ದೇಶಭಕ್ತರೇ ಎಲ್ಲಿದ್ದೀರಾ.? ರಾಷ್ಟ್ರಧ್ವಜಕ್ಕೆ ಅವಮಾನವಾಗಿದೆ.ಗಂಭೀರವಾಗಿ ತೆಗೆದುಕೊಳ್ಳದ ಅಧಿಕಾರಿಗಳು..!


ಸಾಗರ:-ದೇಶಭಕ್ತರೇ.! ಮೀನು,ಮಾಂಸ,ಮೊಟ್ಟೆ ವಿಚಾರದಲ್ಲೇ ಮುಳುಗಬೇಡಿ.ಇತ್ತ ಸ್ವಲ್ಪ ಗಮನಹರಿಸಿ.ತಾಲ್ಲೂಕಿನ ತ್ಯಾಗರ್ತಿ ಗ್ರಾಮ ಪಂಚಾಯತಿಯ ಸಾರ್ವಜನಿಕರ ಆರೋಗ್ಯ ಕೇಂದ್ರದ ಮೇಲೆ ಆಗಸ್ಟ್ ಹದಿನೈದರಂದು ರಾಷ್ಟ್ರಧ್ವಜವನ್ನ ಧ್ವಜಾರೋಹಣ ಮಾಡಲಾಯಿತು.ಧ್ವಜಾರೋಹಣ ಮಾಡಲ್ಪಟ್ಟ ರಾಷ್ಟ್ರಧ್ವಜವನ್ನು ಸೂರ್ಯಾಸ್ತವಾಗುವ ಮೊದಲೇ ಧ್ವಜವನ್ನ ಸಕಲ ಗೌರವದೊಂದಿಗೆ ಕೆಳಗಿಳಿಸಬೇಕು.ಆದರೆ ತ್ಯಾಗರ್ತಿಯ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಧ್ವಜಾರೋಹಣ ಮಾಡಲ್ಪಟ್ಟ ರಾಷ್ಟ್ರಧ್ವಜವನ್ನ ಯಾರೋ ಕಿಡಿಗೇಡಿಗಳು ಮಧ್ಯಾಹ್ನ ಮೂರು ಗಂಟೆಗೆ ಕೆಳಗಿಳಿಸಿದ್ದಾರೆ.ಅಷ್ಟೇ ಅಲ್ಲದೆ ರಾಷ್ಟ್ರಧ್ವಜವನ್ನ ಧ್ವಜಾರೋಹಣ ಮಾಡಲ್ಪಟ್ಟ ಹಗ್ಗದ ಜೊತೆ ಕಿಡಿಗೇಡಿಗಳು ಎಸೆಯುವ ಮೂಲಕ ತಮ್ಮ ಕ್ರೌರ್ಯವನ್ನು ಮೆರೆದಿದ್ದಾರೆ.

ರಾಷ್ಟ್ರಧ್ವಜವನ್ನು ಅವಮಾನ ಮಾಡಿದ ಕಿಡಿಗೇಡಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕಾದ ಜವಾಬ್ದಾರಿ ಸ್ಥಾನದಲ್ಲಿರುವ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.ರಾಷ್ಟ್ರಧ್ವಜಕ್ಕೆ ಅವಮಾನದ ವಿಚಾರ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿತ್ತು .ಆದರೆ ಅಧಿಕಾರಿಗಳು ವಿಳಂಬ ತಂತ್ರವನ್ನು ಅನುಸರಿಸುತ್ತಿದ್ದಾರೆ.?ಈಗಾಗಲೇ ಹದಿನೈದು ದಿನ ಕಳೆದಿದೆ ಇದುವರೆಗೂ ಕಿಡಿಗೇಡಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ದಿನ ದೂಡುತ್ತಿದ್ದಾರೆ.
ರಾಷ್ಟ್ರಧ್ವಜ,ರಾಷ್ಟ್ರ ಲಾಂಛನಗಳಿಗೆ ಅವಮಾನವಾದಂತಹ ಸಂದರ್ಭದಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು .ತಪ್ಪಿತಸ್ಥರನ್ನು ಕೂಡಲೇ ಹುಡುಕಿ ಬಂಧಿಸಬೇಕು.ಇಂತಹ ಯಾವುದೇ ಕೆಲಸಗಳು ಸಾಗರ ತಾಲ್ಲೂಕಿನಲ್ಲಿರುವಂತಹ ಅಧಿಕಾರಿಗಳಿಂದ ಆಗುತ್ತಿಲ್ಲ .ಹಾಗಾದರೆ ಈ ಸರ್ಕಾರಿ ಅಧಿಕಾರಿಗಳಿಗೆ ರಾಷ್ಟ್ರ, ರಾಷ್ಟ್ರಧ್ವಜದ ಮೇಲೆ ಗೌರವವಿಲ್ಲವೇ ?ನಿಜವಾಗಲೂ ಗೌರವವಿದ್ದಿದ್ದರೆ ರಾಷ್ಟ್ರಧ್ವಜಕ್ಕೆ ಅವಮಾನವಾದಂತ ವಿಚಾರ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರು.ನಾವು ಸುದ್ದಿ ಮಾಡಿದ್ದೇ ಬಂತು. ಆದರೆ ಅಧಿಕಾರಿಗಳಿಂದ ಮಾತ್ರ ಯಾವುದೇ ರೀತಿಯ ಪ್ರತ್ಯುತ್ತರಗಳು ಬರುತ್ತಿಲ್ಲ ಇದು ಅತ್ಯಂತ ಬೇಸರದ ಸಂಗತಿ .

