ರಾಣಿಬೆನ್ನೂರು:ಕುಮಾರಪಟ್ಟಣಂ ಸುತ್ತ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆಯಾ ಕಟ್ಟಿನ ಜಾಗದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಕುಮಾರಪಟ್ಟಣಂ ಪಿಎಸ್ ಐ ಸಂಜೀವ್ ಕುಮಾರ್ ಅವರು ನಮ್ಮ ಮಾಧ್ಯಮ ಪ್ರತಿನಿಧಿಯೊಂದಿಗೆ ಹಂಚಿಕೊಂಡರು.
ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಪ್ರಕಾರ ಕುಮಾರಪಟ್ಟಣಂನ ನಾಲ್ಕು ದಿಕ್ಕಿನಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.ಸಿಸಿ ಕ್ಯಾಮೆರಾದ ಮೂಲಕ ಕಾನೂನುಗಳನ್ನು ಉಲ್ಲಂಘಿಸುವ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ಇಡಲಾಗುವುದು,ಹಾಗೂ ಸಂಚಾರಿ ನಿಯಮ ಉಲ್ಲಂಘಿಸುವ ವ್ಯಕ್ತಿಗಳಿಗೆ ಎಚ್ಚರಿಕೆ ನೀಡುವ ಉದ್ದೇಶವೂ ಹೊಂದಿರುತ್ತದೆ.ಕುಮಾರಪಟ್ಟಣಂ ಸುತ್ತ ಸಿಸಿ ಕ್ಯಾಮೆರಾ ಅಳವಡಿಸಿರುವುದರಿಂದ ಮುಂದಿನ ದಿನದಲ್ಲಿ ನಡೆಯುವಂಥ ಅಪರಾಧ ಚಟುವಟಿಕೆಗಳನ್ನು ಪೊಲೀಸ್ ಠಾಣೆಯಲ್ಲಿ ಕುಳಿತು ವೀಕ್ಷಿಸುವುದರ ಮೂಲಕ ಅಪರಾಧ ಚಟುವಟಿಕೆಯಲ್ಲಿ ಭಾಗವಹಿಸುವರ ಮೇಲೆ ಹೆಚ್ಚಿನ ನಿಗಾ ಇಡಲು ಸಹಕಾರಿಯಾಗುತ್ತದೆ.
ಕುಮಾರಪಟ್ಟಣ ಪೋಲಿಸ್ ಠಾಣಾ ಸರಹದ್ದಿಗೆ ಸಂಬಂಧಿಸಿದಂತೆ ಕುಮಾರಪಟ್ಟಣಂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ.ಅದೇ ರೀತಿ ಅಪರಾಧ ಚಟುವಟಿಕೆಗಳು ದಿನೇ ದಿನೇ ಹೆಚ್ಚಾಗುವ ಸಾಧ್ಯತೆ ಇದೆ .ಮೇಲಾಗಿ ಗ್ರಾಸಿಮ್ ಕೈಗಾರಿಕಾ ಪ್ರದೇಶವಾಗಿರುವುದರಿಂದ ಹೊರರಾಜ್ಯದಿಂದ ಸರಕು ತುಂಬಿದ ವಾಹನಗಳು ಸಂಚರಿಸುತ್ತವೆ ಅಲ್ಲದೆ ಇದು ಮುಂಬೈ ಟು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ತಿರುಗಾಡುತ್ತಿದೆ ಇದರ ಜತೆ ಅಪರಾಧ ಚಟುವಟಿಕೆಗಳು ಸಹ ನಡೆಯುತ್ತವೆ .ಆ ನಿಟ್ಟಿನಲ್ಲಿ ಇರುವಂತಹ ಸಿಬ್ಬಂದಿಗಳ ಸಹಾಯದಿಂದ ಅಪರಾಧ ಚಟುವಟಿಕೆಗಳು ನಿಯಂತ್ರಿಸುವುದು ಕಷ್ಟ ಆದರೆ ಸಿಸಿ ಕ್ಯಾಮೆರಾದ ಸಹಾಯದಿಂದ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರ ಮೇಲೆ ನಿಗಾ ಇಡುವ ಮೂಲಕ ಕ್ರಮ ಕೈಗೊಳ್ಳಲು ಸಾಕ್ಷಿಯ ಅವಶ್ಯಕತೆ ಇರುತ್ತದೆ .ಆ ನಿಟ್ಟಿನಲ್ಲಿ ಸಿಸಿ ಕ್ಯಾಮೆರಾದಲ್ಲಿ ಅಡಕವಾದ ದೃಶ್ಯಾವಳಿಗಳ ಸಹಾಯದಿಂದ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರ ಮೇಲೆ ಕ್ರಮ ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದರು .
"ಪಬ್ಲಿಕ್ ಸೇಫ್ಟಿ ಆ್ಯಕ್ಟ್" ಪ್ರಕಾರ ಪ್ರತಿ ಸಾರ್ವಜನಿಕ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ಸರ್ಕಾರದ ಆದೇಶವಿದೆ.ಅದರಲ್ಲೂ ಹೆಚ್ಚಿನ ಜನದಟ್ಟಣೆ ಇರುವ ಪ್ರದೇಶದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನ ಅಳವಡಿಸಬೇಕಾಗಿದೆ ಆ ನಿಟ್ಟಿನಲ್ಲಿ ಕುಮಾರಪಟ್ಟಣಂ ಸುತ್ತ ನಾಲ್ಕು ದಿಕ್ಕಿಗೂ ಸಿಸಿ ಕ್ಯಾಮೆರಾ ಅಳವಡಿಸಿದ್ದೇವೆ.ಕುಮಾರಪಟ್ಟಣಂ ಮುಖ್ಯ ಸರ್ಕಲ್ಲಿನಲ್ಲಿ ಎರಡು ಸಿಸಿ ಕ್ಯಾಮೆರಾಗಳು,ರಾಜನಹಳ್ಳಿ ಮಾರ್ಗವಾಗಿ ಹೋಗುವ ಕಡೆ ಎರಡು ಸಿಸಿ ಕ್ಯಾಮೆರಾಗಳು.ಹಾಗೂ ರಾಣೇಬೆನ್ನೂರು ಕಡೆ ಹೋಗುವ ಮಾರ್ಗದಲ್ಲಿ ಎರಡು ಸಿ.ಸಿ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ. ಮುಂದಿನ ದಿನದಲ್ಲಿ ಮಾಕನೂರು ಹೈ ವೇ ಬ್ರಿಡ್ಜ್ ಕೆಳಗಡೆ ಸರ್ಕಲ್ಲಿನ ಹತ್ತಿರ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವುದು, ಅದೇ ರೀತಿ ತುಂಗಭದ್ರಾ ನದಿ ತೀರದ ಹತ್ತಿರ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಯೋಚನೆ ಇದೆ ಎಂದು ಇದೇ ಸಂದರ್ಭದಲ್ಲಿ ಕುಮಾರಪಟ್ಟಣಂ ಪಿಎಸ್ ಐ ಸಂಜೀವ್ ಕುಮಾರ್ ಅವರು ಹೇಳಿದರು.
ಒಟ್ಟಾರೆಯಾಗಿ ಕುಮಾರಪಟ್ಟಣಂ ಪೊಲೀಸ್ ಠಾಣಾ ಸರಹದ್ದಿಗೆ ಸಂಬಂಧಿಸಿದಂತೆ ಕುಮಾರಪಟ್ಟಣಂ ಸುತ್ತ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರಿಗೆ ಸೂಕ್ತ ರಕ್ಷಣೆಯನ್ನು ಕೊಡುವ ಜವಾಬ್ದಾರಿಯಿಂದ ಕುಮಾರಪಟ್ಟಣಂ ಸುತ್ತ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.
ಕುಮಾರ ಪಟ್ಟಣಂ ತಾಲ್ಲೂಕಿನಲ್ಲೇ ಪ್ರಥಮ "ಪಬ್ಲಿಕ್ ಸೇಫ್ಟಿ ಆಕ್ಟ್" ಕಾನೂನು ನಿಯಮದಂತೆ ಸಿಸಿ ಕ್ಯಾಮೆರಾ ಅಳವಡಿಸಿದ ಪ್ರಥಮ ಪೊಲೀಸ್ ಠಾಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪಿಎಸ್ಸೈ ಸಂಜೀವ್ ಕುಮಾರ್ ಅವರ ಜನಪರ ಕಾಳಜಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
0 Comments