ಹರಿಹರ:ಹರಿಹರದ ಸಾರಿಗೆ ಇಲಾಖೆ ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ.ತಮಗೆ ನೀಡಿದ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಹೀಗೊಂದು ಪ್ರಶ್ನೆ ನಗರದ ನಾಗರಿಕರಲ್ಲಿ ಕಾಡುತ್ತಿದೆ .
ಕೋಟ್ಯಂತರ₹ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸರ್ಕಾರಿ ಬಸ್ ನಿಲ್ದಾಣವನ್ನು ಸಾರಿಗೆ ಇಲಾಖೆಯ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ಬಳಸಿಕೊಳ್ಳುತ್ತಿದ್ದಾರೆ.
ಸರ್ಕಾರದ ಆದೇಶ ಕಾನೂನುಗಳನ್ನು ಉಲ್ಲಂಘಿಸಿ ತಮ್ಮ ಅಪ್ಪನ ಮನೆಯ ದುಡ್ಡಿನಿಂದ ನಿರ್ಮಾಣ ಮಾಡಿದ ಬಸ್ ನಿಲ್ದಾಣ ಎಂದುಕೊಂಡು ತಮಗೆ ಬೇಕಾದವರಿಗೆ ತಮ್ಮ ಮನಸ್ಸಿಗೆ ಬಂದಂತೆ ಟೆಂಡರನ್ನು ನೀಡಿ ಮೂಲ ಕಟ್ಟಡದ ವಿನ್ಯಾಸವನ್ನು ವಿರೋಪಗೊಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ .
ಸರ್ಕಾರದ ಆದೇಶ ಕಾನೂನಿನಂತೆ ಯಾವುದೇ ಸರ್ಕಾರಿ ಕಟ್ಟಡಗಳನ್ನು ತಮ್ಮ ಮನಸ್ಸಿಗೆ ಬಂದಂತೆ ಬಳಸಿಕೊಳ್ಳಲು ಅವಕಾಶವಿರುವುದಿಲ್ಲ ಅದರಂತೆ ಸರ್ಕಾರಿ ಬಸ್ ನಿಲ್ದಾಣ ನಿರ್ಮಾಣ ಮಾಡುವ ಮೊದಲೇ ಒಂದು ನಕ್ಷೆಯನ್ನು ತಯಾರಿಸಿ ಮಳಿಗೆಗಳಿಗೆ ಮತ್ತು ಹೋಟೆಲ್ ಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಿರುತ್ತಾರೆ.
ಸರ್ಕಾರಿ ಬಸ್ ನಿಲ್ದಾಣದಲ್ಲಿ ಗುತ್ತಿಗೆ ಆಧಾರದ ಮೇಲೆ ಮಳಿಗೆ ಮತ್ತು ಹೋಟೆಲ್ ನಡೆಸಲು ರೂಮ್ ಗಳನ್ನು ಪಡೆದಿರುತ್ತಾರೆ .ರೂಮ್ಗಳನ್ನ ಪಡೆದಂತಹ ಟೆಂಡರ್ ದಾರರು ಮೂಲ ಕಟ್ಟಡಕ್ಕೆ ಹಾನಿ ಆಗದ ರೀತಿಯಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ವಿನ್ಯಾಸ ಮಾಡಿಕೊಳ್ಳಲು ಅವಕಾಶವಿರುತ್ತದೆ .ಯಾವುದೇ ಕಾರಣಕ್ಕೂ ಮೂಲ ಕಟ್ಟಡಕ್ಕೆ ಹಾನಿ ಆಗಬಾರದು ಇದು ಸರ್ಕಾರದ ನಿಯಮ ಮತ್ತು ಆದೇಶವಾಗಿರುತ್ತದೆ.ಆದರೆ ಹರಿಹರದ ಸರ್ಕಾರಿ ಬಸ್ ನಿಲ್ದಾಣವನ್ನು ಜಿಲ್ಲಾ ಮಟ್ಟದ ಸಾರಿಗೆ ಇಲಾಖೆಯ ಅಧಿಕಾರಿಗಳು ತಮ್ಮ ಮಾವನ ಮನೆಯಿಂದ ವರದಕ್ಷಿಣೆ ರೂಪದಲ್ಲಿ ಪಡೆದ ಆಸ್ತಿ ಎಂಬಂತೆ ತಮ್ಮ ಮನಸ್ಸಿಗೆ ಬಂದಂತೆ ಟೆಂಡರ್ ನೀಡುವುದು ಅದೇ ರೀತಿ ಮೂಲ ಕಟ್ಟಡಕ್ಕೆ ಹಾನಿಯನ್ನು ಉಂಟು ಮಾಡಿ ಕಟ್ಟಡವನ್ನು ವಿರೂಪಗೊಳಿಸಿ ತಮ್ಮ ಮೂಗಿನ ನೇರಕ್ಕೆ ತಮ್ಮ ಜೇಬಿನಿಂದ ಖರ್ಚು ಮಾಡಿ ಕಟ್ಟಿಸಿದ ಕಟ್ಟಡ ಎನ್ನುವಂತೆ ಟೆಂಡರ್ ದಾರರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ .
