ಹರಿಹರ ಜೆಡಿಎಸ್ ಕಚೇರಿಯಲ್ಲಿಂದು 75 ನೇ ಸ್ವಾತಂತ್ರ ಅಮೃತ ಮಹೋತ್ಸವ:ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್ ಅವರಿಂದ ಧ್ವಜಾರೋಹಣ.

ಹರಿಹರ:ಹರಿಹರದ ಜೆಡಿಎಸ್ ಕಚೇರಿಯ ಮುಂಭಾಗದಲ್ಲಿ ಎಪ್ಪತ್ತೈದನೇ ವರ್ಷದ ಸ್ವಾತಂತ್ರ ಅಮೃತ ಮಹೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.

ಜೆಡಿಎಸ್ ಮಾಜಿ ಶಾಸಕ ಹೆಚ್ ಎಸ್ ಶಿವಶಂಕರ್ ಅವರು ಎಪ್ಪತ್ತೈದನೇ ವರ್ಷದ ಅಮೃತ ಮಹೋತ್ಸವದ ಕಾರ್ಯಕ್ರಮದ ಧ್ವಜಾರೋಹಣವನ್ನು ನೆರವೇರಿಸಿದರು.

ಇದಕ್ಕೂ ಮೊದಲು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ನಂತರ ಧ್ವಜಾರೋಹಣವನ್ನು ನೆರವೇರಿಸಿದರು.
ಇದೇ ಸಂದರ್ಭದಲ್ಲಿ ತಿರಂಗ ಅಭಿಯಾನ ಜಾಥಾವನ್ನು ಬೈಕ್ ರ್ಯಾಲಿಯ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ತಿರಂಗ ಧ್ವಜವನ್ನು ಹಿಡಿದು ರಾಷ್ಟ್ರಧ್ವಜದ ಅಭಿಮಾನವನ್ನ ಮೆರೆದರು.

ಎಪ್ಪತ್ತೈದನೆ ಸ್ವಾತಂತ್ರ ಅಮೃತ ಧ್ವಜಾರೋಹಣ ಮತ್ತು ಬೈಕ್ ರ್ಯಾಲಿಯ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ ತಾಲ್ಲೂಕು ಅಧ್ಯಕ್ಷ ಹಬೀಬುಲ್ಲಾ ಹಾಗು ಎಲ್ಲಾ ಗೌರವಾನ್ವಿತ ಜೆಡಿಎಸ್ ನಗರಸಭೆಯ ಸದಸ್ಯರು,ಮಾಜಿ ನಗರಸಭೆ ಅಧ್ಯಕ್ಷರು, ಸದಸ್ಯರುಗಳು,ಹೆಚ್ ಶಿವಪ್ಪಾಜಿ ಅಭಿಮಾನಿ ಬಳಗದವರು, ಮುಖಂಡರುಗಳು,ಮಹಿಳಾ ಮುಖಂಡರುಗಳು,ಹಾಗೂ ಕಾರ್ಯಕರ್ತರು ಈ ಎಲ್ಲ ಕಾರ್ಯಕ್ರಮದ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಲ್ಲ ರಾಷ್ಟ್ರ ಅಭಿಮಾನಿಗಳಿಗೆ ಲಘು ಉಪಾಹಾರದ ವ್ಯವಸ್ಥೆಯನ್ನು ಕಲ್ಪಿಸಲಾಯಿತು.

Post a Comment

0 Comments