ಹರಿಹರ:ಹರಿಹರ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ.ಪ್ರಾಥಮಿಕ ಆರೋಗ್ಯ ಕೇಂದ್ರ ಬಿಳಸನೂರು. ಸಾರ್ವಜನಿಕರ ಆಸ್ಪತ್ರೆ ಹರಿಹರ. ಐ.ಸಿ.ಬಿ.ಸಿ. ವಿಭಾಗ ದಾವಣಗೆರೆ ರಕ್ತ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ರಾಜನಹಳ್ಳಿ ಉಪಕೇಂದ್ರ ಹಾಗೂ ಗ್ರಾಮ ಪಂಚಾಯತಿ ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ "ರಕ್ತದಾನ ಮಾಡಿ ಜೀವ ಉಳಿಸಿ" ಎಂಬ ಘೋಷ ವಾಕ್ಯದಡಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಬಹು ದಿನಗಳ ನಂತರ ಒಂದು ಅರ್ಥಗರ್ಭಿತವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ರಕ್ತ ದಾನಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ ಎಂಬೋದು ತೋರಿಸಿಕೊಟ್ಟಂತಾಗಿದೆ ಎಂದರು.
ರಾಜನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಉದ್ಘಾಟಕರಾಗಿ ಆಗಮಿಸಿದ ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ M.V. ಹೊರಕೇರಿ ಅವರು ಮಾತನಾಡಿ ಎಂದು ರಕ್ತದಾನ ಮಾಡಿದವರ ರಕ್ತವನ್ನ ತುರ್ತು ಸಂದರ್ಭದಲ್ಲಿ ಅಗತ್ಯಕ್ಕನುಸಾರವಾಗಿ ರೋಗಿಗಳಿಗೆ ಉಚಿತವಾಗಿ ರಕ್ತ ನೀಡುವ ಮೂಲಕ ಅವರನ್ನ ಪ್ರಾಣಾಪಾಯದಿಂದ ಕಾಪಾಡಲು ಸಹಾಯವಾಗುತ್ತದೆ. ಆರೋಗ್ಯವಂತರಾಗಿರುವ ಎಲ್ಲಾ ವ್ಯಕ್ತಿಗಳು ಪ್ರತಿ 3ತಿಂಗಳಿಗೊಮ್ಮೆ ರಕ್ತವನ್ನು ನೀಡಬಹುದು ಎಂದರು .
ಈಗಾಗಲೇ ಬಿಳಸನೂರು ಆರೋಗ್ಯ ಕೇಂದ್ರದ ಸಿಬ್ಬಂದಿಗಳು,ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು,ಸ್ವಯಂ ಕಾರ್ಯಕರ್ತೆಯರು ಬಿಳಸನೂರು ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಪ್ರತಿ ಮನೆ ಮನೆಗೂ ತೆರಳಿ ಆರೋಗ್ಯವಂತ ವ್ಯಕ್ತಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಿದ್ದರಿಂದ ಇಂದು 41 ಯೂನಿಟ್ ಗೂ ಹೆಚ್ಚಿನ ರಕ್ತವನ್ನು ಸಂಗ್ರಹ ಮಾಡಲು ಸಾಧ್ಯವಾಯಿತು ಎಂದರು.
ರಾಜನಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಚೈತ್ರಾ ಲಂಕೇಶ್ ಅವರ ಅಧ್ಯಕ್ಷತೆಯಲ್ಲಿ ಡಾಕ್ಟರ್ ಆಶಾ S.A, ಶೈಲಾ. ಎಂ, ಡಾ.ವಿಶ್ವನಾಥ್, ಶಕುಂತಲಾ ಇವರ ಉಪಸ್ಥಿತಿಯಲ್ಲಿ ಗ್ರಾಮ ಪಂಚಾಯತಿಯ ಸದಸ್ಯರಾದ ಸಿದ್ಧಾರೂಢ, ಪರಶುರಾಮಪ್ಪ, ಜಯಪ್ಪ ಹಾಗೂ ಪಂಚಾಯತಿ ಕಾರ್ಯದರ್ಶಿ ಚಮನ್ ಸಾಬ್, ಲೆಕ್ಕಪರಿಶೋಧಕ ರಾಜಪ್ಪ,ಬಿಳಸನೂರು ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಹಿರಿಯ ಆರೋಗ್ಯ ಸಹಾಯಕಾದ ಸುಧಾ.ಬಿ,ಮಂಜುನಾಥ್ ಡಿ ,A.K ನೀಲಪ್ಪ, ಅಕ್ಷಯ್ ಕುಮಾರ್,ರಾರ್ಲಿಸಾ,ನಾಗರತ್ನ, ಅಸ್ಮಾ, ನಾಗಮ್ಮ, ರಮ್ಯಾ, ಪ್ರಿಯಾಂಕಾ ಸೇರಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
0 Comments