ನಮ್ಮ ಮಂದಾರ ನ್ಯೂಸ್ ಸುದ್ದಿವಾಹಿನಿಯ ನೈಜ ದೃಶ್ಯಾವಳಿಯ ಫೋಟೋಗಳನ್ನ ನಿಮ್ಮ ಮುಂದೆ ಇಟ್ಟಿದ್ದೇವೆ ಯಾವ ರೀತಿಯಲ್ಲಿ ಜನಸಾಮಾನ್ಯರ ತೆರಿಗೆಯ ಹಣದಿಂದ ನಿರ್ಮಾಣ ಮಾಡಿರುವಂಥ ಸರ್ಕಾರಿ ಬಸ್ ನಿಲ್ದಾಣವನ್ನ ವಿರೂಪಗೊಳಿಸಿದ್ದಾರೆ ಎಂಬುದನ್ನು ಒಮ್ಮೆ ನೋಡಿ .
ಏಕೆ.! ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನೆ ಮಾಡುವಂಥ ತಾಕತ್ತು ಇರುವಂಥ ಮೇಲಾಧಿಕಾರಿಗಳು ಇಲ್ಲವೇ ?ನಿಮ್ಮ ಕೆಳಹಂತದ ಅಧಿಕಾರಿಗೆ ಪ್ರಶ್ನೆ ಮಾಡುವ ಧೈರ್ಯವನ್ನು ಕಳೆದುಕೊಂಡಿದ್ದೀರಾ ?ಯಾರ ಅಪ್ಪನ ಮನೆಯ ಹಣದಿಂದ ನಿರ್ಮಾಣ ಮಾಡಿರುವುದು ಎಂದುಕೊಂಡು ಬಸ್ ನಿಲ್ದಾಣವನ್ನ ಆ ರೀತಿಯಲ್ಲಿ ವಿರೂಪಗೊಳಿಸಿದ್ದರು .ಏಕೆ ನಿಮಗೆ ಹೇಳುವವರು, ಕೇಳುವವರು ಯಾರೂ ಇಲ್ಲವೇ? ನೀವು ಸರ್ವಾಧಿಕಾರಿಗಳೇ ?ನಿಮ್ಮ ಮನೆಯನ್ನು ಇದೆಯೇ ರೀತಿಯಲ್ಲಿ ಬಾಡಿಗೆದಾರನಿಗೆ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಹಾಗೂ ಕಟ್ಟಡವನ್ನು ವಿನ್ಯಾಸ ಮಾಡಿಕೊಳ್ಳಲು ಅನುಕೂಲ ಮಾಡಿಕೊಡುತ್ತೀರಾ ?ಇಲ್ಲ ಅಲ್ಲವೇ ?ಆದರೆ ಅದೇ ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣ ಮಾಡಿರುವಂಥ ಕಟ್ಟಡವನ್ನು ನಿಮ್ಮ ಮನಸ್ಸಿಗೆ ಬಂದಂತೆ ಬಾಡಿಗೆದಾರನು ವಿರೂಪಗೊಳಿಸಿ ವಿನ್ಯಾಸ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತೀರಾ ಅಲ್ಲವೇ ? ನಾಚಿಕೆಯಾಗುವುದಿಲ್ಲವೇ ?ಸರ್ಕಾರದ ಸಂಬಳವೂ ಬೇಕು ,ಅದೇ ರೀತಿ ವಿವಿಧ ರೀತಿಯ ಸೌಲಭ್ಯ ಬೇಕು ಆದರೆ ಅದೇ ಸಾರ್ವಜನಿಕರ ಸ್ವತಃ ರಕ್ಷಣೆ ಜವಾಬ್ದಾರಿ ಮಾತ್ರ ಹೊರಲು ಸಿದ್ಧರಿಲ್ಲ ಅಲ್ಲವೇ ?ಸಾರ್ವಜನಿಕರೇ ಒಮ್ಮೆ ನೋಡಿ ನಿಮ್ಮ ತೆರಿಗೆಯ ಹಣದಿಂದ ನಿರ್ಮಾಣ ಮಾಡಿರುವಂಥ ಸರ್ಕಾರಿ ಬಸ್ ನಿಲ್ದಾಣವನ್ನ ಹೋಟೆಲ್ ನಡೆಸುವವರು ಯಾವ ರೀತಿಯಲ್ಲಿ ವಿರೂಪಗೊಳಿಸಿದ್ದಾರೆ ಎಂದು .ಇದು ಸಾರಿಗೆ ಇಲಾಖೆ ಅಧಿಕಾರಿಗಳ ಸರ್ವಾಧಿಕಾರಿ ಧೋರಣೆ ಅಲ್ಲವೇ ?