75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಮಠದ ಸಭಾಂಗಣದಲ್ಲಿ ರಾಜ್ಯ ಒಲಿಂಪಿಕ್ ಅಸೋಸಿಯೇಷನ್ ಕುಸ್ತಿ ಕಮಿಟಿ ಆಯೋಜಿಸಿದ್ದ 3 ದಿನಗಳ ಕರ್ನಾಟಕ ರಾಜ್ಯ ಕುಸ್ತಿ ತಂಡದ ಆಯ್ಕೆ ಕಾರ್ಯಕ್ರಮನ್ನು ಉದ್ಘಾಟಿಸಲಾಯಿತು....
ಕನಕ ಗುರು ಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯದಲ್ಲಿ ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್. ರಾಮಪ್ಪ, ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್
ಖ್ಯಾತ ಪರಿಸರವಾದಿಗಳು, ಐ ಕೇರ್ ಬ್ರಿಗೇಡ್ ಮತ್ತು ಜಯ ಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಯುತ ಬಿ.ಗುಣರಂಜನ್ ಶೆಟ್ಟಿ,ಭಾರತೀಯ ಕುಸ್ತಿ ಸಂಘದ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿಗಳಾದ ವಿ ಎನ್.ಪ್ರಸೂದ್ ರವರ ಘನ ಉಪಸ್ಥಿತಿಯಲ್ಲಿ ನೆರವೇರಿತು,
ಈ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಗೌರವಾನ್ವಿತ ಸದಸ್ಯರಾದ ಶ್ರೀ ಯುತ ಪ್ರಸಾದ್ ಶೆಟ್ಟಿ, ರಾಜ್ಯ ಮುಖ್ಯ ಕಾರ್ಯ ನಿರ್ವಾಹಕರಾದ ಜೆ. ಶ್ರೀನಿವಾಸ್, ಆಂಧ್ರಪ್ರದೇಶದ ಕುಸ್ತಿ ಒಲಿಂಪಿಕ್ ಅಸೊಸಿಯೇಷನ್ ಅಧ್ಯಕ್ಷರಾದ ಪಿ.ಪುರುಷೋತ್ತಮನ್, ತಮಿಳುನಾಡು ರಾಜ್ಯದ ಕುಸ್ತಿ ಒಲಿಂಪಿಕ್ ಅಸೊಸಿಯೇಷನ್ ಪ್ರದಾನ ಕಾರ್ಯದರ್ಶಿ ಎಂ.ಲೋಕನಾಥನ್, ರಾಷ್ಟ್ರೀಯ ಕುಸ್ತಿ ತರಭೇತುದಾರರಾದ ವಿನೋದ್,ಸುರೇಶ್ ಚಂದಾಪುರ,ಕುಮಾರ್, ಮತ್ತು ಮೂರ್ತಿ ಗಿರಿನಗರ, ಉಪಸ್ಥಿತರಿದ್ದರು ..
0 Comments