ಹರಿಹರ:ಮನೆಯೇ ಮೊದಲ ಪಾಠಶಾಲೆ ಜನನಿಯೇ ಮೊದಲ ಗುರು ಎನ್ನುವಂತೆ ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ತಾಯಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಮಣಕೂರು ಸಿದ್ಧರೂಢ ಗುರುದೇವಾಶ್ರಮದ ಶಿವಶರಣಿ ಚನ್ನಮ್ಮ ತಾಯಿಯವರು ಮಾತೆಯರ ಜವಾಬ್ದಾರಿಯ ಕುರಿತು ಈ ರೀತಿಯಾಗಿ ಬಣ್ಣಿಸಿದರು.
ಹರಿಹರ ತಾಲ್ಲೂಕು ರಾಜನಹಳ್ಳಿ ಗ್ರಾಮದಲ್ಲಿರುವ ಶ್ರೀ ವಾಲ್ಮೀಕಿ ಗುರುಪೀಠದ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಹರಿಹರ ತಾಲ್ಲೂಕು ಮತ್ತು ಶ್ರೀ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ರಾಜನಳ್ಳಿ ಇವರ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ನೆರೆದ ಭಕ್ತರನ್ನುದ್ದೇಶಿಸಿ ಪ್ರವಚನ ನೀಡಿದ ಅವರು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸದಸ್ಯರಾದ ನೀವು ಸಂಸ್ಥೆಯಿಂದ ದೊರೆಯುವ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ನಿಮ್ಮ ಮಕ್ಕಳನ್ನು ಆಧ್ಯಾತ್ಮಿಕ ತಳಹದಿಯಲ್ಲಿ ಸುಸಂಸ್ಕೃತರನ್ನಾಗಿ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.
ಆಧ್ಯಾತ್ಮಿಕ ನೆಲೆಗಟ್ಟಿನ ಮೇಲೆ ನಿಂತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪರಮಪೂಜ್ಯ ಧರ್ಮದರ್ಶಿ ಡಾ॥ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಂಸ್ಥೆಯ ಜನರನ್ನು ಸ್ವಾವಲಂಬಿಗಳನ್ನಾಗಿ ಬದುಕಲು ಅನೇಕ ಯೋಜನೆಗಳನ್ನು ರೂಪಿಸುವ ಮೂಲಕ ಅವರನ್ನ ಆರ್ಥಿಕ ಸದೃಢರನ್ನಾಗಿ ಮಾಡುವಲ್ಲಿ ಸಂಸ್ಥೆಯು ಸಾಕಷ್ಟು ಶ್ರಮಿಸುತ್ತಿದೆ.ಎಲ್ಲರೂ ಸಂಖ್ಯೆಯ ಯೋಜನೆಗಳನ್ನು ಬಳಸಿಕೊಂಡು ಸ್ವಾಸ್ಥ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮುಂದಾಗಿ ಎಂದು ಭಕ್ತರಿಗೆ ಕರೆ ನೀಡಿದರು.
ಧರ್ಮಸ್ಥಳ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಗೀತಾ .ಬಿ ಅವರು ಮಾತನಾಡಿ ಪೂಜ್ಯ ಡಾ॥ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾ॥ವಿ.ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಯೋಜನೆಯು ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ.ಪೂಜ್ಯರ ಮನಸ್ಸಿನಿಂದ ಹೊರಬರುವ ಕಾರ್ಯಕ್ರಮಗಳಿಂದ ಲಕ್ಷಾಂತರ ಜನರ ಬದುಕು ಹಸನಾಗುತ್ತದೆ.ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಗಳನ್ನು ಮೈಗೂಡಿಸಿಕೊಂಡು ಜನರು ಸಂಘಟಿತರಾಗಿ ಬದುಕಲಿ ಎಂಬ ಸದುದ್ದೇಶದಿಂದ ಸಾಮೂಹಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಯೋಜನೆ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ.ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲ ಕೀಳಿರಿಮೆಗಳನ್ನ ಬಿಟ್ಟು ಎಲ್ಲರೂ ಒಂದು ಎಂಬ ಭಾವನೆಯಲ್ಲಿ ಪಾಲ್ಗೊಂಡಾಗ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಾರ್ಥಕವಾಗುತ್ತದೆ.ಉತ್ತಮ ಸಂಸ್ಕೃತಿ -ಸಂಸ್ಕಾರಗಳನ್ನು ಕಲಿಯಲು ಹೆಚ್ಚು ಹೆಚ್ಚಾಗಿ ಇಂತಹ ಸಾಮೂಹಿಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಸಾಮೂಹಿಕ ಸತ್ಯನಾರಾಯಣಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಭಕ್ತರಿಗೂ ತಿಳಿ ಹೇಳಿದರು.
ಹರಿಹರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಹೆಚ್ ಎಸ್ ಶಿವಶಂಕರ್ ಅವರು ಮಾತನಾಡಿ ಧಾರ್ಮಿಕ ನೆಲೆಗಟ್ಟಿನಲ್ಲಿ ಪರಮ ಪೂಜ್ಯ ವೀರೇಂದ್ರ ಹೆಗ್ಡೆಯವರ ಮಾರ್ಗದರ್ಶನದಂತೆ ಧರ್ಮಸ್ಥಳ ಯೋಜನೆಯು ಸರ್ವರಿಗೂ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ.ಆರ್ಥಿಕ ಶೆಟ್ಟಿಯೊಂದಿಗೆ ಸಾಮಾಜಿಕ ಅರಿವು ಜನರಲ್ಲಿ ಉಂಟಾಗಿದೆ.ಮಹಿಳೆಯರ ಶಕ್ತಿ ಸಾಮರ್ಥ್ಯ ಏನು ಎಂಬುದನ್ನು ಸಂಸ್ಥೆ ತೋರಿಸಿಕೊಟ್ಟಿದೆ.ಮನೆತನವನ್ನು ಮುನ್ನಡೆಸಿಕೊಂಡು ಹೋಗುವ ಶಕ್ತಿ ಮಹಿಳೆಯರಿಗೆ ಇದೆ.ಮಹಿಳೆಯರು ಇಂತಹ ಧಾರ್ಮಿಕ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಅವರಲ್ಲಿರುವ ಜಾಗ್ರತಾ ಶಕ್ತಿಯನ್ನ ಬಡಿದೆಬ್ಬಿಸಲು ಸಹಕಾರಿಯಾಗುತ್ತಿವೆ.
ಪೂಜ್ಯ ಹೆಗ್ಡೆಯವರು ತಮ್ಮ ಗ್ರಾಮೀಣಾಭಿವೃದ್ದಿ ಕಾರ್ಯಕ್ರಮಗಳ ಮೂಲಕ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ರಾಜ್ಯಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಎಲ್ಲರಿಗೂ ಹೆಮ್ಮೆ ತರುವಂತಹ ವಿಷಯವಾಗಿದೆ ಎಂದರು ಇದೇ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಪರಮ ಪೂಜ್ಯ ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಮಾಜಿ ಶಾಸಕರಾದ ಬಿ.ಪಿ ಹರೀಶ್ ಅವರು ಮಾತನಾಡಿ ಸರ್ಕಾರ ಮಾಡುವ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ ಗ್ರಾಮಾಭಿವದ್ಧಿ ಯೋಜನೆಯನ್ನು ಪೂಜ್ಯರು ನಮ್ಮ ಭಾಗಕ್ಕೂ ವಿಸ್ತರಣೆ ಮಾಡಿ ಜನರನ್ನು ಆರ್ಥಿಕ ಸದೃಢ ಗೊಳಿಸುವ ಮೂಲಕ ಕ್ಷೇತ್ರ ಅಭಿವೃದ್ದಿ ಗೊಳಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಶಿವಕುಮಾರ್ ರಾಜನಹಳ್ಳಿಯವರು ಮಾತನಾಡಿ ಯಾವುದೇ ಜಾತಿ, ಧರ್ಮ ,ಮತ -ಭೇದವಿಲ್ಲದೆ ಸರ್ವರಿಗೂ ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ನೀಡುತ್ತಿರುವ ಪೂಜ್ಯ ವೀರೇಂದ್ರ ಹೆಗ್ಡೆಯವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷೆ ಚೈತ್ರಾ ಲಂಕೇಶ್ ಅವರು ಮಾತನಾಡಿ ಧರ್ಮಸ್ಥಳ ಯೋಜನೆಯಿಂದ ಅತ್ಯುತ್ತಮ ಕಾರ್ಯಕ್ರಮಗಳಾಗುತ್ತಿವೆ.ನಮ್ಮ ಗ್ರಾಮದಲ್ಲಿ ಇಂದು ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಏರ್ಪಡಿಸಿದ್ದು ನಮ್ಮೆಲ್ಲರ ಭಾಗ್ಯ ಎಂದರು.
