ಹರಿಹರ:ನಿನ್ನೆ ದಿನ ಮಲೆಬೆನ್ನೂರಿನಲ್ಲಿ ಎಪ್ಪತ್ತೈದನೇ ಸ್ವಾತಂತ್ರದ ಅಮೃತ ಮಹೋತ್ಸವದ ವೇಳೆ ಭಾರತದ ತ್ರಿವರ್ಣ ಧ್ವಜವನ್ನು ವಿರೂಪಗೊಳಿಸಿದ ಧ್ವಜವನ್ನು ಹಿಡಿದ ಇಪ್ಪತ್ತೈದರಿಂದ ಮೂವತ್ತು ಯುವಕರ ಗುಂಪೊಂದು ಮೆಲೆಬೆನ್ನೂರು ತುಂಬಾ ಓಡಾಡಿದ್ದಾರೆ.
ಮಲೇಬೆನ್ನೂರು ಪಟ್ಟಣದ ಜಿಗಳಿ ವೃತ್ತದ ಬಳಿ ಹಾಗೂ ಸರ್ಕಾರಿ ಪಿಯು ಕಾಲೇಜು ಮುಂಭಾಗದಲ್ಲಿ ಸರಿ ಸುಮಾರು ಇಪ್ಪತ್ತೈದರಿಂದ ಮೂವತ್ತು ಯುವಕರು ಇರುವಂಥ ಗುಂಪು ಭಾರತದ ತ್ರಿವರ್ಣ ಧ್ವಜದಲ್ಲಿ ಅನ್ಯ ಧರ್ಮದ ಸಂಕೇತಗಳನ್ನು ಬಳಸಿದ ಧ್ವಜವನ್ನು ಹಿಡಿದು ಓಡಾಡಿದ್ದರಿಂದ ಸುತ್ತಲೂ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.
ಸ್ಥಳಕ್ಕೆ ಹರಿಹರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಪಿ ಬಿ ಪಿ ಹರೀಶ್, ಬಿಜೆಪಿ ಜಿಲ್ಲಾ ಅಧ್ಯಕ್ಷ ವೀರೇಶ್ ಹನಗವಾಡಿ,ಚಂದ್ರಶೇಖರ್ ಪೂಜಾರ್ ಸೇರಿದಂತೆ ಬಿಜೆಪಿಯ ಕಾರ್ಯಕರ್ತರು ಪೊಲೀಸ್ ಠಾಣೆ ಬಳಿ ಜಮಾಯಿಸಿ ದುಷ್ಕರ್ಮಿಗಳನ್ನು ಬಂಧಿಸಿ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ಹರಿಹರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಪಿ ಹರೀಶ್ ಮಾತನಾಡಿ ಇತ್ತೀಚಿನ ದಿನದಲ್ಲಿ ಮಲೆಬೆನ್ನೂರಿನಲ್ಲಿ ದೇಶ ವಿರೋಧಿ ಕೃತ್ಯಗಳು ನಡೆಯುತ್ತಿವೆ.ದೇಶ ವಿರೋಧಿ ಶಕ್ತಿಗಳು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ.ಮಲೇಬೆನ್ನೂರು ಹರಿಹರದಲ್ಲಿ ಕಳೆದ ಐದಾರು ತಿಂಗಳ ಹಿಂದೆ ಹಿಜಾಬ್ ವಿಚಾರದಲ್ಲಿ ಹರಿಹರದಲ್ಲಿ ಹಿಂದೂ ಯುವಕರ ಮೇಲೆ ಹಲ್ಲೆ ಮಾಡಿದ್ದರು.ಮಲೆಬೆನ್ನೂರಿನಲ್ಲಿ ಹಿಂದೂ ಯುವಕನನ್ನು ಸ್ಕ್ರೂ ಡ್ರೈವರ್ ನಿಂದ ಚುಚ್ಚಿದ್ದರು.ಇಲ್ಲಿ ವಿಧ್ವಂಸಕ ಕೃತ್ಯ ಹೆಚ್ಚಾಗಿದೆ ಯಾವುದೇ ಕಾರಣಕ್ಕೂ ಇನ್ನು ಮುಂದೆ ಮೆಲೆಬೆನ್ನೂರು ಇರಬೋದು ಹರಿಹರದಲ್ಲಿ ಇರಬೋದು ದೇಶವಿರೋಧಿ ಶಕ್ತಿಗಳ ತಮ್ಮ ಬಾಲ ಬಿಚ್ಚಿದೆ ಆದರೆ ಇವರನ್ನ ಮಟ್ಟಹಾಕುವ ಕೆಲಸ ಪೋಲಿಸರಿಂದ ಆಗದಿದ್ದರೆ ನಾವೇ ಅವರನ್ನು ಮಟ್ಟ ಹಾಕುವ ಅಧಿಕಾರವನ್ನ ಚಲಾಯಿಸುವಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಲು ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದರು.
