇವರ ಮುಂದಾಳತ್ವದಲ್ಲಿ ,ಸಿಪಿಐ ಶ್ರೀಮತಿ ಭಾಗ್ಯವತಿ ಬಂತಿ ಇವರ ಉಪಸ್ಥಿತಿಯಲ್ಲಿ ಕುಮಾರ ಪಟ್ಟಣಂ ಪಿಎಸ್ಸೈ ಶ್ರೀ.ಸಂಜೀವ್ ಕುಮಾರ್ ಹಾಗೂ ಸಿಬ್ಬಂದಿಗಳೊಂದಿಗೆ ಕವಲೆತ್ತು ಗ್ರಾಮದ ತುಂಗಾ ನದಿ ತೀರದಿಂದ ಸಂಗ್ರಹಣೆಯಾಗಿರುವಂತಹ ಮರಳು ಅಡ್ಡೆಯ ಮೇಲೆ ದಾಳಿ ಮಾಡಿ ಸರಿಸುಮಾರು 1.00000/-ಮೊತ್ತದ 100 ಮೆಟ್ರಿಕ್ ಟನ್ ಮರಳನ್ನು ವಶಪಡಿಸಿಕೊಂಡಿರುತ್ತಾರೆ.
ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿರುವವರ ಮೇಲೆ ಕುಮಾರ ಪಟ್ಟಣಂ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ರೀತಿ ಕ್ರಮ ಕೈಗೊಂಡಿರುತ್ತಾರೆ.
ಕುಮಾರಪಟ್ಟಣಂ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಿರಂತರವಾಗಿ ಮರಳು ಗಣಿಗಾರಿಕೆ ನಡೆಯುತ್ತಿದ್ದು ಪೊಲೀಸ್ ಇಲಾಖೆ ತಡೆಯುವ ನಿಟ್ಟಿನಲ್ಲಿ ಸತತ ಪ್ರಯತ್ನ ಮಾಡುತ್ತಲೇ ಬಂದಿದೆ .ಆದರೆ ಭೂ ಮತ್ತು ಗಣಿ ಹಾಗೂ ಕಂದಾಯ ಇಲಾಖೆ ಅಕ್ರಮ ಮರಳು ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರುತ್ತಿದೆ .ಪೋಲಿಸ್ ಇಲಾಖೆ ಇತರ ಕೆಲಸದ ಒತ್ತಡದ ನಡುವೆಯೂ ಅಕ್ರಮ ಮರಳು ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ತಮ್ಮ ದಕ್ಷತೆಯನ್ನು ಮೆರೆಯುತ್ತಿದ್ದಾರೆ .
0 Comments