ಚಿಕ್ಕಬಿದರಿ ಗ್ರಾಮದಲ್ಲಿ ಹಗಲು ಹೊತ್ತಿನಲ್ಲೇ ಉರಿಯುತ್ತಿರುವ ಬೀದಿ ದೀಪಗಳು.!!!


ಹರಿಹರ:-ಹರಿಹರದ ಬೆಸ್ಕಾಂ ಇಲಾಖೆಗೆ ಕೋಟಿ ಕೋಟಿ ಬಾಕಿ.ಬಾಕಿ ವಸೂಲಾತಿಗಾಗಿ ಬೆಸ್ಕಾಂ ಇಲಾಖೆಯವರು ಕಂಡುಕೊಂಡ ದಾರಿ ಬಡವರ ಹೇರುವುದು ಅವರಿಂದ ಸಾಧ್ಯವಾದಷ್ಟು ಹಣ ವಸೂಲಿ ಮಾಡುವುದು.
ಅದೇ ಗ್ರಾಮ ಪಂಚಾಯತಿಗಳಲ್ಲಿ ಕೋಟಿ ಕೋಟಿ ಬಾಕಿ ಹಣ ಇದ್ದರೂ ವಸೂಲಿ ಮಾಡದೆ ಮೌನಕ್ಕೆ ಶರಣಾಗಿರುವುದು.

ಹರಿಹರದ ಬೆಸ್ಕಾಂ ಇಲಾಖೆಯವರಿಗೆ ಬಡವರು ಎಂದರೆ ನಿರ್ಲಕ್ಷ್ಯ .ಅವರ ರಕ್ತವನ್ನು ಹೀರುವುದು ಎಂದರೆ ಆನಂದ.

ವರ್ಷಾನುಗಟ್ಟಲೆಯಿಂದ ಬೆಸ್ಕಾಂ  ಇಲಾಖೆಗೆ ಕರೆಂಟು ಬಿಲ್ಲನ್ನು ಪಾವತಿಸದೆ ಕೋಟಿ ಕೋಟಿ ಬಾಕಿ ಇಟ್ಟುಕೊಂಡಿರುವ ಗ್ರಾಮ ಪಂಚಾಯತಿಗಳಿಗೆ ಕಾಟಾಚಾರದ ನೋಟಿಸ್ ಜಾರಿ .ಅದೇ ಪ್ರತಿತಿಂಗಳು ಸರಿಯಾಗಿ ಕರೆಂಟ್ ಬಿಲ್ಲನ್ನು ಪಾವತಿಸುತ್ತಿರುವ ಜನಸಾಮಾನ್ಯನೂ ಒಂದು ದಿನ ತಡವಾದರೆ ಕರೆಂಟ್ ಕಟ್ ಮಾಡುವ ಅಧಿಕಾರಿಗಳು.ಇಂತಹ ವ್ಯವಸ್ಥೆಯಲ್ಲಿ ಬಡ ಮಧ್ಯಮ ವರ್ಗದ ಜನರು ಬದುಕುತ್ತಿದ್ದಾರೆ .
ಸಾರಥಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕಬಿದರಿ ಗ್ರಾಮದಲ್ಲಿ ಹಗಲು ಹೊತ್ತಿನಲ್ಲೇ ಬೀದಿ ದೀಪಗಳು ಉರಿಯುತ್ತಿವೆ .ಬೀದಿ ದೀಪಗಳ ನಿರ್ವಹಣೆ ಮಾಡುವವರು ಯಾರು ಎಂಬ ಪ್ರಶ್ನೆ ಗ್ರಾಮದ ಜನರಿಗೆ ಕಾಡುತ್ತಿದೆ .ಈ ರೀತಿ ಹಗಲು ಹೊತ್ತಿನಲ್ಲೇ ಬೀದಿ ದೀಪ ಉರಿಯುತ್ತಿರುವ ಪರಿಣಾಮ ಗ್ರಾಮ ಪಂಚಾಯತಿಗಳಲ್ಲಿ ಕೋಟಿ ಕೋಟಿ ಬಿಲ್ ಬರುತ್ತಿದೆ ಹಾಗೂ ಬಾಕಿ ಉಳಿಯುತ್ತಿದೆ .

