ಸಾಗರ:-ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತವನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯುವ ಕಾತರದಲ್ಲಿದೆ.
ಅದರಂತೆ ರಾಜ್ಯದ ಕಾಂಗ್ರೆಸ್ ಪಕ್ಷದ ನಾಯಕರು ಆಡಳಿತ ಪಕ್ಷವನ್ನು ಹಾಗೂ ಪಕ್ಷದ ಧೋರಣೆಯನ್ನು ಎಳೆ ಎಳೆಯಾಗಿ ಮತದಾರರ ಮುಂದೆ ಬಿಚ್ಚಿಡುವಲ್ಲಿ ಮತ್ತು ಆಡಳಿತ ಪಕ್ಷವನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ಘಟಾನುಘಟಿ ನಾಯಕರು ಆಡಳಿತ ಪಕ್ಷದ ವಿರುದ್ಧ ಮುಗಿ ಬೀಳುತ್ತಿದ್ದು,ಆಡಳಿತ ಪಕ್ಷದ ಭ್ರಷ್ಟಾಚಾರವನ್ನು ಜನ ಸಾಮಾನ್ಯರ ಮುಂದೆ ಇಡುವಲ್ಲಿ ಒಂದು ಹೆಜ್ಜೆ ಮುಂದೆ ಇದ್ದಾರೆ.ಸದ್ಯ ಬಿಜೆಪಿ ಸರ್ಕಾರಕ್ಕೆ ವಿರೋಧ ಪಕ್ಷದವರನ್ನ ಎದುರಿಸುವುದು ಹೇಗೆ ಎಂಬ ತಂತ್ರಗಳನ್ನು ಹೆಣೆಯುತ್ತಿರುವ ದಂತೂ ಸತ್ಯ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಬೇಕಾದರೆ ಕೆಲವೊಂದು ವಿಧಾನಸಭಾ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಯಾವುದೇ ಆತುರದ ನಿರ್ಧಾರವನ್ನು ತೆಗೆದುಕೊಳ್ಳುವುದು ಈ ಬಾರಿ ಬೇಡ ಎನಿಸುತ್ತದೆ .ಅದರಲ್ಲೂ ವಿಶೇಷವಾಗಿ ಸಾಗರ ವಿಧಾನಸಭಾ ಕ್ಷೇತ್ರ .
ಸಾಗರ ವಿಧಾನಸಭಾ ಕ್ಷೇತ್ರ ಈ ಬಾರಿ ಕಾಂಗ್ರೆಸ್ ಪಕ್ಷ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ .ಆದರೆ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುವಲ್ಲಿ ಯಾವುದೇ ತಪ್ಪು ಮಾಡದಿರಲಿ .ಏಕೆಂದರೆ ಒಂದು ಸಣ್ಣ ನಿರ್ಧಾರವು ಸಹ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣವಾಗಬಹುದು.
ಸಾಗರ ವಿಧಾನಸಭಾ ಕ್ಷೇತ್ರದಿಂದ ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್ ಪಕ್ಷದ ಸಮರ್ಥ ಅಭ್ಯರ್ಥಿಯಾಗಿದ್ದು ಎದುರಾಳಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದ್ದಾರೆ .ಈಗಾಗಲೇ ಸಾಗರ ವಿಧಾನಸಭಾ ಹಾಗೂ ಹೊಸನಗರ ಕ್ಷೇತ್ರಾದ್ಯಂತ ಪಕ್ಷ ಸಂಘಟನೆಯಲ್ಲಿ ,ಎದುರಾಳಿ ಪಕ್ಷದ ನಾಯಕರನ್ನು ಎದುರಿಸುವಲ್ಲಿ ,ಮತ್ತು ಆಡಳಿತ ಪಕ್ಷದ ವೈಫಲ್ಯವನ್ನು ಎತ್ತಿ ಹಿಡಿಯುವಲ್ಲಿ ಮುಂಚೂಣಿಯ ಸ್ಥಾನದಲ್ಲಿ ನಿಲ್ಲುತ್ತಾರೆ.
ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಸ್ಪರ್ಧಾಕಾಂಕ್ಷಿಗಳು ಹಲವರು ಇರಬೋದು ಆದರೆ ಈ ಬಾರಿ ಬೇಳೂರು ಗೋಪಾಲಕೃಷ್ಣ ಅವರಂಥ ಸಮರ್ಥ ಅಭ್ಯರ್ಥಿ ಸಿಗಲಾರದು.
ಸಾಗರ ವಿಧಾನಸಭಾ ಕ್ಷೇತ್ರದ ಬಹುತೇಕ ಮತದಾರರು ಬೇಳೂರು ಗೋಪಾಲಕೃಷ್ಣ ಅವರತ್ತ ಒಲವು ಹೊಂದಿದ್ದು .ಈ ಬಾರಿ ಅವರ ಕೈ ಹಿಡಿಯುವ ಸಾಧ್ಯತೆ ಇದೆ .