ಗ್ರಾಮೀಣ ಭಾಗದ ಜನರಿಗೆ ಬಸ್ ಸೌಲಭ್ಯ ಕಲ್ಪಿಸಲು ಯೋಗ್ಯತೆಯಿಲ್ಲದ ಅಧಿಕಾರಿಗಳಿಗೆ ಈ ರೀತಿ ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಾಣ ಮಾಡಿರುವ ಕಟ್ಟಡವನ್ನ ಹಾನಿ ಮಾಡುತ್ತೀರಾ ?ನಿಮ್ಮ ಈ ರೀತಿಯ ಧೋರಣೆಯನ್ನು ನೇೂಡಿಕೊಂಡು ಕುಳಿತುಕೊಳ್ಳುವ ಜನರು ಯಾರೂ ಇಲ್ಲ .ಸಾರ್ವಜನಿಕರು ದಂಗೆ ಎದ್ದೇಳುವ ಮೊದಲು ಸರಿಪಡಿಸಿಕೊಳ್ಳಿ .ಮೂಲ ಕಟ್ಟಡಕ್ಕೆ ಹಾನಿ ಮಾಡಿದ ಟೆಂಡರ್ ದಾರನ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಿ .ಇಲ್ಲದಿದ್ದರೆ ನಿಮ್ಮ ಇಂಚಿಂಚು ಜಾತಕವನ್ನ ಜನಸಾಮಾನ್ಯರ ಮುಂದೆ ಬಿಚ್ಚಿಡುವ ಪ್ರಯತ್ನ ನಮ್ಮ ಮಂದಾರ ನ್ಯೂಸ್ ಸುದ್ದಿವಾಹಿನಿ ನಿರಂತರವಾಗಿ ಮಾಡುತ್ತಿದೆ .
ಸಾರಿಗೆ ಸಚಿವರೇ ನೋಡಿ ಹರಿಹರದ ಸರ್ಕಾರಿ ಬಸ್ ನಿಲ್ದಾಣವನ್ನು ಹೋಟೆಲ್ ನಡೆಸುವವರಿಗೆ ಹೇಗೆ ಟೆಂಡರ್ ನೀಡಿದ್ದಾರೆ. ಆದರೆ ಟೆಂಡರ್ ಪಡೆದ ವ್ಯಕ್ತಿ ತನ್ನ ಮನಸ್ಸಿಗೆ ಬಂದ ಹಾಗೆ ಮೂಲ ಕಟ್ಟಡವನ್ನು ಯಾವ ರೀತಿಯಲ್ಲಿ ವಿರೂಪಗೊಳಿಸಿದ್ದಾರೆ ಎಂದು .ಮೊದಲು ಸೋರುತ್ತಿರುವ ಬಸ್ ನಿಲ್ದಾಣವನ್ನ ಸರಿಪಡಿಸುವತ್ತ ನಿಮ್ಮ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿ .ನಿಮ್ಮ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನೆ ಮಾಡುವಂಥ ಧೈರ್ಯವನ್ನು ಕಳೆದುಕೊಂಡಿದ್ದೀರಾ ?ಏಕೆ ಬಸ್ ನಿಲ್ದಾಣ ವಿರೂಪಗೊಳಿಸಿದ್ದು ನಿಮ್ಮ ಗಮನಕ್ಕೆ ಬಂದಿಲ್ಲವೇ ?ಬಾರದಿದ್ದರೇನಂತೆ ನಾವು ನಿಮ್ಮ ಗಮನಕ್ಕೆ ತರುವಂತಹ ಪ್ರಯತ್ನ ಮಾಡುತ್ತಿದ್ದೇವೆ ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಹರಿಹರದ ಸಾರಿಗೆ ಇಲಾಖೆಯ ಅಧಿಕಾರಿಗಳ ಅಧಿಕಾರಿಗಳ ದುರ್ಬಳಕೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ತೆಗೆದುಕೊಳ್ಳುವತ್ತ ಗಮನ ಹರಿಸಿ .
ಸಾರಿಗೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳೇ ಆದೇಶ ಪ್ರತಿಯನ್ನೂ ಕಳಿಸುತ್ತೇವೆ ಎಂದು ಹೇಳಿದವರು ಎಲ್ಲಿ ಅಡಗಿ ಕುಳಿತಿದ್ದೀರಾ ?ಆದೇಶ ಪ್ರತಿ ಕಳುಹಿಸುವ ಧೈರ್ಯ ಕಳೆದುಕೊಂಡಿದ್ದೀರಾ ?ಸರ್ಕಾರ ನಿಮಗೆ ಸಂಬಳ ನೀಡುತ್ತಿಲ್ಲ, ಜನ ಸಾಮಾನ್ಯರು ನಿಮಗೆ ಸಂಬಳ ನೀಡುತ್ತಿರುವುದು .ಜನಸಾಮಾನ್ಯರ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡುವುದಾದರೆ ಇಲಾಖೆಯಲ್ಲಿ ಇರಿ ಇಲ್ಲದಿದ್ದರೆ ರಾಜೀನಾಮೆ ನೀಡಿ ಮನೆಗೆ ನಡೆಯಿರಿ .ನೀವಿಲ್ಲದಿದ್ದರೆ ಮತ್ತೊಬ್ಬ ಆದರೆ ಸಾರ್ವಜನಿಕರ ಹಣದಿಂದ ನಿರ್ಮಾಣ ಮಾಡಿದ ಕಟ್ಟಡ ಹಾಳು ಮಾಡಲು ಯಾರೂ ನಿಮ್ಮ ಅಧಿಕಾರ ನೀಡಿಲ್ಲ.ಬಸ್ ನಿಲ್ದಾಣ ನಿಮ್ಮ ಸ್ವಂತ ಹಣದಿಂದ ಅಥವಾ ನಿಮ್ಮ ಮಾವನ ಮನೆಯಿಂದ ಬಳುವಳಿಯಾಗಿ ಬಂದ ಹಣದಿಂದ ನಿರ್ಮಾಣ ಮಾಡಿದ್ದಲ್ಲ ಸ್ವಾಮಿ!? .ಎಚ್ಚರವಿರಲಿ ಮೂಲ ಕಟ್ಟಡವನ್ನ ಹಾನಿ ಮಾಡುವ ಅಧಿಕಾರ ನಿಮಗಾಗಲೀ ,ಟೆಂಡರ್ ಪಡೆದ ವ್ಯಕ್ತಿಗಾಗಲಿ ಇರುವುದಿಲ್ಲ .ಮೂಲ ಕಟ್ಟಡಕ್ಕೆ ಹಾನಿ ಮಾಡಿದ ನಿಮ್ಮಗಳನ್ನು ನ್ಯಾಯಾಲಯದ ಮೆಟ್ಟಿಲನ್ನು ಹತ್ತಿಸಿದೆ ಬಿಡಲಾರೆವು ನಮ್ಮ ಮಾಧ್ಯಮ .ನಿಮ್ಮ ದುರಹಂಕಾರದ ವರ್ತನೆಯನ್ನು ಬದಲಾಯಿಸಿಕೊಂಡು ಜನಸ್ನೇಹಿಯಾಗಿ ಕೆಲಸ ಮಾಡುವತ್ತ ಗಮನ ಹರಿಸಿ .
ನಾಡಿನ ದೊರೆ ಬೊಮ್ಮಾಯಿ ಅವರೇ ನೋಡಿ ನಿಮ್ಮ ಆಡಳಿತ ಅವಧಿಯಲ್ಲಿ ಸರ್ಕಾರಿ ಅಧಿಕಾರಿಗಳ ವರ್ತನೆಯನ್ನು. ಯಾವ ರೀತಿಯಲ್ಲಿ ಸರ್ಕಾರಿ ಬಸ್ ನಿಲ್ದಾಣವನ್ನ ಟೆಂಡರ್ ದಾರನಿಗೆ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ದಾರಿ ಮಾಡಿಕೊಟ್ಟಿದ್ದಾರೆ ಎಂಬುದನ್ನ .ಬಸ್ ನಿಲ್ದಾಣದ ಮೂಲ ಕಟ್ಟಡ ಯಾವ ರೀತಿಯಲ್ಲಿ ವಿರೂಪಗೊಂಡಿದೆ. ಕೂಡಲೇ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳುವತ್ತ ಮುಂದಾಗಿ ಇಲ್ಲದಿದ್ದರೆ ಮತದಾರರು ನಿಮಗೆ ತಕ್ಕ ಪಾಠ ಕಲಿಸುತ್ತಾರೆ ದಿನಗಳು ದೂರವಿಲ್ಲ.ಎಚ್ಚರವಿರಲಿ ..!
ಪ್ರಕಾಶ್ ಮಂದಾರ
ಸಂಪಾದಕರು.
8880499904
ಪ್ರಕಾಶ್ ಮಂದಾರ
ಸಂಪಾದಕರು
8880499904
0 Comments