ಪಂಚಾಯತಿಯ ಅಭಿವೃದ್ಧಿ ಎಂದರೇನು ?ಎಂಬ ಅನುಮಾನ ಚಿಕ್ಕಬಿದರೆ ಗ್ರಾಮದ ಜನರಿಗೆ ಕಾಡುತ್ತಿದೆ .ಅಭಿವೃದ್ಧಿ ಅಧಿಕಾರಿಗಳು ಅಮಾವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಪಂಚಾತಿಗೆ ಬರುತ್ತಾರೆ ಬಂದರೂ ಜನಸಾಮಾನ್ಯರ ಕೈಗೆ ಸಿಗುವುದಿಲ್ಲ ಎಂಬುದು ಅಲ್ಲಿನ ನಾಗರಿಕರ ಪ್ರಶ್ನೆಯಾಗಿದೆ .

ಚಿಕ್ಕಬಿದರಿ ಗ್ರಾಮದಲ್ಲಿ ಕಳೆದ 1ವರ್ಷದಿಂದ ನಿರಂತರವಾಗಿ ಬೀದಿ ದೀಪ ಹಗಲು ರಾತ್ರಿ ಎನ್ನದೆ ಉರಿಯುತ್ತಲೇ ಇವೆ .ಗ್ರಾಮದ ಜನರು ಹಲವು ಬಾರಿ ಸಂಬಂಧಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ವಿದ್ಯುತ್ ಉಳಿತಾಯ ಮಾಡುವ ಹಾಗೂ ಬೀದಿ ದೀಪಗಳನ್ನು ಆಪ್ ಮಾಡುವ ವಿಚಾರದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ .

ಕೂಡಲೇ ಸಾರಥಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ತಮ್ಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಬೀದಿ ದೀಪಗಳ ನಿರ್ವಹಣೆಯ ಜೊತೆಗೆ ವಿದ್ಯುತ್ ಉಳಿತಾಯಕ್ಕೆ ಸಂಬಂಧಿಸಿದಂತೆ ಪ್ರತಿದಿನ ದೀಪಗಳನ್ನ ಆಪ್ ಮಾಡುವ ವ್ಯವಸ್ಥೆಯನ್ನು ಕಲ್ಪಿಸಬೇಕು ಆ ಮೂಲಕ ಅನಾವಶ್ಯಕವಾಗಿ ಹಗಲು ಹೊತ್ತಿನಲ್ಲಿ ಉರಿಯುತ್ತಿರುವ ದೀಪ ಕ್ಕೆ ಕಡಿವಾಣ ಹಾಕಿದಂತಾಗುತ್ತದೆ ಸರ್ಕಾರದ ಆರ್ಥಿಕ ಬೊಕ್ಕಸಕ್ಕೆ ಸಾವಿರಾರು ರೂಪಾಯಿಗಳು ಉಳಿತಾಯವಾಗುತ್ತದೆ ಆ ನಿಟ್ಟಿನಲ್ಲಿ ಕೂಡಲೇ ಸಾರಥಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಅವರು ಮುಂದಾಗುತ್ತಾರೋ ಕಾದು ನೋಡಬೇಕಾಗಿದೆ .

ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಸಹ ವಿದ್ಯುತ್ ಉಳಿತಾಯ ಮಾಡುವ ಸಂಬಂಧ ಸಂಬಂಧಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಆಗಿಂದಾಗೆ ತರಬೇತಿ ಮತ್ತು ಮಾಹಿತಿಯನ್ನು ನೀಡಿದರೆ ಇನ್ನೂ ಒಳ್ಳೆಯದು ಎಂಬುದು ನಮ್ಮ ಮಾಧ್ಯಮದ ಅಭಿಪ್ರಾಯವಾಗಿದೆ .

Post a Comment

0 Comments