ಸರಕಾರವೇ ಜನರಿಗೆ ಅನ್ಯಾಯ ಮಾಡಿದೆ. ಸ್ಲಂಬೋರ್ಡ್ ಮನೆಗಳ ನಿರ್ಮಾಣ ಆಗಬೇಕು, ಇಲ್ಲವೇ ಹೋರಾಟ ಮಾಡಲು ಸಿದ್ದರಾಗುತ್ತೇವೆ-ಮಾಜಿ ಕೌನ್ಸಿಲರ್ ರವಿ ಜಂಬಗಾರು
ಸ್ಲಂಬೋರ್ಡ್ ಫಲಾನುಭವಿಗಳ ಅಹವಾಲು ಸ್ಲಂಬೋರ್ಡ್ ಆಯುಕ್ತರಿಗೆ ತಿಳಿಸುತ್ತವೆ-ಸ್ಲಂಬೋರ್ಡ್ ಅಧಿಕಾರಿ*
ಸಾಗರ ; ಸಾಗರದಲ್ಲಿ ಸ್ಲಂಬೋರ್ಡ್ ಮನೆಗಳನ್ನು ಕಟ್ಡಿಕೊಡುವ ಉದ್ದೇಶ ಇತ್ತು. ಆದರೆ ಟೆಂಡರ್'ದಾರರು ಆಸಕ್ತಿ ತೋರದ ಕಾರಣದಿಂದ 488ಮನೆಗಳ ನಿರ್ಮಾಣಕ್ಕೆ ಹಣ ಕಾದಿರಿಸಲಾಗಿತ್ತು. ಆದರೆ ಮನೆಗಳ ಕಾಮಗಾರಿಯೇ ಆರಂಭವಾಗದ 188ಮನೆಗಳ ಡಿಡಿಯನ್ನು ಸ್ಲಂಬೋರ್ಡ್ ಕಮೀಷನರ್ ಆಯಾಯ ಫಲಾನುಭವಿಗಳಿಗೆ ಹಿಂತಿರುಗಿಸಲು ಹೇಳಿದ್ದಾರೆ ಈ ಕಾರಣದಿಂದ ಅವರುಗಳಿಗೆ ಡಿಡಿ ಹಿಂತಿರುಗಿ ನೀಡಲಾಗುವುದೆಂದು ಮೈಸೂರು ವಿಭಾಗದ ಸ್ಲಂಬೋರ್ಡ್ ಅಧಿಕಾರಿ ಹೇಳಿದರು.
ಅವರು ಸಾಗರದ ನಗರಸಭೆಯ ಹೊರ ಸಭಾಂಗಣದಲ್ಲಿ ವಿವರ ನೀಡಿದರು.
ಸ್ಲಂಬೋರ್ಡ್ ಫಲಾನುಭವಿಗಳ ವಿರೋಧ, ಅತೀ ಕಷ್ಟದಲ್ಲಿರುವ ಹಲವರಿಂದ ಡಿಡಿ ಸ್ವೀಕಾರ
ಗಣಪತಿ ಮಂಡಗಳಲೆ ಮಾತನಾಡಿದ್ದು, ಸಾಗರದ ಸ್ಲಂಬೋರ್ಡ್ ಮನೆ ಫಲಾನುಭವಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ಈಗ ಡಿಡಿ ಹಿಂತಿರುಗಿಸುತ್ತಿರುವುದು ಸರಿಯಾದ ವಿಷಯವಲ್ಲ. ಸಾಲ ಮಾಡಿ ಬಡ್ಡಿ ತುಂಬುತ್ತಿರುವ ಅನೇಕರು ಕಳೆದ ನಾಲ್ಕು ವರುಷಗಳಿಂದ ಎಷ್ಟು ಬಡ್ಡಿ ಕಟ್ಡಿದ್ದಾರೋ ಅದನ್ನು ಸಹ ಹಿಂತಿರುಗಿಸಬೇಕಿದೆ ಎಂದು ಹೇಳಿದರು. ಇಲ್ಲದಿದ್ದಲ್ಲಿ ಡಿಡಿ ಹಿಂಪಡೆಯಲಾಗುವುದಿಲ್ಲ ಹಾಗೂ ಮನೆ ನೆಲಸಮ ಮಾಡಿ ಬಾಡಿಗೆ ಮನೆಯಲ್ಲಿ ಇರುವ ಮನೆಗಲಕ ಇಷ್ಟು ವರುಷದ ಬಾಡಿಗೆಯನ್ನು ಸಹ ನೀಡಬೇಕೆಂದು ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಲಂಬೋರ್ಡ್ ಅಧಿಕಾರಿಗಳು ಈ ವಿಷಯವನ್ನು ನಾನು ಸ್ಲಂಬೋರ್ಡ್ ಆಯುಕ್ತರ ಗಮನಕ್ಕೆ ತರುವುದಾಗಿ ಹೇಳಿದರು.