ಇನ್ನೂ ತ್ಯಾಗರ್ತಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಈ ವಿಚಾರಕ್ಕೆ ಸಂಬಂಧಿಸಿದಂತೆ ಫೋನ್ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ .ಇವರು ಉಪಾಧ್ಯಕ್ಷರ ಅಣತಿಯಂತೆ ಕೆಲಸ ಮಾಡಲು ಬಂದ ಅಧಿಕಾರಿಯೋ? ಅಥವಾ ಜನಸಾಮಾನ್ಯರಿಗಾಗಿ ಕೆಲಸ ಮಾಡಲು ಬಂದಿರುವ ಅಧಿಕಾರಿಯೇೂ? ಎಂಬ ಅನುಮಾನ ಕಾಡುತ್ತಿದೆ .ಏಕೆಂದರೆ ಎದ್ದರೂ, ಬಿದ್ದರೂ ಉಪಾಧ್ಯಕ್ಷರ ಜಪದಲ್ಲಿ ತ್ಯಾಗರ್ತಿ ಅಭಿವದ್ಧಿ ಅಧಿಕಾರಿ ಮೋಹನ್ ಮುಳುಗಿದ್ದಾರೆ .
ಅಭಿವೃದ್ಧಿ ಅಧಿಕಾರಿಗಳೇ.! ನಿಮಗೆ ಸಂಬಳ ನೀಡುವುದು ಜನಸಾಮಾನ್ಯರ ತೆರಿಗೆ ಹಣದಿಂದ.ನೀವು ಕೆಲಸ ಮಾಡಲು ಬಂದಿರುವುದು ಜನಸಾಮಾನ್ಯರಿಗಾಗಿ .ಪ್ರತಿಯೊಂದಕ್ಕೂ ಉಪಾಧ್ಯಕ್ಷರ ಜಪ ಮಾಡುವುದನ್ನು ಬಿಡಿ .ಫೋನ್ ಕರೆ ಸ್ವೀಕರಿಸುವುದನ್ನು ಕಲಿಯಿರಿ .ಪ್ರತಿ ಸಾರ್ವಜನಿಕರ ಕರೆಯನ್ನ ಸ್ವೀಕರಿಸಬೇಕು ಎಂಬುದು ಸುಪ್ರೀಂ ಕೋರ್ಟಿನ ಆದೇಶ. ಇದೆ ಇದು ನಿಮಗೆ ತಿಳಿದಿಲ್ಲವೇ ?ಕಾನೂನು, ಸಂವಿಧಾನವನ್ನು ಓದಿ ಅಧಿಕಾರದ ಕುರ್ಚಿ ಮೇಲೆ ಕುಳಿತುಕೊಂಡಿರುವ ನಿಮಗೆ ಈ ಎಲ್ಲಾ ವಿಚಾರಗಳು ತಿಳಿದಿರಬೇಕು ಅಲ್ಲವೇ ?
ಜನಪ್ರತಿನಿಧಿಗಳಿಗಾಗಿ ತಿಂಗಳಿಗೊಂದು ಸಾಮಾನ್ಯ ಸಭೆ ಇದೆ.ಆ ಸಭೆಯಲ್ಲಿ ಅವರ ಸಮಸ್ಯೆಗಳನ್ನು ಆಲಿಸಿ,ಚರ್ಚೆ ಮಾಡಿ .ಉಳಿದಂತಹ ದಿನದಲ್ಲಿ ಜನಸಾಮಾನ್ಯರಿಗಾಗಿ ಮೀಸಲಿಡಿ. ಅವರೊಂದಿಗೆ ಸೌಜನ್ಯದೊಂದಿಗೆ ವರ್ತಿಸುವುದನ್ನು ಕಲಿಯಿರಿ .ಜನಪ್ರತಿನಿಧಿಯ ಕುರ್ಚಿ ಕೇವಲ 5ವರ್ಷ ನಿಮ್ಮ ಕುರ್ಚಿ ನಿವೃತ್ತಿ ಹೊಂದುವವರೆಗೂ .ಕುರ್ಚಿ ಮೇಲೆ ಕುಳಿತುಕೊಂಡ ನೀವು ಜನಸಾಮಾನ್ಯರ ಸಂಬಳ ಪಡೆಯುತ್ತಿರುವ ನೀವು ಸಾಧ್ಯವಾದಷ್ಟು ಜನರಿಗಾಗಿ ನೆನಪಿನಲ್ಲಿ ಉಳಿಯುವಂಥ ಕೆಲಸ ಮಾಡಿ .
ತ್ಯಾಗರ್ತಿ ಗ್ರಾಮ ಪಂಚಾಯ್ತಿ.ಅಂದರೆ ನಿಮ್ಮ ವ್ಯಾಪ್ತಿಯಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮೇಲೆ ಹಾರಿಸಲ್ಪಟ್ಟ ರಾಷ್ಟ್ರಧ್ವಜಕ್ಕೆ ಕಿಡಿಗೇಡಿಗಳಿಂದ ಅವಮಾನವಾಗಿದೆ .ಇದಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿ ಕೈತೊಳೆದುಕೊಂಡರೆ ಸಾಲದು ಮುಂದಿನ ಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ .ಆ ಮೂಲಕ ನಿಮ್ಮ ದೇಶಭಕ್ತಿಯನ್ನು ಮೆರೆಯಿರಿ ಇದು ನೀವು ರಾಷ್ಟ್ರಧ್ವಜಕ್ಕೆ ನೀಡುವ ಗೌರವವಾಗುತ್ತದೆ .
ದೇಶಭಕ್ತರೇ ರಾಷ್ಟ್ರಧ್ವಜಕ್ಕೆ ಅವಮಾನ ವಾದ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಹೋರಾಟ ಮಾಡಬೇಕಾಗಿತ್ತು .ಆದರೆ ಮೀನು, ಮಾಂಸ, ಮೊಟ್ಟೆಯಲ್ಲಿ ಮುಳುಗಿ ಹೋಗಿದ್ದೀರಾ..!

