ಹರಿಹರ:ಹರಿಹರದ ಶಾಸಕ ಎಸ್ ರಾಮಪ್ಪ ನವರು ನಾನೊಬ್ಬ ಶಾಸಕನೆಂಬ ಅಹಂ ಭಾವನೆ ಇಲ್ಲದೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಹರಿಹರ ಕ್ಷೇತ್ರದ ಅಭಿವೃದ್ಧಿಗಾಗಿ ವಿಧಾನಸೌಧದ ಅಧಿಕಾರಿಗಳ ಮತ್ತು ಸಚಿವರ ಕಚೇರಿಯಿಂದ ಕಚೇರಿಗೆ ಶ್ರಮಿಸುವ ವ್ಯಕ್ತಿಯಾಗಿದ್ದಾರೆ.
ಎಸ್ ರಾಮಪ್ಪನವರನ್ನು ಮುಂದಿನ ಚುನಾವಣೆಯಲ್ಲಿ ಮತದಾರರು ಮತ್ತೊಮ್ಮೆ ಕೈಹಿಡಿಯುವ ಮೂಲಕ ಶಾಸಕರನ್ನಾಗಿ ಆಯ್ಕೆ ಮಾಡುವ ಜವಾಬ್ದಾರಿ ನಿಮ್ಮದಾಗಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಹೇಳಿದರು
ಹರಿಹರದ ಶಾಸಕ ಎಸ್ ರಾಮಪ್ಪನವರ ಅಭಿಮಾನಿ ಬಳಗದಿಂದ ನಗರದ ಸಿದ್ದೇಶ್ವರ ಪ್ಯಾಲೇಸ್ ನಲ್ಲಿ ಹಮ್ಮಿಕೊಂಡಿದ್ದ ಎಸ್ ರಾಮಪ್ಪನವರ 65 ನೇ ಹುಟ್ಟುಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು
ಶಾಸಕ ಎಸ್ ರಾಮಪ್ಪ ನವರು ಹರಿಹರ ವಿಧಾನಸಭಾ ಕ್ಷೇತ್ರದಾದ್ಯಂತ ನೀರಜ್ಜ ರಾಮಪ್ಪ ಎಂಬ ಹೆಸರಿನಿಂದ ನಿಮ್ಮೊಂದಿಗೆ ಬೆರೆಯುತ್ತಿದ್ದಾರೆ .ಅವರಲ್ಲಿ ಕಪಟವಿಲ್ಲ ,ಮೋಸವಿಲ್ಲ ಕ್ಷೇತ್ರದ ಅಭಿವೃದ್ದಿಗಾಗಿ ಚಡಪಡಿಸುವ ನಿಮ್ಮ ನಾಯಕ ಎಂದು ರಾಮಪ್ಪನವರನ್ನು ಕುರಿತು ಸಿದ್ಧರಾಮಯ್ಯನವರು ಬಣ್ಣಿಸಿದರು.
ಬೊಮ್ಮಾಯಿ ಅವರ ನೇತೃತ್ವದ ಇಂದಿನ ಬಿಜೆಪಿ ಸರ್ಕಾರವು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿಲ್ಲ.ಅನುದಾನ ನೀಡುವ ವಿಚಾರದಲ್ಲಿ ತಾರತಮ್ಯ ಅನುಸರಿಸುತ್ತಿದ್ದಾರೆ .ಬಿಜೆಪಿ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ತಾರತಮ್ಯ ಮಾಡುತ್ತಿದ್ದಾರೆ .ಬೊಮ್ಮಾಯಿಯವರು ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ ಎಂದು ಕೊಚ್ಚಿಕೊಳ್ಳುತ್ತಾರೆ.ಆದರೆ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸಮಾನವಾದ ಅನುದಾನವನ್ನು ಮಾತ್ರ ನೀಡುತ್ತಿಲ್ಲ ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ.ಭ್ರಷ್ಟಾಚಾರ ತಾಂಡವಾಡುತ್ತಿದೆ.ನಾನು ರಾಜ್ಯದ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2ಸಾವಿರ ಕೋಟಿ ಹಣ ನೀಡಿದ್ದೇನೆ .
ನನ್ನ ಅವಧಿಯಲ್ಲಿ ಭೇದಭಾವವಿಲ್ಲದೆ ಪಕ್ಷಾತೀತವಾಗಿ ಅನುದಾನ ನೀಡಿದ್ದೆ ಆದರೆ ಬಿಜೆಪಿ ಸರ್ಕಾರ ಪಕ್ಷ ಭೇದ ಮಾಡಿ ಅನುದಾನ ನೀಡುತ್ತಿವೆ ಈ ಕಾರಣ ರಾಜ್ಯದ ಸರ್ವತೋಮುಖ ಅಭಿವದ್ಧಿಗೆ ಹಿನ್ನಡೆಯಾಗಿದೆ ಎಂದು ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೀವ್ರ ತರಾಟೆಗೆ ತೆಗೆದುಕೊಂಡರು.
ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸರ್ವ ಜನಾಂಗದವರಿಗೂ ಅನುಕೂಲ ವಾಗುವ ರೀತಿಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೆ.ಹಸಿವು ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಅನ್ನಭಾಗ್ಯ ಹಾಗೂ ರೈತರ ಬದುಕು ಹಸನಾಗಿಸುವ ನಿಟ್ಟಿನಲ್ಲಿ ಕೃಷಿ ಭಾಗ್ಯ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ಕ್ಷೀರಭಾಗ್ಯ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಶೂ ಭಾಗ್ಯ ಅಲ್ಪಸಂಖ್ಯಾತರ ಅನುಕೂಲಕ್ಕಾಗಿ ಶಾದಿಭಾಗ್ಯ ಇಂಥ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದ ತೃಪ್ತಿ ನನಗಿದೆ .ಆದರೆ ಬಿಜೆಪಿ ನೇತೃತ್ವದ ಸರ್ಕಾರ ಈ ಎಲ್ಲಾ ಯೋಜನೆಗಳನ್ನು ಮುಂದುವರಿಸುವಲ್ಲಿ ತಾರತಮ್ಯ ನಡೆಸಿರುವುದು ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಗುಡುಗಿದರು.
ಎಸ್ ರಾಮಪ್ಪ ಅಣ್ಣಾವ್ರ ಹುಟ್ಟುಹಬ್ಬದ ಸಭಾ ಕಾರ್ಯಕ್ರಮದ ಸಂದರ್ಭದಲ್ಲಿ ಹರಿಹರ ಪಂಚಮಸಾಲಿ ಪೀಠಾಧ್ಯಕ್ಷರಾದ ವಚನಾನಂದ ಮಹಾಸ್ವಾಮಿಗಳು,ಚಿತ್ರದುರ್ಗದ ಮಡಿವಾಳ ಗುರು ಪೀಠದ ಡಾಕ್ಟರ್ ಬಸವ ಮಾಚಿದೇವ ಮಹಾಸ್ವಾಮಿಗಳು,ಅರಕಲಗೋಡು ವಿಶ್ವಕರ್ಮ ಪೀಠದ ಅನಂತಶ್ರೀ ವಿಭೂಷಿತ ಸುಜ್ಞಾನ ತೀರ್ಥ ಮಹಾಸ್ವಾಮಿಗಳು ಮತ್ತು ಹರಿಹರದ ಮೌಲಾನಾ ಖಾಜಿ -ಇ- ಶೆಹರ್ ನ ಸೈಯದ್ ಶಂಘುಧ್ದೀನ್,ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.
ಮಾಜಿ ಸಚಿವರುಗಳಾದ ಎಸ್ ಎಸ್ ಮಲ್ಲಿಕಾರ್ಜುನ್,ಜಮೀರ್ ಅಹ್ಮದ್,ಎಚ್ ಆಂಜನೇಯ, ಅಬ್ದುಲ್ ಜಬ್ಬರ್ ಸಾಬ್,ವಿಧಾನಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಕೆ ಮಂಜಪ್ಪ ,ಕೆಪಿಸಿಸಿ ವಕ್ತಾರ ನಾಗೇಂದ್ರಪ್ಪ ಎಂ ರಾಜನಹಳ್ಳಿ, ಕೆಪಿಸಿಸಿ ಉಪಾಧ್ಯಕ್ಷರಾದ ವೇಣುಗೋಪಾಲ್,ಕೆಪಿಸಿಸಿ ಸದಸ್ಯ ರೇವಣಸಿದ್ದಪ್ಪ ನಗರಸಭೆ ಅಧ್ಯಕ್ಷೆ ಶಾಹೀನಾಬಾನು ದಾದಾಪೀರ್,ನಗರಸಭಾ ಸದಸ್ಯ ಶಂಕರ್ ಖಟಾವ್ ಕರ್, ಪ್ರಶಾಂತ್ ಎಂ,ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್,ಪ್ರಸನ್ನ ಬೆಳಕೇರಿ ,ಸಂತೋಷ್ ನೋಟದರ್ ಸೇರಿದಂತೆ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪಕ್ಷದ ಎಲ್ಲ ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.
0 Comments