ಮಾಜಿ ಕೌನ್ಸಿಲರ್ ರವಿ ಜಂಬಗಾರು ಮಾತನಾಡಿದ್ದು, 488ಮನೆಗಳನ್ನು ಬೇರೆ ಟೆಂಡರ್'ದಾರರಿಗೆ ನೀಡಿ ಮಳೆಗಾಲ ಮುಗಿಯುವುದರೊಳಗೆ ಸ್ಲಂಬೋರ್ಡ್ ಮನೆ ಪೂರ್ಣಗೊಳಿಸುವಂತೆ ಕೇಳಿಕೊಂಡರು. ಹಾಗೇಯೇ ಅತೀ ತುರ್ತು ಇರುವವರು ಡಿಡಿ ಪಡೆದುಕೊಳ್ಳುವುದಾದರೆ ಅಂತಹವರಿಗೆ ಡಿಡಿ ನೀಡುವಂತೆ ಅಧಿಕಾರಿಗಳಲ್ಲಿ ಕೇಳಿಕೊಂಡರು.
ಲಕ್ಷ್ಮಣ್ ಸಾಗರ್ ಮಾತನಾಡಿದ್ದು, ಸರಕಾರ ಜನರಿಗೆ ವಂಚನೆ ಮಾಡಿದೆ. ಇದೇ ಕೆಲಸ ಖಾಸಗಿಯವರು ಮಾಡಿದ್ದರೆ ಸರಕಾರ ಇಷ್ಟು ಹೊತ್ತಿಗೆ ಅವರ ಮೇಲೆ ಕೇಸ್ ದಾಖಲಿಸುತ್ತಿತ್ತು. ಆದರೆ ಸರಕಾರವೇ ಜನರಿಗೆ ವಂಚಿಸಿರುವಾಗ ನಾವೇಕೆ ನಿಮ್ಮ ಮೇಲೆ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಬಾರದೆಂದು ಹೇಳಿದರು. ಮನೆಯಿಲ್ಲದ ಜನರಿಗೆ ಸ್ಲಂಬೋರ್ಡ್ ದ್ರೋಹ ಬಗೆದಿದೆ ಎಂದು ಹೇಳಿದರು. ಇದಕ್ಕೆ ಇನ್ನೊಂದು ವಾರದಲ್ಲಿ ಸರಿಯಾದ ಉತ್ತರ ನೀಡಬೇಕು ಇಲ್ಲದಿದ್ದಲ್ಲಿ ಹೋರಾಟಕ್ಕೆ ಮುಂದಾಗುವುದಾಗಿ ಹೇಳಿದರು.
ಪ್ರವೀಣ್ ಬಣಕಾರ್ ಮಾತನಾಡಿದ್ದು, ಬಡಜನರನ್ನು ಬೀದಿಗೆ ತಳ್ಳಿದ ಸ್ಲಂಬೋರ್ಡ್ ಅವರ ಪರಿಸ್ಥಿತಿ ಒಮ್ಮೆ ಬಂದು ನೋಡಬೇಕಿದೆ. ಅವರುಗಳು ಇತ್ತ ಇದ್ದ ಮುರುಕು ನೆಲೆಯನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. 480000/- ರೂ.ಗಳ ಮನೆ ಕಟ್ಟಿಕೊಡುವವರು ಈಗ ಡಿಡಿ ವಾಪಾಸ್ ಮಾಡಲು ಬಂದಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ 77 ಡಿಡಿಗಳನ್ನು ಮಾತ್ರ ಹಿಂತಿರುಗಿಸಲು ಅಧಿಕಾರಿಗಳು ಬಂದಿದ್ದರು. ಉಳಿದ ಡಿಡಿಗಳನ್ನು ಹಂತ ಹಂತವಾಗಿ ಹಿಂತಿರುಗಿಸುವುದಾಗಿ ಹೇಳಿದರು. ಈ ಹಿಂದೆ ಬಿಜೆಪಿ ನಗರ ಯುವಮೋರ್ಚಾ ಅಧ್ಯಕ್ ಮತ್ತು ನಗರಸಭಾ ಸದಸ್ಯರಾದ ಶ್ರೀರಾಮ, ಭಾವನಾ ಸಂತೋಷ್ ಸ್ಲಂಬೋರ್ಡ್ ಅಧಿಕಾರಿಗಳನ್ನು ಒಂದು ವಾರದ ಹಿಂದೆ ಭೇಟಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
0 Comments