ಹರಿಹರ ನಗರದ ಹರಿಜನರ ರುದ್ರಭೂಮಿ ಕಾಮಗಾರಿಯಲ್ಲಿ ಕಳಪೆ;ಬಿಎಸ್ಪಿಯಿಂದ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ.!!!

ಹರಿಹರ:ಹರಿಹರ ನಗರದಲ್ಲಿರುವ ಹರಿಜನ ರುದ್ರಭೂಮಿಗೆ ಹೋಗುವ ರಸ್ತೆಯು ತೆಗ್ಗು ಗುಂಡಿಗಳಿಂದ ಕೂಡಿದ್ದು ಒಳ ಚರಂಡಿಯ ಮೇಲೆ ಹಾಕಲಾಗಿರುವ ಚಾವಣಿಗಳು ಮುರಿದು ಹೋಗಿರುವ ಪರಿಣಾಮ  ರಸ್ತೆಯ ತುಂಬೆಲ್ಲ ನೀರು ನಿಂತು ರಸ್ತೆಗಳು ಕಾಲುವೆಗಳಂತಾಗಿವೆ.ಕೆಸರು ಗದ್ದೆಯಂತಾಗಿರುವ ರಸ್ತೆಯಲ್ಲಿ ಮೃತದೇಹವನ್ನು ತೆಗೆದುಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಕಳೆದ ಮೂರು ವರ್ಷಗಳಿಂದ  ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ಮನವಿಯನ್ನು ಸಲ್ಲಿಸುತ್ತಲೇ ಬಂದಿದ್ದೇವೆ ಆದರೆ ಚುನಾಯಿತ ಜನಪ್ರತಿನಿಧಿಗಳಾಗಲಿ ನಗರಸಭೆಯ ಆಡಳಿತವಾಗಲಿ ಇದರತ್ತ ಗಮನ ಹರಿಸದೇ ಇರುವುದು ಹರಿಜನರ ಮೇಲೆ ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದು ಬಿಎಸ್ ಪಿ ಜಿಲ್ಲಾಧ್ಯಕ್ಷ ಹನುಮಂತಪ್ಪನವರು ಖಾರವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದರು.
ಹರಿಜನರ ರುದ್ರಭೂಮಿಗಾಗಿ ಕಳೆದ 4ವರ್ಷಗಳ ಹಿಂದೆ 1ಕೋಟಿ ಇಪ್ಪತ್ತು ಲಕ್ಷ ರೂಪಾಯಿಗಳ ಅನುದಾನ ಬಿಡುಗಡೆಯಾಗಿದೆ.ರುದ್ರಭೂಮಿಯ ಅಭಿವೃದ್ಧಿ ಕಾಮಗಾರಿಯ ಜವಾಬ್ದಾರಿಯನ್ನು ಲ್ಯಾಂಡ್ ಆರ್ಮಿ ವಹಿಸಿಕೊಂಡಿದ್ದು ಈ ಇಲಾಖೆ ವತಿಯಿಂದ ನಡೆದಿರುವಂಥ ಅಷ್ಟು ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದೆ.ಅಲ್ಲದೆ ಇನ್ನೂ ಕಾಮಗಾರಿಗಳನ್ನು ಪರಿಪೂರ್ಣವಾಗಿ ಪೂರ್ಣಗೊಳಿಸಿಲ್ಲ .ಕುಡಿಯುವ ನೀರಿನ ವ್ಯವಸ್ಥೆ ,ಶೌಚಾಲಯದ ವ್ಯವಸ್ಥೆ, ಮೃತದೇಹ ಸುಡುವ ವ್ಯವಸ್ಥೆ, ಸುತ್ತಲೂ ಕಾಂಪೌಂಡ್ ಗೇಟಿನ ವ್ಯವಸ್ಥೆ, ರಸ್ತೆ ಮಧ್ಯದಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚದೇ ಇರುವುದು ಇದರಿಂದ ರುದ್ರಭೂಮಿಯ ಸುತ್ತಲೂ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ನೀರು ನಿಂತು ಕೆಸರು ಗದ್ದೆಯಂತಾಗಿದೆ.ಲ್ಯಾಂಡ್ ಆರ್ಮಿಯವರು ಕಳಪೆ ಕಾಮಗಾರಿಗಳ ಪರಿಣಾಮ ರುದ್ರಭೂಮಿಯಲ್ಲಿ ಮೃತದೇಹದ ಸುಡುವುದು ಕಷ್ಟಕರವಾಗುತ್ತಿದೆ ಎಂದು ಬಿಎಸ್ ಪಿ ರಾಜ್ಯ ಕಾರ್ಯದರ್ಶಿ ಮಲ್ಲೇಶ್ ಅವರು ಲ್ಯಾಂಡ್ ಆರ್ಮಿ ಕಳಪೆ ಕಾಮಗಾರಿ ಸಂಬಂಧಿಸಿದಂತೆ ತಮ್ಮ ಆಕ್ರೋಶವನ್ನು ಹೊರಹಾಕಿದರು.

