ಶಿವಮೊಗ್ಗ ಪೋಲಿಸರಿಂದ ದೇಶದ್ರೋಹಿಗಳಿಗೆ ಬಂದೂಕಿನ ಮೂಲಕ ಖಡಕ್ ಸಂದೇಶ:ಆರೋಪಿಯ ಕಾಲಿಗೆ ಗುಂಡೇಟು...!!!





ಶಿವಮೊಗ್ಗ :ಪ್ರೇಮ್ ಸಿಂಗ್ ಗೆ ಚಾಕು ಇರಿದು ತಲೆಮರೆಸಿಕೊಂಡಿದ್ದ ಆರೋಪಿತರನ್ನು ಪೊಲೀಸರು ಇಂದು ಮುಂಜಾನೆ ಬಂಧಿಸಲು ಹೋದಾಗ ಪೋಲಿಸರ ಮೇಲೆ ಚಾಕು ಇರಿಯಲು ಮುಂದಾದ ಆರೋಪಿ ಜಬೀವುಲ್ಲಾನ ಕಾಲಿಗೆ ಆತ್ಮ ರಕ್ಷಣೆಗಾಗಿ ಪೋಲಿಸರು ಗುಂಡು ತೂರಿಸಿದ್ದಾರೆ.

ಶಿವಮೊಗ್ಗ ನಗರದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮಾಚರಣೆಯ ನಡುವೆಯೆ ಜವಬ್ದಾರಿಯುತ ಸ್ಥಾನದಲ್ಲಿದ್ದ ಕಾರ್ಪೋರೆಟರ್ ಒಬ್ಬರ ಪತಿ ಮಹಾಶಯ ಮಾಡಿದ ಎಡವಟ್ಟಿಗೆ ಶಿವಮೊಗ್ಗ ನಗರದಲ್ಲಿ ಕೋಮುಗಲಭೆ ಸೃಷ್ಟಿಯಾಗಿದೆ. ಕುಳಿತು ಬಗೆಹರಿಸಿಕೊಳ್ಳಬಹುದಾದ ವಿಷಯವನ್ನು ದೊಡ್ಡ ವಿಷಯವನ್ನಾಗಿ ಮಾಡಿ ಇಂದು ಶಿವಮೊಗ್ಗ ನಗರ ಕೋಮುದಳ್ಳುರಿಗೆ ಸಿಲುಕುವಂತೆ ಮಾಡಿದ್ದು ದುರಂತವೆ ಹೌದು..ಕ್ಷುಲ್ಲಕ ಕಾರಣಕ್ಕೆ ಇಂದು ನಗರದ ನಾಗರಿಕರ ನೆಮ್ಮದಿ ಹಾಳಾಗಿ ಹೋಗಿದೆ.

ಶಿವಮೊಗ್ಗ ನಗರದಲ್ಲಿ ಇಂತಹ ಘಟನೆಗಳು ಸರ್ವೇಸಾಮಾನ್ಯವಾಗಿ ಹೋಗಿದೆ ದುಡಿದು ತಿನ್ನುವವನ ಬದುಕು ಬಿದಿಗೆ ಬಿದ್ದಿದೆ. ಎಲ್ಲಾ ವ್ಯವಹಾರಗಳು ನೆಲಕಚ್ಚವೆ. ಹೊರ ಊರಿನ ಮಂದಿಗೆ ಶಿವಮೊಗ್ಗ ಎಂದರೆ ಒಮ್ಮೆ  ನಡುಕ ಹುಟ್ಟಿಸುವ ಮಟ್ಟಕ್ಕೆ ಶಿವಮೊಗ್ಗ ನಗರ ಕ್ರೈಮ್ ಸಿಟಿಯಾಗಿದೆ. ನಗರ ಜೀವನ ಕೋಮುದಳ್ಳುರಿಯ ಸುಳಿಗೆ ಸಿಲುಕಿದೆ.

ಈ ಕ್ಷಣಕ್ಕೆ ಶಿವಮೊಗ್ಗ ನಗರ ಬೂದಿಮುಚ್ಚಿದ ಕೆಂಡದಂತಿದೆ. ವೀರಸಾವರ್ಕರ್-ಟಿಪ್ಪು ಫ್ಲೆಕ್ಸ್ ವಿವಾದ ಎಬ್ಬಿಸಿದ್ದ ಪ್ರಕರಣಕ್ಕೆ ಸಂಭಂದಿಸಿದಂತೆ 
ಗಾಂಧಿಬಜಾರಿನಲ್ಲಿ ಅಮಾಯಕ ಯುವಕ ಪ್ರೇಮ್ ಸಿಂಗ್‍ಗೆ ಚೂರಿ ಇರಿದ ಪ್ರಕರಣಕ್ಕೆ ಸಂಭಂದಿಸಿದಂತೆ ಆರೋಪಿಗಳ ಸುಳಿವರಿತು ಇಂದು ಮುಂಜಾನೆ ನಾಲ್ಕು ಗಂಟೆಯ ಸುಮಾರಿಗೆ ಬಂಧಿಸಲು ಹೋದ ವಿನೋಬಾ ನಗರ ಠಾಣೆಯ ಪಿಎಸ್ಐ ಮಂಜುನಾಥ್ ಮತ್ತು ಪೊಲೀಸರ ತಂಡದ ಮೇಲೆ ಆರೋಪಿ ಜಬೀವುಲ್ಲಾ (30) ತಪ್ಪಿಸಿಕೊಂಡು ಹೋಗುವ ಭರದಲ್ಲಿ ಪೋಲಿಸರ ಮೇಲೆ ಚಾಕು ತೋರಿಸಿ ಹಲ್ಲೆಗೆ ಮುಂದಾಗಿದ್ದಾನಂತೆ..? 
ತಕ್ಷಣ ಎದುರಾಗುವ ಅನಾಹುತವನ್ನು ಗಮನಿಸಿದ ಪೋಲಿಸರು ಆತ್ಮರಕ್ಷಣೆಗೆ ಚಾಕು ಇರಿಯಲು ಬಂದ ದುಷ್ಕರ್ಮಿಯ ಕಾಲಿಗೆ ಗುಂಡು ತೂರಿಸಿದ್ದಾರೆ.  