ಈಗಲಾದರೂ ಸುದ್ದಿಯ ವರದಿಯಿಂದ ಎಚ್ಚೆತ್ತುಕೊಂಡು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ .

ಯಾರೇ ಆಗಲಿ, ಎಷ್ಟೇ ಪ್ರಭಾವಶಾಲಿಯಾಗಿರಲಿ ರಾಷ್ಟ್ರ, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದು ಕಂಡು ಬಂದರೆ ಅವರ ಮೇಲೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಬೇಕು ಇದು ನಮ್ಮ ಮಾಧ್ಯಮದ ಆಕ್ರೋಶದ ಆಗ್ರಹವಾಗಿದೆ .

ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳುವವರೆಗೂ ನಿರಂತರವಾದ ಸುದ್ದಿಯನ್ನ ನಮ್ಮ ಮಾಧ್ಯಮ ಪ್ರಕಟಿಸುತ್ತಲೇ ಇರುತ್ತದೆ.ಇದು ದೇಶಕ್ಕಾಗಿ,ದೇಶದ ಜನಸಾಮಾನ್ಯರಿಗಾಗಿ ಮಿಡಿಯುವಂಥ ಸುದ್ದಿ ಮಾಧ್ಯಮವಾಗಿದೆ........

ಪ್ರಕಾಶ್ ಮಂದಾರ 
ಸಂಪಾದಕರು 
8880499904

Post a Comment

0 Comments