ಹರಿಹರ:ಹರಿಹರ ನಗರದ ಸರ್ಕಾರಿ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆ ಮಾರ್ಗವು ದುರಸ್ತಿಗೊಂಡಿದ್ದು ಪ್ರಯಾಣಿಕರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಪಿಬಿ ರಸ್ತೆಯ ಮಾರುತಿ ಆಟೊ ನಿಲ್ದಾಣದ ಸರ್ಕಾರಿ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಯೂ ಕಳಪೆ ಕಾಮಗಾರಿಯಿಂದ ಗುಂಡಿ ಬಿದ್ದಿದೆ .ಕಳೆದ 6ತಿಂಗಳ ಹಿಂದೆ ಈ ರಸ್ತೆಯನ್ನು ದುರಸ್ತಿಗೊಳಿಸಲಾಗಿತ್ತು .ಕಳಪೆ ಮತ್ತು ಗುಣಮಟ್ಟ ಇಲ್ಲದ ಕಾರಣ ಮತ್ತೆ ಮತ್ತೆ ಈ ರಸ್ತೆ ದುರಸ್ತಿ ಗೊಳ್ಳುತ್ತಿದೆ.ಕೂಡಲೇ ಹರಿಹರ ನಗರಸಭೆಯ ಅಧಿಕಾರಿಗಳು ರಸ್ತೆಯನ್ನು ಶಾಶ್ವತವಾಗಿ ಬಳಕೆಗೆ ಬರುವಂತೆ ರಸ್ತೆ ದುರಸ್ತಿಗೊಳಿಸಬೇಕು ಎಂದು ಆಟೊ ಮಾಲೀಕರು ಹಾಗೂ ಚಾಲಕರು ನಮ್ಮ ಮಾಧ್ಯಮದ ಮೂಲಕ ವಿನಂತಿಸಿಕೊಂಡಿದ್ದಾರೆ .
ಈಗಾಗಲೇ ಈ ರಸ್ತೆಯು 4-5ಬಾರಿ ಕಳಪೆ ಕಾಮಗಾರಿಯಿಂದ ಗುಂಡಿ ಬಿದ್ದಿದೆ ಅಷ್ಟೇ ಅಲ್ಲದೆ ಕಬ್ಬಿಣದ ರಾಡುಗಳು ಕಿತ್ತು ಬಂದಿದ್ದು ಪ್ರಯಾಣಿಕರು ಹಾಗೂ ಪಾದಚಾರಿಗಳು ಎಡವಿ ಬೀಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ .ಮುಂದೆ ದೊಡ್ಡ ಅನಾಹುತ ಆಗುವ ಮೊದಲು ನಗರಸಭೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಗುಣಮಟ್ಟದ ದುರಸ್ತಿ ಕಾರ್ಯವನ್ನು ಕೈಗೊಳ್ಳಲಿ ಎಂಬುದು ನಮ್ಮ ಮಂದಾರ ನ್ಯೂಸ್ ವೆಬ್ ಪೋರ್ಟಲ್ ಸುದ್ದಿವಾಹಿನಿಯ ಆಶಯವಾಗಿದೆ.
ಒಟ್ಟಾರೆಯಾಗಿ ಈ ರಸ್ತೆ ಆಗಿಂದಾಗೆ ಗುಂಡಿ ಬೀಳುತ್ತಿರುವುದಾದರೂ ಏಕೆ ?ಗುತ್ತಿಗೆದಾರನ ಕಳಪೆ ಕಾಮಗಾರಿಯೇೂ? ಅಥವಾ ಅಧಿಕಾರಿಗಳ ನಿರ್ಲಕ್ಷ್ಯವೋ? ಜನಸಾಮಾನ್ಯರ ತೆರಿಗೆ ಹಣ ಕಳಪೆ ಕಾಮಗಾರಿಯಿಂದ ಈ ರೀತಿ ಪೋಲಾಗುತ್ತಿರುವುದು ಮಾತ್ರ ವಿಪರ್ಯಾಸ
ತಿಪ್ಪೇಶ್ .ಎಲ್ .
0 Comments