ಕಾರ್ಯಕ್ರಮದಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ವಿ. ವಿಜಯಕುಮಾರ್ ನಾಗನಾಳ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಹೊನ್ನಾಳಿ ಬಾಬಣ್ಣ,ವಾಲ್ಮೀಕಿ ಗುರುಪೀಠದ ಆಡಳಿತಾಧಿಕಾರಿ ಡಿ ಓಬಳಪ್ಪ ,ವ್ಯವಸ್ಥಾಪಕರಾದ ಬಿ ಭೀಮಣ್ಣ, ಗ್ರಾಮದ ಮುಖಂಡರಾದ ಗೋವಿಂದಪ್ಪ ನಶ್ವಿ, ಕರೀಮ್ ಸಾಬ್,ತಿಪ್ಪಣ್ಣ ಹಾಲಿನವರ,ಶರತ್ ಕುಮಾರ್, ಗೋದಪ್ಪನವರ,ಜಿ.ಎಚ್ ಸಿದ್ಧಾರೂಢ, ನಾಗರಾಜ್, ಗೂಢಾಚಾರಿ, ವೀರಬಸಯ್ಯ, ಪೂಜಾರ್ ಹನುಮಂತಪ್ಪ, ರೇವಣಸಿದ್ದಪ್ಪ ನಶ್ವಿ,ಸುಭಾಷ್ ಚಂದ್ರಬೋಸ್ ,ಮಾರುತಿ, ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರುಗಳು,ಒಕ್ಕೂಟದ ಅಧ್ಯಕ್ಷರಾದ ಸ್ವಪ್ನಾ, ಮಾಲತೇಶ್, ಮೈಲಮ್ಮನವರ, ಮುಖ್ಯ ಶಿಕ್ಷಕರಾದ ಕೆ ಎನ್ ಚಕ್ರಸಾಲಿ.ವೇದಿಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿ ಪುಷ್ಪಾ ಅವರು ಪ್ರಾರ್ಥನಾ ಗೀತೆಯನ್ನು ಹಾಡಿದರೆ ಸಂಸ್ಥೆಯ ಯೋಜನಾಧಿಕಾರಿ ಗಣಪತಿ ಮಾಳಂಜಿ ಪ್ರಾಸ್ತವಿಕವಾಗಿ ಮಾತನಾಡಿ ಎಲ್ಲ ಗಣ್ಯರನ್ನು ಸ್ವಾಗತಿಸಿದರು.ಕಾರ್ಯಕ್ರಮದ ನಿರೂಪಣೆಯನ್ನು ಸಂಸ್ಥೆಯ ಮೇಲ್ವಿಚ್ಚಾರಕರಾದ ಸಂತೋಷ್ ಅವರು ನೆರವೇರಿಸಿದರೆ ವಂದನ ಕಾರ್ಯಕ್ರಮವನ್ನು ಸಂಸ್ಥೆಯ ಮತ್ತೋರ್ವ ಮೇಲ್ವಿಚಾರಕ ಪ್ರಸನ್ನ ನಡೆಸಿಕೊಟ್ಟರು.
ಮೇಲ್ವಿಚಾರಕರಾದ ರಾಧಾಕೃಷ್ಣ ಭಟ್ ವಲಯದ ಸೇವಾಪ್ರತಿನಿಧಿಗಳು ಒಕ್ಕೂಟದ ಪದಾಧಿಕಾರಿಗಳು ಗ್ರಾಮದ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಕಾರ್ಯಕ್ರಮ ಯಶಸ್ವಿಗೆ ಕಾರಣಿಭೂತರಾದ ರೂ.
ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಶ್ರೀಧರ್ ಭಟ್ ಮತ್ತು ಸಂಗಡಿಗರ ನೇತೃತ್ವದಲ್ಲಿ ಬೆಳಿಗ್ಗೆ 7.30 ಕ್ಕೆ ಆರಂಭವಾಯಿತು.ಒಟ್ಟು 169 ಜನ ವ್ರತಧಾರಿಗಳು ಸಾಮೂಹಿಕ ಪೂಜೆಯಲ್ಲಿ ಕುಟುಂಬದವರೊಂದಿಗೆ ಕುಳಿತು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.
ಕೋವಿಡ್ ಮಹಾ ಮಾರಿಯ ಕಾರಣ ಸಂಸ್ಥೆಯ ಕಾರ್ಯಕ್ರಮಗಳು ಸ್ಥಗಿತವಾಗಿದ್ದವು.ಈಗ ಎಲ್ಲ ಸಂಕಷ್ಟಗಳು ದೂರವಾದ ಕಾರಣ ಮತ್ತೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಕಾರ್ಯಕ್ರಮವನ್ನ ರಾಜನಹಳ್ಳಿ ಗ್ರಾಮದ ವಾಲ್ಮೀಕಿ ಸಮುದಾಯದ ಭವನದಲ್ಲಿ ನೆರವೇರಿಸುವ ಮೂರು ವರ್ಷದ ನಂತರ ಪ್ರಾರಂಭವಾದ ಮೊದಲ ಕಾರ್ಯಕ್ರಮ ಇದಾಗಿದೆ.
0 Comments