ಎಸ್ಸಿ -ಎಸ್ಟಿ ಮೀಸಲಾತಿ ಸ್ವಾಭಿಮಾನ ಹೋರಾಟ ವೇದಿಕೆ ವತಿಯಿಂದ ನಾಳೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ.


ಹರಿಹರ:ಎಸ್ಟಿ ಸಮಾಜಕ್ಕೆ  ಮೀಸಲಾತಿ ಪ್ರಮಾಣವನ್ನು 3 ರಿಂದ 7.5% ಹಾಗೂ ಎಸ್ ಸಿ ಸಮಾಜಕ್ಕೆ 15 ರಿಂದ 17% ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ  ಕಳೆದ152 ದಿನದಿಂದ  ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಅವರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬಿಸಿಲು, ಮಳೆ, ಚಳಿ ಎನ್ನದೆ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಶ್ರೀಗಳು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ152 ದಿನದಿಂದ ಧರಣಿ ಧರಿಸುತ್ತಿದ್ದು ಅವರ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ ಎಸ್ಸಿ -ಎಸ್ಟಿ ಮೀಸಲಾತಿ ಸ್ವಾಭಿಮಾನ ಹೋರಾಟ ವೇದಿಕೆ ವತಿಯಿಂದ (11.7.22) ನಾಳೆ ಬೆಳಿಗ್ಗೆ ಹನ್ನೊಂದು ಗಂಟೆಗೆ ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.

ಸಮಾಜದ ಬಂಧುಗಳಿಗಾಗಿ ಉದ್ಯೋಗ ಮತ್ತು ಶಿಕ್ಷಣದ ಅವಕಾಶಕ್ಕಾಗಿ ಮೀಸಲಾತಿ ಹೆಚ್ಚಳಕ್ಕಾಗಿ ಆಗ್ರಹಿಸಿ ಕಳೆದ 152 ದಿನಗಳಿಂದ ಬಿಸಿಲು, ಮಳೆ ,ಚಳಿ ಎನ್ನದೆ ಶ್ರೀ.ಶ್ರೀ  ಪ್ರಸನ್ನಾನಂದ ಸ್ವಾಮೀಜಿಗಳು ಧರಣಿ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ ಆಳುವಂತಹ ಸರ್ಕಾರಗಳು ಶ್ರೀಗಳ ಧರಣಿ ಸತ್ಯಾಗ್ರಹವನ್ನು ನಿರ್ಲಕ್ಷ್ಯ ಮಾಡುತ್ತಿದ್ದು .ಸರ್ಕಾರದ ಧೋರಣೆಯನ್ನು ಖಂಡಿಸಿ ನಾಳೆ ದಾವಣಗೇರಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆಯನ್ನ ನಡೆಸುತ್ತಿದ್ದೇವೆ ಸಮಾಜದ ಬಂಧುಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಶ್ರೀಗಳಿಗೆ ನೈತಿಕ ಬೆಂಬಲವನ್ನು ನೀಡೋಣ ಅದೇ ರೀತಿ ನಾಳೆಯ ಬೃಹತ್ ಪ್ರತಿಭಟನೆ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಲಿ ಎಂದು ಎಸ್. ಸಿ- ಎಸ್. ಟಿ ಮೀಸಲಾತಿ ಸ್ವಾಭಿಮಾನ ಹೋರಾಟ ವೇದಿಕೆಯ ಅಧ್ಯಕ್ಷರು ಸೇರಿದಂತೆ ಎಲ್ಲ ಪದಾಧಿಕಾರಿಗಳು ಸಮಾಜದ ಬಂಧುಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಪ್ರತಿಭಟನಾ ಮೆರವಣಿಗೆ ನಾಳೆ ಬೆಳಿಗ್ಗೆ ಹನ್ನೊಂದು ಗಂಟೆಗೆ ನಾಯಕರ ವಿದ್ಯಾರ್ಥಿ ನಿಲಯದಿಂದ ಮೆರವಣಿಗೆಯ ಮುಖಾಂತರ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಆಯೋಗದ ವರದಿ ಜಾರಿಗೆ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಲಾಗುವುದು.ಇದಕ್ಕೂ ಮುನ್ನ ದಾವಣಗೆರೆ ಜಿಲ್ಲಾ ನಗರದಲ್ಲಿರುವ ಬಾಬಾ ಸಾಹೇಬ್ ಡಾಕ್ಟರ್. ಬಿ.ಆರ್ ಅಂಬೇಡ್ಕರ್ ಮತ್ತು ಮಹರ್ಷಿ ವಾಲ್ಮೀಕಿ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಗುವುದು. ದಾವಣಗೇರಿ ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಾಜದ ಬಾಂಧವರು ವಿದ್ಯಾರ್ಥಿಗಳು ತಪ್ಪದೆ ಭಾಗವಹಿಸಬೇಕೆಂದು ಶ್ರೀ ಬಿ ವೀರಣ್ಣ ಜಿಲ್ಲಾಧ್ಯಕ್ಷರು ದಾವಣಗೆರೆ ನಾಯಕ ಸಮಾಜ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0 Comments