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೇಳೂರು ಗೋಪಾಲಕೃಷ್ಣ ಅವರಿಗೆ ಕೊನೆಯ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬದಲಿಸುವ ಮೂಲಕ ಬೇಳೂರು ಗೋಪಾಲಕೃಷ್ಣ ಅವರಿಗೆ ಅನ್ಯಾಯ ಮಾಡಿದ್ದು ಮತದಾರರು ಮರೆತಿಲ್ಲ .ಕ್ಷೇತ್ರದ ಮತದಾರರು ಬೇಳೂರು ಗೋಪಾಲಕೃಷ್ಣ ಅವರತ್ತ ಅನುಕಂಪವನ್ನು ಹೊಂದಿದ್ದು ಇದರ ಜೊತೆಜೊತೆಗೇ ಕ್ಷೇತ್ರದ ಅಭಿವದ್ಧಿಗೆ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬೇಳೂರು ಗೋಪಾಲಕೃಷ್ಣ ಸ್ಪರ್ಧಿಸಿದ್ದೆ ಆದರೆ ಕಾಂಗ್ರೆಸ್ ಪಕ್ಷದ ಗೆಲುವು ಶತಸಿದ್ಧ ಎಂಬ ಮಾತನ್ನ ತಾಲ್ಲೂಕಿ ನಾದ್ಯಂತ ಹರಿದಾಡುತ್ತಿದೆ .
ಏನೇ ಆಗಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಬಹುದಾದ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಗರ ವಿಧಾನಸಭಾ ಕ್ಷೇತ್ರವೂ ಒಂದು .ಸಮರ್ಥ ಅಭ್ಯರ್ಥಿ ಹಾಕುವ ನಿಟ್ಟಿನಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಸೋಲು ಕಟ್ಟಿಟ್ಟ ಬುತ್ತಿ .
ಈಗಾಗಲೇ ಸಾಗರ ತಾಲ್ಲೂಕಿನಾದ್ಯಂತ ಮತ್ತು ಹೊಸನಗರ ತಾಲ್ಲೂಕಿನಾದ್ಯಂತ ಬಹುತೇಕ ಮತದಾರರು ಬೇಳೂರು ಗೋಪಾಲಕೃಷ್ಣ ಅವರತ್ತ ಒಲವು ಹೊಂದಿರುವ ವಿಚಾರ ರಾಜ್ಯ ನಾಯಕರಿಗೂ ಗೊತ್ತಿರುವ ವಿಷಯ.
ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟ ಏನೇ ಇದ್ದರೂ ಈ ಬಾರಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಸಾಗರ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಗೆಲ್ಲಲು ಸಾಧ್ಯವಿದೆ.ಪಕ್ಷದಲ್ಲಿ ಒಗ್ಗಟ್ಟಿನ ಮಂತ್ರ ಪಠಿಸುವುದು ಒಳಿತು.
ರಾಜ್ಯ ಕಾಂಗ್ರೆಸ್ ನಾಯಕರು ಬೇಕಾದರೆ ನಮ್ಮ ಸುದ್ದಿವಾಹಿನಿಯ ವರದಿಯ ಸತ್ಯಾಸತ್ಯತೆಯನ್ನು ತಿಳಿಯಲು ತಮ್ಮದೇಯಾದ ತಂಡ ಒಂದನ್ನು ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಕಳುಹಿಸಿ ಮಾಹಿತಿ ಪಡೆಯಲಿ.ನಮ್ಮ ವರದಿಯಲ್ಲಿ ಸತ್ಯ ಇದೆಯೇ? ಇಲ್ಲವೇ? ಎಂಬುದು ತಿಳಿಯುತ್ತದೆ.
ಕೇವಲ ಪಕ್ಷದ ಟಿಕೇಟ್ ಪಡೆಯುವ ಉದ್ದೇಶದಿಂದ ದಿಢೀರ್ ಎಂದು ಪ್ರತ್ಯಕ್ಷವಾಗಿ ನಾನು ಪಕ್ಷದ ಪ್ರಬಲ ಆಕಾಂಕ್ಷಿ ಎಂದು ಗೊಂದಲ ಸೃಷ್ಟಿಸುವರ ಬಗ್ಗೆ ಕಾಂಗ್ರೆಸ್ ನಾಯಕರು ಹೆಚ್ಚಿನ ಎಚ್ಚರ ವಹಿಸಬೇಕು.ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡ ಅಭ್ಯರ್ಥಿಗೆ ಟಿಕೆಟ್ ನೀಡುವ ಕಡೆ ಗಮನ ಹರಿಸಬೇಕು .ಆ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತ್ತವಾಗಬೇಕು .
0 Comments