ಕುಮಾರಪಟ್ಟಣಂ ಪಿಎಸ್ ಐ ಸಂಜೀವಕುಮಾರ ವರ್ಗಾವಣೆ ಬೆನ್ನಲ್ಲೇ ಶುರುವಾಯ್ತು ಮಟ್ಕಾ.!?



ರಾಣೇಬೆನ್ನೂರ: "ಅಪರಾಧಮುಕ್ತ ಕುಮಾರಪಟ್ಟಣಂ ಮಾಡುವತ್ತ" ದಿಟ್ಟವಾದ ಹೆಜ್ಜೆ ಇಟ್ಟಿದ್ದ  ಹಿಂದಿನ ಪಿಎಸ್ಐ ಸಂಜೀವ ಕುಮಾರ್ ಅವರನ್ನು ರಾಜಕೀಯ ಹಸ್ತಕ್ಷೇಪದಿಂದ ಕೇವಲ ನಾಲ್ಕೇ ತಿಂಗಳಲ್ಲಿ ವರ್ಗಾವಣೆ ಮಾಡಲಾಯಿತು.

ಖಡಕ್ ಪಿಎಸ್ಸೈ ಸಂಜೀವ್ ಕುಮಾರ್ ಅವರ ದಿಟ್ಟ ನಿರ್ಧಾರದಿಂದ ಕುಮಾರಪಟ್ಟಣಂ ಪೊಲೀಸ್ ಠಾಣಾ ಸರಹದ್ದಿನಲ್ಲಿ ಅದೆಷ್ಟೋ ಅಕ್ರಮ ಚಟುವಟಿಕೆಗಳು ನಿಯಂತ್ರಣಕ್ಕೆ ಬಂದಿದ್ದವು.ಅಲ್ಲದೆ ಕುಮಾರಪಟ್ಟಣಂ ಸರಹದ್ದಿನಲ್ಲಿರುವ ಕ್ಲಬ್ ಗಳಲ್ಲಿ  ಅಕ್ರಮವಾಗಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದ ಕಾರಣ ಸಂಜೀವಕುಮಾರವರು ಕ್ಲಬ್ಗಳನ್ನು ಬಾಗಿಲನ್ನು ಹಾಕಿಸುವಲ್ಲಿ ಯಶಸ್ವಿಯಾದರು.
ಪಿಎಸ್ಸೈ ಸಂಜೀವಕುಮಾರ ಅವರ ಕೆಲ ನಿರ್ಧಾರಗಳು ಅಕ್ರಮ ಚಟುವಟಿಕೆ ನಡೆಸುವಂತಹ ದಂಧೆಕೋರರಿಗೆ ನುಂಗಲಾರದ ತುತ್ತಾಗಿತ್ತು .ಹೇಗಾದರೂ ಮಾಡಿ ಸಂಜೀವಕುಮಾರ ಅವರನ್ನು ಕುಮಾರ ಪಟ್ಟಣಂ ಪೊಲೀಸ್ ಠಾಣೆಯಿಂದ ವರ್ಗಾವಣೆ ಮಾಡಿಸಬೇಕೆಂದು ಕುತಂತ್ರ ನಡೆಸುತ್ತಿದ್ದರು. ಅಕ್ರಮ ದಂಧೆಕೋರರ ಕುತಂತ್ರಗಳು ಯಶಶ್ವಿಯಾದವು,ದಕ್ಷ, ಪ್ರಾಮಾಣಿಕ ಅಧಿಕಾರಿಯ ವರ್ಗಾವಣೆಯಾಯಿತು.

ಸಂಜೀವ್ ಕುಮಾರ್ ಅವರ ವರ್ಗಾವಣೆ ಆಗುತ್ತಿದ್ದಂತೆ ಕುಮಾರಪಟ್ಟಣಂ ಪೊಲೀಸ್ ಠಾಣಾ ಸರಹದ್ದಿನಲ್ಲಿ ಮಟ್ಕಾ ದಂಧೆ ಸದ್ದಿಲ್ಲದೆ ಪ್ರಾರಂಭವಾಗಿದೆ.ಇದೀಗ ಮಟ್ಕಾ ಮೊಬೈಲ್ ಮೂಲಕ ರಾಜಾರೋಷವಾಗಿ ನಡೆಯುತ್ತಿದೆ ಈ ಹಿಂದೆ ಮಟ್ಕಾ ದಂಧೆಯಲ್ಲಿ ತೊಡಗಿಕೊಂಡವರೇ ಈಗ ಮೊಬೆಲ್ ಮಟ್ಕಾ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ .ಇದು ಕುಮಾರಪಟ್ಟಣಂ ಪೊಲೀಸ್ ಠಾಣಾ ಸರಹದ್ದಿನ ಕೆಲವು ಪೊಲೀಸ್ ಸಿಬ್ಬಂದಿಗಳಿಗೆ ಮಾಹಿತಿ ಇದೆ.

