ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಜನರನ್ನ ಸಂಪರ್ಕ ಕಲ್ಪಿಸುವ ತುಂಗಭದ್ರಾ ನದಿಗೆ ಅಡ್ಡವಾಗಿ ನಿರ್ಮಿಸಿರುವ ಹರಿಹರ ನಗರದ ರಾಘವೇಂದ್ರಸ್ವಾಮಿ ಮಠದ ಸಮೀಪದಲ್ಲಿರುವ ಶತಮಾನದ ಅಂಚಿನಲ್ಲಿರುವ ಹಳೆ ಸೇತುವೆಯ ಅಕ್ಕಪಕ್ಕದಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ಸ್ವಚ್ಚಗೊಳಿಸುವ ಮೂಲಕ ಸೇತುವೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವ ಜವಾಬ್ದಾರಿಯನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹೊರಬೇಕಾಗಿದೆ .
ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಳೇ ಸೇತುವೆ ಅಕ್ಕಪಕ್ಕದಲ್ಲಿ ಬೆಳೆದಿರುವ ಗಿಡ ಗೆಂಟೆಗಳು ಮರವಾಗಿ ಬೆಳೆಯುತ್ತಿವೆ .ಮುಂದೆ ಈ ಮರಗಳು ಸೇತುವೆಯ ಬಿರುಕಿಗೆ ಕಾರಣವಾದರೂ ಆಶ್ಚರ್ಯವಿಲ್ಲ .ಹಳೆ ಸೇತುವೆಯು ಭಾರೀ ಗಾತ್ರದ ವಾಹನಗಳ ಸಂಚಾರಕ್ಕೆ ಯೋಗ್ಯವಿಲ್ಲದಿದ್ದರೂ ವಾಯು ವಿಹಾರಿಗಳಿಗೆ ಹಾಗೂ ಪಾದಚಾರಿಗಳಿಗೆ ಯೋಗ್ಯವಾಗಿದೆ. .ಪ್ರತಿದಿನ ಕುಮಾರಪಟ್ಟಣಂ ಹಾಗೂ ಹರಿಹರ ನಗರದಿಂದ ನೂರಾರು ಸಂಖ್ಯೆಯ ನಾಗರಿಕರು ಪ್ರತಿ ಮುಂಜಾನೆ ಹಾಗೂ ಸಂಜೆಯ ಸಮಯದಲ್ಲಿ ಯೋಗ ಮಾಡಲು ವಾಯು ವಿಹಾರ ನಡೆಸಲು ಈ ಸೇತುವೆಯನ್ನೇ ಅವಲಂಬಿಸಿದ್ದಾರೆ .ಅದೆಷ್ಟು ವೃದ್ಧರು, ಅಂಗವಿಕಲರು ಈ ಸೇತುವೆಯಲ್ಲಿ ವಿಶ್ರಾಂತಿಯನ್ನ ಕಳೆಯುವ ಮೂಲಕ ತಮ್ಮ ಮನಶಾಂತಿಯನ್ನು ಪಡೆಯುತ್ತಿದ್ದಾರೆ.
ನಗರದ ನಾಗರಿಕರ ಅನುಕೂಲಕ್ಕಾಗಿ ಹಾಗೂ ಸೇತುವೆಯ ಸಂರಕ್ಷಣೆಯ ಹಿತದೃಷ್ಟಿಯಿಂದ ಸೇತುವೆ ಅಕ್ಕಪಕ್ಕದಲ್ಲಿ ಬೆಳೆದಿರುವ ಗಿಡ-ಗಂಟೆಗಳನ್ನು ಸ್ವಚ್ಚಗೊಳಿಸುವ ಮೂಲಕ ನಗರದ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಸೇತುವೆಯನ್ನು ಸಂರಕ್ಷಿಸಿಕೊಂಡು ಹೋಗುವ ನಿಟ್ಟಿನಲ್ಲಾದರೂ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸೇತುವೆ ಅಕ್ಕಪಕ್ಕದಲ್ಲಿ ಬೆಳೆದಿರುವ ಗಿಡ-ಗಂಟೆಗಳನ್ನು ಸ್ವಚ್ಛಗೊಳಿಸಲಿ.
ಸೇತುವೆ ಅಕ್ಕಪಕ್ಕದಲ್ಲಿ ಬೆಳೆದಿರುವ ಗಿಡ ಗಂಟೆಗಳನ್ನು ಸ್ವಚ್ಛಗೊಳಿಸಲು ನಿರ್ವಹಣೆಗೆಂದು ಪ್ರತಿವರ್ಷ ಸಂಬಂಧಿಸಿದ ಇಲಾಖೆಗೆ ಲಕ್ಷಾಂತರ₹ಅನುದಾನ ಬರುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಸೇತುವೆ ಅಕ್ಕ-ಪಕ್ಕದಲ್ಲಿ ಬೆಳೆದಿರುವ ಗಿಡ-ಗಂಟೆಗಳನ್ನು ಸ್ವಚ್ಚಗೊಳಿಸುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತ ಬಂದಿದ್ದಾರೆ ಇದರ ಪರಿಣಾಮದಿಂದ ಚಿಕ್ಕ ಚಿಕ್ಕ ಗಿಡ-ಗೆಂಟೆಗಳು ಇಂದು ಮರಗಳಾಗಿ ಬೆಳೆಯುತ್ತಿದ್ದಾವೆ .ಇದರ ಪರಿಣಾಮ ಇನ್ನೂ ನೂರಾರು ವರ್ಷ ಕಾಲ ಬಳಕೆಗೆ ಬರುವಂತಹ ಸೇತುವೆಯನ್ನು ನಮ್ಮ ಕಣ್ಣ ಮುಂದೆ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾದರೂ ಆಶ್ಚರ್ಯವಿಲ್ಲ ಎಂದು ವಾಯು ವಿಹಾರಿಗಳು,ನಗರದ ನಾಗರಿಕರು ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ತಮ್ಮ ಅಸಮಾಧಾನವನ್ನು ಹೊರಹಾಕಿದರು.
