ಹರಿಹರ:ಹರಿಹರ ನಗರಸಭೆಗೆ ನೂತನ ಪೌರಾಯುಕ್ತರು ಬಂದ ನಂತರ ನಗರದ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಆರೋಪ ನಗರದ ನಾಗರಿಕರಿಂದ ಕೇಳಿ ಬರುತ್ತಿದೆ.
ಪ್ರತಿ ವಾರಕ್ಕೊಮ್ಮೆ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಕಾರ್ಯಕ್ರಮದ ಹಿನ್ನಲೆಯಲ್ಲಿ ಇಂದು ನೂತನ ಜಿಲ್ಲಾಧಿಕಾರಿಗಳಾದ ಶಿವಾನಂದ ಕಾಪಶಿ ಅವರು ಆಗಮಿಸಿದ್ದರು.
ಜಿಲ್ಲಾಧಿಕಾರಿಗಳಿಗೆ ನಗರಸಭೆಯ ಚುನಾಯಿತ ಜನಪ್ರತಿನಿಧಿಗಳಿಂದ ಲಿಖಿತ ರೂಪದ ಅರ್ಜಿಗಳ ಮೂಲಕ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪೌರಾಯುಕ್ತರ ವಿರುದ್ಧ ದೂರುಗಳ ಸುರಿಮಳೆಗೈದರು.
ನಗರದ ನಾಗರಿಕರಿಗೆ ಸಿಗಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳಾದ ಬೀದಿ ದೀಪ,24*7 ಕುಡಿಯುವ ನೀರು,ರಸ್ತೆ ಹೀಗೆ ಅನೇಕ ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ನೀಡುವ ಮೂಲಕ ಜಿಲ್ಲಾಧಿಕಾರಿಗಳ ಗಮನವನ್ನು ಸೆಳೆದರು.ಇದರ ಜೊತೆಗೆ ನಗರದಾದ್ಯಂತ ನಡೆಯುತ್ತಿರುವ ಕೆಲವು ಕಾಮಗಾರಿಗಳು ಕಳಪೆ ಮಟ್ಟದಿಂದ ಕೂಡಿದ್ದು ಲಕ್ಷಾಂತರ₹ಭ್ರಷ್ಟಾಚಾರ ನಡೆದಿದೆ ಎಂಬ ಆರೋಪವನ್ನು ಮಾಡಿದರು.ಬೀದಿಬದಿ ವ್ಯಾಪಾರಸ್ಥರ ಗೂಡಂಗಡಿಗಳಿಂದ ನಗರದ ಸ್ವಚ್ಛತೆಗೆ ಮಾರಕವಾಗುತ್ತಿದೆ ಎಂಬ ಅಂಶವನ್ನು ಮುಂದಿಟ್ಟರು.
ಒಟ್ಟಾರೆಯಾಗಿ ನಗರದ ಅಭಿವೃದ್ಧಿಯಲ್ಲಿ ನೂತನ ಪೌರಾಯುಕ್ತರಾದ ಬಸವರಾಜ ಐಗೂರು ಇವರ ನಿರ್ಲಕ್ಷ್ಯ ಮತ್ತು ವಿಳಂಬ ತಂತ್ರದಿಂದಾಗಿ ನಗರದ ನಾಗರಿಕರಿಗೆ ಅಗತ್ಯ ಸೌಲಭ್ಯವನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಆಯುಕ್ತರ ವಿರುದ್ಧ ನಗರಸಭೆಯ ಕೆಲವು ಚುನಾಯಿತ ಪ್ರತಿನಿಧಿಗಳು ತಮ್ಮ ಆಕ್ರೋಶವನ್ನು ಲಿಖಿತ ರೂಪದ ಅರ್ಜಿಯ ಮೂಲಕ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಹೊರಹಾಕಿದರು.
ಹರಿಹರ ನಗರಸಭೆಯಿಂದ "ಲಕ್ಷ್ಮಿ" ಜಾರಿದ ಮೇಲೆ ಅಭಿವೃದ್ಧಿ ಕುಂಠಿತವಾಗಿದೆಯೇ.? ಎಂಬ ಅನುಮಾನ ಸಾರ್ವಜನಿಕರಲ್ಲಿ ಕಾಡುತ್ತಿದೆ.ಇದಕ್ಕೆ ತಾಜಾ ಉದಾಹರಣೆ ಚುನಾಯಿತ ಜನಪ್ರತಿನಿಧಿಗಳು ಆಯುಕ್ತರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಮನವಿ ನೀಡಿರುವುದು.
ಕೆಲವು ಚುನಾಯಿತ ಜನಪ್ರತಿನಿಧಿಗಳಿಂದಲೇ ನಗರದ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಲಿಖಿತ ರೂಪದಲ್ಲಿ ಅರ್ಜಿ ನೀಡುವ ಮೂಲಕ ಮನವಿ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದ ಮೇಲೆ ಇನ್ನೂ ನಗರದ ನಾಗರಿಕರ ಪರಿಸ್ಥಿತಿ ಹೇಗಿರಬಾರದು, ನೀವೇ ಒಮ್ಮೆ ಊಹಿಸಿಕೊಳ್ಳಿ .
ಒಟ್ಟಾರೆಯಾಗಿ ನಗರಸಭೆಯ ನೂತನ ಪೌರಾಯುಕ್ತರ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ.ಅವರ ಬೇಜವಾಬ್ದಾರಿತನ ಮತ್ತು ವಿಳಂಬ ತಂತ್ರದಿಂದಾಗಿ ಚುನಾಯಿತ ಜನಪ್ರತಿನಿಧಿಗಳು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಂತಾಗಿದೆ .ಕೂಡಲೇ ಪೌರಾಯುಕ್ತರು ಕರ್ತವ್ಯ ನಿಭಾಯಿಸುವ ನಿಟ್ಟಿನಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ಮುಂದೊಂದು ದಿನ ಈ ವಿಚಾರವೇ ದೊಡ್ಡ ಹೆಮ್ಮರವಾಗಿ ಅವರ ಕುರ್ಚಿಗೆ ಕಂಟಕ ಬಂದರೂ ಅನುಮಾನವಿಲ್ಲ .ಮತ್ತೆ ನಗರಸಭೆಯಲ್ಲಿ "ಲಕ್ಷ್ಮಿ ಕಟಾಕ್ಷ ಹೋಮ" ನಡೆದರೂ ಆಶ್ಚರ್ಯವಿಲ್ಲ.ಏನೇ ಹೇಳಿ "ಲಕ್ಷ್ಮಿ"ಯ ಆಟದ ಮುಂದೆ ಏನೂ ಇಲ್ಲ.ನಗರ ಅಭಿವೃದ್ಧಿಯಾಗಬೇಕಾದರೆ "ಲಕ್ಷ್ಮಿ ಕಟಾಕ್ಷ" ಇರಲೇಬೇಕು ಇಲ್ಲದಿದ್ದರೆ.......
0 Comments