ಅವರ ಕುಮ್ಮಕ್ಕಿನಿಂದಲೇ ಈ ಮೊಬೆಲ್ ಮೂಲಕ ಮಟ್ಕಾ ದಂಧೆ ಪ್ರಾರಂಭವಾಗಿದೆ.ಠಾಣಾ ಸರಹದ್ದಿನ ಪೊಲೀಸ್ ಸಿಬ್ಬಂದಿಯೊಬ್ಬರು ಮಟ್ಕಾ ದಂಧೆಯವರ ಜತೆ ಉತ್ತಮವಾದ ಬಾಂಧವ್ಯವನ್ನು ಹೊಂದಿದ್ದಾರೆ ಎಂದು ಹೆಸರೇಳಲಿಚ್ಛಿಸದ ಸಾರ್ವಜನಿಕರೊಬ್ಬರು ನಮ್ಮ ಮಾಧ್ಯಮದೊಂದಿಗೆ ಹಂಚಿಕೊಂಡರು.
ನಿಧಾನವಾಗಿ ಮಟ್ಕಾ, ಕ್ಲಬ್ ,ಇಸ್ಪೇಟು, ಮರಳು ,ಮಣ್ಣು ಗಣಿಗಾರಿಕೆಗಳು ಮುಂದಿನ ದಿನಗಳಲ್ಲಿ ಹಂತ- ಹಂತವಾಗಿ ಪ್ರಾರಂಭವಾಗುತ್ತದೆ. ಬೇಕಾದರೆ ಕಾದು ನೋಡಿರಿ ಎಂದು ಸಾರ್ವಜನಿಕರು ನೇರವಾಗಿ ನಮ್ಮೊಂದಿಗೆ ಮಾತನಾಡಿದರು.

ಈಗಾಗಲೇ ತುಂಗಭದ್ರಾ ನದಿಯಿಂದ ಅಕ್ರಮವಾಗಿ ತೆಗೆದ ಮರಳು ಸಂಗ್ರಹವಾಗಿದೆ. ಸಂಗ್ರಹವಾಗಿರುವ ಮರಳನ್ನು ಸಾಗಾಣಿಕೆ ಮಾಡಲೇಬೇಕಾಗಿದೆ,ಮುಂದಿನ ದಿನದಲ್ಲಿ ಕುಮಾರಪಟ್ಟಣಂ ಪೊಲೀಸ್ ಠಾಣಾ ಸರಹದ್ದಿನಲ್ಲಿ ಅಕ್ರಮ ಚಟುವಟಿಕೆಗಳು ಮತ್ತೆ ಶುರುವಾಗುವ ದಿನಗಳು ದೂರವಿಲ್ಲ. ಆದ್ದರಿಂದಲೇ ಖಡಕ್ ಪಿಎಸ್ಸೈ ಸಂಜೀವ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.ಅಂತಹ ದಕ್ಷ, ಪ್ರಾಮಾಣಿಕ ಅಧಿಕಾರಿಗಳು ಠಾಣೆಯಲ್ಲಿದ್ದರೆ ಅಕ್ರಮ ಚಟುವಟಿಕೆಯಲ್ಲಿ ತೊಡಗಿಕೊಂಡವರಿಗೆ  ನುಂಗಲಾರದ ತುತ್ತಾಗುತ್ತದೆ.ಆದ್ದರಿಂದಲೇ ಅವರನ್ನು ವರ್ಗಾವಣೆ ಮಾಡಿದ್ದಾರೆ .ಅವರ ವರ್ಗಾವಣೆಯ ಬೆನ್ನಲ್ಲೇ ಮಟ್ಕಾ ಪ್ರಾರಂಭವಾಗಿದೆ.

ಅಕ್ರಮ ಚಟುವಟಿಕೆಗಳು ನಿಯಂತ್ರಿಸಬೇಕು,ಜನಸಾಮಾನ್ಯರ ಬದುಕು ಹಸನಾಗಿಸಬೇಕು ಎಂಬ ಇಚ್ಛೆ ರಾಜಕಾರಣಿಗಳಿಗೆ ಇಲ್ಲದಂತಾಗಿದೆ.ಆದ್ದರಿಂದಲೇ ಭ್ರಷ್ಟ ಸಿಬ್ಬಂದಿಗಳನ್ನು ಠಾಣೆಯಲ್ಲಿಟ್ಟುಕೊಂಡು, ಪ್ರಾಮಾಣಿಕ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಮಾರಪಟ್ಟಣಂ ಪೋಲಿಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಪೋಲಿಸ್ ಸಿಬ್ಬಂದಿಗಳನ್ನು ಕೂಡಲೇ ವರ್ಗಾವಣೆ ಮಾಡುವ ಮೂಲಕ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಯ ಮೇಲಧಿಕಾರಿಗಳು ಮುಂದಾಗಬೇಕಾಗಿದೆ.

ಪ್ರಕಾಶ್ ಮಂದಾರ 
ಸಂಪಾದಕರು 

ಇದೀಗ ಕುಮಾರಪಟ್ಟಣಂ ಪೋಲಿಸ್ ಠಾಣೆಗೆ ನೂತನ ಪಿಎಸ್ ಐ ಕಳೆದ 4ದಿನದ ಠಾಣಾಧಿಕಾರಿಯಾಗಿ ಅಧಿಕಾರವನ್ನ ಸ್ವೀಕರಿಸಿದ್ದು ಮುಂದಿನ ದಿನದಲ್ಲಿ ಕುಮಾರಪಟ್ಟಣಂ ಸರಹದ್ದಿನ ಸುತ್ತ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನ ನಿಯಂತ್ರಿಸುವ  ಗಮನಹರಿಸುತ್ತಾರಾ ಕಾದು ನೋಡಬೇಕಾಗಿದೆ .

Post a Comment

0 Comments