ಮಾನ್ಯ ತಾಲ್ಲೂಕು ದಂಡಾಧಿಕಾರಿಗಳು ಕೂಡಲೇ ನಗರದ ಹೊರವಲಯದಲ್ಲಿರುವ ಹರಿಜನರ ರುದ್ರಭೂಮಿ ಕಾಮಗಾರಿಗೆ ಸಂಬಂಧಿಸಿದಂತೆ ಲ್ಯಾಂಡ್ ಆರ್ಮಿ ಇವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ .ಅಲ್ಲದೆ ಮೃತ ದೇಹ ಸುಟ್ಟ ನಂತರ ಕೈ ಕಾಲುಗಳನ್ನು ತೊಳೆಯಲು ರುದ್ರಭೂಮಿಯಲ್ಲಿ ನೀರಿನ ವ್ಯವಸ್ಥೆ ಇಲ್ಲದ ಕಾರಣ ತಗ್ಗು ಗುಂಡಿಯಲ್ಲಿ ಇರುವಂಥ ನೀರಿನಲ್ಲೇ ಕೈಕಾಲು ತೊಳೆಯುವ  ಪರಿಸ್ಥಿತಿ ಇದೆ .ಈ ಎಲ್ಲ ಅಂಶಗಳ ಮೇಲೆ ಸಮಗ್ರವಾದ ತನಿಖೆ ನಡೆಸಿ ಸಂಬಂಧಿಸಿದವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವ ಮೂಲಕ ಹರಿಜನರ ಸಮುದಾಯದ ಬಂಧುಗಳಿಗೆ ನ್ಯಾಯ ಒದಗಿಸಿಕೊಡುವಂತೆ ಮತ್ತೊಮ್ಮೆ ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಬಹುಜನ ಸಮಾಜ ಪಾರ್ಟಿ ಅವರ ಮನವಿಯನ್ನು ಸ್ವೀಕರಿಸಿದ ತಾಲ್ಲೂಕು ದಂಡಾಧಿಕಾರಿ ಡಾ.ಅಶ್ವತ್ಥ್ ಅವರು ಸ್ಥಳದಲ್ಲೇ ಸಂಬಂಧಿಸಿದ ಇಲಾಖೆ ವರೆಗೆ ಹರಿಹರ ನಗರದ ನಿಲ್ಲುವ ಹರಿಜನರ ರುದ್ರ ಭೂಮಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಬೇಕು ಮತ್ತು ಕ್ರಿಯಾಯೋಜನೆಯಲ್ಲಿ ಇರುವಂತೆ ಎಲ್ಲಾ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಸ್ಥಳದಲ್ಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.ಅಲ್ಲದೆ ಬಹುಜನ ಸಮಾಜ ಪಾರ್ಟಿ ಅವರ ಇತರ ಸಮಸ್ಯೆಗಳತ್ತ ಮುಂದಿನ ದಿನದಲ್ಲಿ ಗಮನ ಹರಿಸಲಾಗುವದು ಎಂಬ ಭರವಸೆಯನ್ನು ನೀಡಿದರು.ಹರಿಹರ ತಾಲ್ಲೂಕು ದಂಡಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿರುವ ಕಾರಣ ಮುಂದಿನ ದಿನದಲ್ಲಿ ಹರಿಹರ ನಗರದಲ್ಲಿರುವ ಹರಿಜನರ ರುದ್ರ ಭೂಮಿಗೆ ಸಂಬಂಧಿಸಿದಂತೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಂಡು ಹೋಗುತ್ತಾರೆ ಎಂಬ ಭರವಸೆಯನ್ನು  ಬಹುಜನ ಸಮಾಜ ಪಾರ್ಟಿಯ ಕಾರ್ಯಕರ್ತರಿಗೆ ನೀಡಿದ್ದಾರೆ.

ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಹುಜನ ಸಮಾಜ ಪಾರ್ಟಿ ತಾಲ್ಲೂಕು ಅಧ್ಯಕ್ಷರಾದ ಎಸ್.ಕೇಶವ,ಎಂ. ಪಿ ಆನಂದ,ಮಹಮ್ಮದ್ ಶೇಖ್, ಮಂಜುನಾಥ್ ಕೊಪ್ಪಲ,ಆರ್ ಶ್ರೀನಿವಾಸ್,ಅಣ್ಣಪ್ಪ ಅಜ್ಜೇರ್, ಮಂಜು ಪೇಂಟರ್, ಪ್ರಕಾಶ್ ಮಲೆಬೆನ್ನೂರು ,ಕೃಷ್ಣ ಪೂಜಾರ್, ಮೋಹನ್, ಹನುಮಂತಪ್ಪ, ಪೇಂಟರ್ ಗುರು,ಉಪಸ್ಥಿತರಿದ್ದರು.

Post a Comment

0 Comments