ಕೂಡಲೇ ಭಾರತದ ಧ್ವಜವನ್ನು ವಿರೂಪಗೊಳಿಸಿದ ದೇಶದ್ರೋಹಿ ಯುವಕರನ್ನು ಬಂಧಿಸಬೇಕು.
ಸಣ್ಣಪುಟ್ಟ ಕಳ್ಳತನ ಮಾಡಿದವರನ್ನು ಬಂಧಿಸುವಲ್ಲಿ ತೋರಿಸುವ ಆಸಕ್ತಿ ಇಂತಹ ಅಹಿತಕರ ಘಟನೆಗೆ ಕಾರಣವಾಗುವ ದೇಶದ್ರೋಹಿಗಳನ್ನು ಹಿಡಿಯುವ ಸಂದರ್ಭದಲ್ಲಿ ಏಕೆ ತೋರುತ್ತಿಲ್ಲ ?ಎಂದು ಪೊಲೀಸ್ ಇಲಾಖೆಯ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಭಾರತದ ಧ್ವಜವನ್ನು ವಿರೂಪಗೊಳಿಸಿ ಮೆಲೆಬೆನ್ನೂರು ತುಂಬಾ ಬೈಕ್ ನಲ್ಲಿ ಓಡಾಡಿದ ಇಪ್ಪತ್ತೈದರಿಂದ ಮೂವತ್ತು ಯುವಕರ ಗುಂಪಿನಲ್ಲಿ ಇರುವಂತವರಲ್ಲಿ ಒಂದಿಬ್ಬರನ್ನ ಬಂಧಿಸಿ ಅವರಿಗೆ ಪೊಲೀಸ್ ರುಚಿ ತೋರಿಸಿದರೆ ಭಾರತದ ಧ್ವಜವನ್ನು ವಿರೂಪಗೊಳಿಸಿದವರು ಯಾರು ಎಂಬ ಮಾಹಿತಿಯನ್ನ ಅವರೇ ನೀಡುತ್ತಾರೆ ಆ ಕೆಲಸ ಪೋಲಿಸ್ ಇಲಾಖೆಯಿಂದ ಆಗಬೇಕಾಗಿದೆ.ಅಂತಹ ಗಟ್ಟಿ ಧೈರ್ಯ ಪೊಲೀಸ್ ಇಲಾಖೆಗೆ ಬೇಕಾಗಿದೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು .
ಈಗಾಗಲೇ ಮೆಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಕಡಾರನಾಯಕನಹಳ್ಳಿ ಮಾಹಂತೇಶ್ ಎಂಬುವರು ದೂರು ನೀಡಿದ್ದು ಗ್ರಾಮಾಂತರ ಡಿವೈಎಸ್ಪಿ ಕನ್ನಿಕಾ ಸಿಕ್ರಿವಾಲ್ ಅವರ ಆದೇಶದಂತೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ದೇಶದ್ರೋಹಿಗಳ ಮೇಲೆ ಕಲಂ sec2(f)THE Prevention of insults to national honor ACT-1971 and 153(A) 502(2) R/W 34 ipc ಸೆಕ್ಷನ್ ಗಳನ್ನು ದೇಶದ್ರೋಹಿಗಳ ಮೇಲೆ ಹಾಕಲಾಗಿದ್ದು ಕೆಲವರನ್ನು ವಿಚಾರಣೆಗೊಳಪಡಿಸಿದ್ದಾರೆನ್ನಲಾಗಿದೆ.ಠಾಣೆ ಎದುರು ಜನತೆ ಜಮಾವಣೆಗೊಂಡು ಕೆಲಕಾಲ ಬಿಗುವಿನ ಪರಿಸ್ಥಿತಿ ನಿರ್ಮಾಣವಾಯಿತು.
ಈಗಾಗಲೇ ವಿಶೇಷ ತನಿಖಾ ತಂಡವನ್ನು ರಚಿಸಿದ್ದು ಅಪರಾಧಿಗಳ ಪತ್ತೆ ಕಾರ್ಯ ಮುಂದುವರಿದಿದೆ.ಶೀಘ್ರದಲ್ಲೇ ದೇಶದ್ರೋಹಿಗಳನ್ನ ಬಂಧಿಸಲಾಗುವುದು ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
0 Comments