ವಿನೋಬಾನಗರ ಠಾಣೆ ಪಿಎಸ್‍ಐ ಮಂಜುನಾಥ್ ಆರೋಪಿಗೆ ಶರಣಾಗಲು ತಿಳಿಸಿದ್ದಾರೆ ಆತ ಪ್ರತಿರೋಧ ಒಡ್ಡಿದ ಕಾರಣಕ್ಕೆ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರಂತೆ...? ಆದರೂ ಪೊಲೀಸರಿಗೆ ಹೆದರದೆ ಅವರನ್ನೆ ಚಾಕುವಿನಿಂದ ಇರಿಯೋಕೆ ಮುಂದಾದ ಆರೋಪಿ  ಜಬೀವುಲ್ಲಾನ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಗುಂಡು ತಗುಲಿದ ಜಬೀವುಲ್ಲಾನನ್ನು ಮೆಗ್ಗಾನ್ ಆಸ್ಪತ್ರೆಯ ಖೈದಿಗಳ ವಾರ್ಡ್ ಶಿಫ್ಟ್ ಮಾಡಲಾಗಿದೆ.

ಈ ಘಟನೆ ಎನ್ ಟಿ ರಸ್ತೆಯ ಫಾಲಕ್ ಪ್ಯಾಲೇಸ್ ಹಿಂಭಾಗದ ಪ್ರದೇಶದಲ್ಲಿ ನಡೆದಿದ್ದಿದೆ ಎನ್ನಲಾಗಿದೆ. 
ನಗರದಲ್ಲಿ ಕೋಮು ಗಲಭೆಯ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಎಡಿಜಿಪಿ ಅಲೋಕ್ ಕುಮಾರ್ ನಗರಕ್ಕೆ ಆಗಮಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. 
ಐಜಿಪಿ ತ್ಯಾಜರಾಜನ್, ಎಸ್‍ಪಿ ಲಕ್ಷ್ಮಿಪ್ರಸಾದ್ ಬಳಿ ಮಾಹಿತಿಯನ್ನು ಕಲೆಹಾಕಿದ್ದಾರೆ.ಬೈಕ್ ಗಳಲ್ಲಿ ತ್ರಿಬಲ್ ರೈಡಿಂಗ್ ಮತ್ತು ಅನಗತ್ಯ ಸಂಚಾರ ಮಾಡುವವರನ್ನು ಪರಿಶೀಲಿಸಲಾಗುತ್ತಿದೆ. ಆಟೋಗಳ ಮೇಲು ಹದ್ದಿನ ಕಣ್ಣಿಡಲಾಗಿದೆ. 

 ಪ್ರೇಮ್ ಸಿಂಗ್  ಎಂಬಾತನಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನದೀಮ್ (25), ಅಬ್ದುಲ್ ರೆಹಮಾನ್ (25)  ಎನ್ನುವ ಮತ್ತಿಬ್ಬರು ಆರೋಪಿತರನ್ನು  ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಮುಂದುವರೆದಿದೆ

ಸದ್ಯದ ಪರಿಸ್ಥಿತಿಯಲ್ಲಿ ಶಿವಮೊಗ್ಗ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಪರಿಸ್ಥಿತಿಯನ್ನು ಹತೋಟಿಗೆ ತರುವ ಸಲುವಾಗಿ ಶಿವಮೊಗ್ಗ ನಗರ ಹಾಗೂ ಭದ್ರಾವತಿ ನಗರ ಪ್ರದೇಶದಲ್ಲಿ ಆ.18ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 144 ಸೆಕ್ಷನ್ ಜಾರಿ ಹಿನ್ನೆಲೆ ಶಿವಮೊಗ್ಗ ಹಾಗೂ ಭದ್ರಾವತಿ ನಗರದ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ, ಕುವೆಂಪು ವಿವಿಗೆ ಆಗಸ್ಟ್ 16 ರಂದು ರಜೆ ಘೋಷಣೆ ಮಾಡಲಾಗಿದೆ.

ಗಲಾಟೆ ನಡೆದ ಪ್ರದೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ವಾಹನ ಸವಾರರಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ನಗರದಲ್ಲಿ ಬಂದೋಬಸ್ತ್ ಗಾಗಿ ಈ ಹಿಂದೆ ಇಲ್ಲೇ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಅಧಿಕಾರಿಗಳನ್ನು ಕರೆಸಿಕೊಳ್ಳಲಾಗಿದೆ. 10 ಕೆಎಸ್‍ಆರ್ ಪಿ, 10 ಡಿಎಆರ್ ಹಾಗೂ ಆರ್‍ಎಎಫ್ ತುಕಡಿ ಜಿಲ್ಲೆಗೆ ಆಗಮಿಸಿದ್ದು ನಗರದಲ್ಲೇಡೆ ಪೋಲಿಸರ ಸರ್ಪಗಾವಲಿನಲ್ಲಿ ಹದ್ದಿನ ಕಣ್ಣಿಡಲಾಗಿದೆ.

Post a Comment

0 Comments