ಈ ಹಳೆ ಸೇತುವೆಯನ್ನು ಒಂದು ಬ್ಲೂಪ್ರಿಂಟ್ ರೆಡಿ ಮಾಡಿದರೆ ಒಂದು ಸುಂದರವಾದ ಉದ್ಯಾನವನ ಮಾಡಲು ಸಾಧ್ಯವಿದೆ.ಕುಮಾರಪಟ್ಟಣಂ ಕಡೆಯಿಂದ ಬರುವ ಆಂಜನೇಯ ಸ್ವಾಮಿ ದೇವಸ್ಥಾನದ ಎದುರುಗಡೆ ಕಮಾನು ಆಕೃತಿಯಲ್ಲಿ ಒಳ ಪ್ರವೇಶ ಅದೇ ರೀತಿ ರಾಘವೇಂದ್ರ ಸ್ವಾಮಿ ಮಠದ ಕಡೆಯಿಂದ ಕಮಾನು ಆಕೃತಿಯಲ್ಲಿ ಒಳಪ್ರವೇಶವನ್ನು ಮಾಡಿ .ಸೇತುವೆಯ ಎರಡೂ ಬದಿಯ ಒಳಗಡೆ ಅಲ್ಲಲ್ಲಿ ಹೂವಿನ ಕುಂಡ ಹಾಗೂ ಅಲಂಕೃತ ಸಸ್ಯಗಳನ್ನು ಬೆಳೆಸಿ ಹಾಗೂ ವಾಯು ವಿಹಾರಿಗಳು ವಿಶ್ರಾಂತಿ ಪಡೆಯಲು ಸೌಂದರ್ಯವಾದ ಬೆಂಚುಗಳನ್ನು ಅಳವಡಿಸಿದರೆ,ಉತ್ತಮ ಲೈಟಿಂಗ್ ವ್ಯವಸ್ಥೆಯನ್ನು ಮಾಡಿದರೆ ಹಾಗೂ ಮಧ್ಯದಲ್ಲಿ ಪುಟಪಾತ್ ರೀತಿಯಲ್ಲಿ ರಸ್ತೆ ನಿರ್ಮಿಸಿದರೆ ,ಒಂದು ಸುಂದರ ಉದ್ಯಾನವನ ಆಗುವುದರ ಜತೆಗೆ ನಗರದ ಸೌಂದರ್ಯವೂ ಹೆಚ್ಚುತ್ತದೆ.ಇದರಿಂದ ಪ್ರವಾಸಿಗರನ್ನು ಆಕರ್ಷಿಸಬಹುದು,ತುಂಗಭದ್ರ ನದಿಯ ಸೌಂದರ್ಯವನ್ನು ಸವಿಯಲು ಅನುಕೂಲಕರವಾದ ವಾತಾವರಣವನ್ನು ನಿರ್ಮಾಣ ಮಾಡಿಕೊಟ್ಟಂತಾಗುತ್ತದೆ.ಒಮ್ಮೆ ಯೋಚನೆ ಮಾಡಿ ಹಳೆ ಸೇತುವೆಯನ್ನು ಒಂದು ಸುಂದರವಾದ ಉದ್ಯಾನವನವನ್ನ ಮಾಡುವ ಮೂಲಕ ಹಳೆ ಸೇತುವೆಯನ್ನು ಸಂರಕ್ಷಣೆ ಮಾಡಿದಂತಾಗುತ್ತದೆ ಅದೇ ರೀತಿ ಹರಿಹರ ನಗರಕ್ಕೊಂದು ಸುಂದರ ಉದ್ಯಾನವನ ನಿರ್ಮಾಣ ಮಾಡಿದಂತಾಗುತ್ತದೆ.ಮುಂದೊಂದು ದಿನ ತುಂಗಾರತಿಯ ಸೌಂದರ್ಯವನ್ನು ವೀಕ್ಷಿಸಲು ಸಾಧ್ಯವಿದೆ.
ಸದ್ಯ ಸೇತುವೆ ಅಕ್ಕಪಕ್ಕದಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ಸ್ವಚ್ಚಗೊಳಿಸುವ ಮೂಲಕ ವಾಯು ವಿಹಾರಿಗಳಿಗೆ,ನಗರದ ನಾಗರಿಕರಿಗೆ ಮತ್ತು ಸೇತುವೆ ಉಳಿಸಿಕೊಳ್ಳಲುವ ನಿಟ್ಟಿನಲ್ಲಿ ಗಮನಹರಿಸಿ ......
ಪ್ರಕಾಶ್ ಮಂದಾರ
ಸಂಪಾದಕರು
0 Comments