ಹಲಗೇರಿ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ,ಜನರ ನಂಬಿಕೆಯ ಜತೆ ಚೆಲ್ಲಾಟವಾಡುತ್ತಿದ್ದ 5 ಜನರ ಬಂಧನ..!


ರಾಣೇಬೆನ್ನೂರ:ಜನರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡಿರುವ ಖದೀಮರು ಅವರ ಜೊತೆ ಚೆಲ್ಲಾಟವಾಡುತ್ತಾರೆ ಅವರಿಂದ ವಂಚನೆಯ ಮಾಡಿ ಹಣ ದೋಚುತ್ತಾರೆ.ಈ ರೀತಿ ಜನರ ನಂಬಿಕೆ ಜತೆ ಚೆಲ್ಲಾಟವಾಡುತ್ತಿದ್ದ 5  ಆರೋಪಿತರನ್ನು  ಹಲಗೇರಿ  ಪೋಲಿಸ್ ಇಲಾಖೆಯವರು ಬಂಧಿಸಿ ಶ್ರೀಕೃಷ್ಣನ ಜನ್ಮಸ್ಥಾನಕ್ಕೆ ಅಟ್ಟಿದ್ದಾರೆ.

ರಾಣೇಬೆನ್ನೂರು ತಾಲ್ಲೂಕಿನ ಕಮದೋಡ ಗ್ರಾಮದ ಶ್ರೀ ಲಕ್ಷ್ಮೀ ಕಟ್ಟೆ ಚೌಡಮ್ಮನ ಗುಡಿಯ ಹತ್ತಿರ ಇಂದು ಮಧ್ಯಾಹ್ನ ಸರಿಸುಮಾರು ಹನ್ನೆರಡು ಮೂವತ್ತು ಗಂಟೆಗೆ ದೇವಸ್ಥಾನದ ಮುಂಭಾಗದಲ್ಲಿ ಕಾದು ಕುಳಿತಿದ್ದರು.

ದೇವಸ್ಥಾನಕ್ಕೆ ಬಂದು ಹೋಗುತ್ತಿದ್ದ ಕೆಲವು ಮುಗ್ಧ ಜನರನ್ನು ತಮ್ಮ ಬಳಿಗೆ ಕರೆದು ನಮ್ಮ ಬಳಿ ಸಿಡಿಲು ಬಡಿದ (ರೈಸ್ ಪುಲ್ಲಿಂಗ್) ತಂಬಿಗೆ ಇದೆ ಅದಕ್ಕೆ ಸಿಡಿಲು ಬಡಿದಾಗ ವಿಶೇಷವಾದ ಶಕ್ತಿ ಬಂದಿರುತ್ತದೆ ಅದನ್ನು ಮನೆಯಲ್ಲಿಟ್ಟು ಪೂಜೆ ಮಾಡಿದರೆ ನಿಮ್ಮ ವ್ಯಾಪಾರ ಹಾಗೂ ವ್ಯವಹಾರಗಳು ವೃದ್ಧಿಯಾಗುತ್ತದೆ.ಕೋಟ್ಯಂತರ₹ಆದಾಯ ನಿಮ್ಮ ಮನೆಗೆ ಹರಿದುಬರುತ್ತದೆ ಲಕ್ಷ್ಮಿ ನಿಮ್ಮ ಮನೆಯಲ್ಲಿ ಕಾಲು ಮುರಿದುಕೊಂಡು ಕುಳಿತುಕೊಳ್ಳುತ್ತಾಳೆ.ಅಂತಹ ವಿಶೇಷವಾದ ತಂಬಿಗೆಗಳು ನಮ್ಮ ಬಳಿ ಇವೆ ಅದನ್ನು ನಿಮ್ಮ ಮುಂದೆ ಟೆಸ್ಟ್ ಮಾಡಿ ಬೇಕಾದರೆ ತೋರಿಸುತ್ತೇವೆ ಒಂದು ತಂಬಿಗೆಯ ಬೆಲೆ 25 ಸಾವಿರದಿಂದ 50 ಸಾವಿರೂಪಾಯಿಗಳು ಆಗುತ್ತದೆ ಎಂದು ಜನರಿಗೆ ನಂಬಿಸಿ ಅವರನ್ನು ವಂಚಿಸಿ ಹಣ ಪಡೆಯುವ ಪ್ರಯತ್ನದಲ್ಲಿರುವ ಸಂದರ್ಭದಲ್ಲಿ ಹಲಗೇರಿ ಪೋಲಿಸ್ ಇಲಾಖೆಯವರು ಖಚಿತ ಮಾಹಿತಿಯ ಮೇಲೆ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಹಾವೇರಿ,ಪೊಲೀಸ್ ಉಪ ವರಿಷ್ಠಾಧಿಕಾರಿ ಗಳು ರಾಣೇಬೆನ್ನೂರ ರವರ ಮಾರ್ಗದರ್ಶನದಲ್ಲಿ ಕುಮಾರಪಟ್ಟಣಂ ವೃತ್ತ ನಿರೀಕ್ಷಕರಾದ ಸಿ.ಪಿ.ಐ. ಶ್ರೀಮತಿ ಭಾಗ್ಯವತಿ ಬಂತಿ ಇವರ ನೇತೃತ್ವದಲ್ಲಿ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಹಲಗೇರಿ ಠಾಣೆಯ ಖಡಕ್ ಪಿಎಸ್ಸೈ ಶ್ರೀ ಮೇಘರಾಜ್ ಎಂ.ವಿ ರವರು ತನಿಖೆ ಕೈಗೊಂಡು ಪಿಎಫ್ಐ ಶ್ರೀ ಕೆ.ಸಿ ಕೋಮಲಾಚಾರ್ ಅವರು ಹಾಗೂ ಸಿಬ್ಬಂದಿಯವರಾದ ಕೃಷ್ಣ ಎಂ ಆರ್, ವಿ.ಎಚ್ ಕೊಪ್ಪದ್, ಎಂ.ಎಚ್ ಬಣಕಾರ್,ಎಂ ಎನ್ ಗೋಣೇರ, ಎಂ.ಎನ್ ಕುಂಟಗೌಡ್ರ ,ಮಾರುತಿ ಹಾಲಭಾವಿ ಹಾಗೂ ಇತರ ಸಿಬ್ಬಂದಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ 5ಜನ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .ಆರೋಪಿತರಿಂದ ಒಂದು ತಾಮ್ರದ ಪಾತ್ರೆ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

Post a Comment

0 Comments